Advertisement
90 ವರ್ಷದ ಭೂಮಿಗೌಡ ಅವರು, ಮಧ್ಯಮ ವರ್ಗದ ಕುಟುಂಬದಿoದ ಬಂದು ಕೋಲಾಟ ಕಲೆಗಾಗಿ ಐದು ದಶಕಗಳಿಂದ ತಮ್ಮ ಜೀವನ ಸವೆಸಿದ್ದಾರೆ. ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದ ಕಥೆಗಾರ ಚನ್ನೇಗೌಡ ಪುತ್ರರಾಗಿ ಜನಿಸಿದ ಭೂಮಿಗೌಡರು ತಮ್ಮ 23 ವಯಸ್ಸಿನಿಂದ ಕೋಲಾಟ ಕಲೆಯನ್ನು ಮೈಗೂಡಿಸಿಕೊಂಡರು.
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ರಾತ್ರಿ ಪೂರ್ತಿ ಕಥೆಯೊಂದಕ್ಕೆ ಜಾನಪದ ಹಾಡು ಕಟ್ಟಿ ಕೋಲಾಟ ನೃತ್ಯ ಪ್ರದರ್ಶನ ಮಾಡುತ್ತಾ ಜನ ಮನ್ನಣೆ ಗಳಿಸಿದ್ದಾರೆ. ಪ್ರದರ್ಶನದ ವೇಳೆ ಜನರಿಗೆ ಕೊಂಚವೂ ನಿರಾಸೆಯಾಗದಂತೆ ತಮ್ಮ ತಂಡದ ಮೂಲಕ ಮನರಂಜನೆ ನೀಡುತ್ತಾ ಬಂದಿದ್ದಾರೆ. ಇದನ್ನೂ ಓದಿ:ಚಾಮರಾಜನಗರದ ಸೋಬಾನೆ ಪದದ ಹೊನ್ನಮ್ಮ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ
Related Articles
Advertisement
ಬೆನ್ನು ಮೂಳೆ ಮುರಿತ:ಜಿಲ್ಲೆಯಲ್ಲಿ 23 ಮಂದಿ ಶಿಷ್ಯರನ್ನು ಹೊಂದಿರುವ ಅವರಿಗೆ ಕಳೆದ 8 ವರ್ಷಗಳ ಹಿಂದೆ ಸ್ವಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಕಲೆಯನ್ನು ಮುಂದುವರೆಸುವ ಆಸೆ ಹೊಂದಿರುವ ಅವರು ತಮ್ಮ ಶಿಷ್ಯರ ಮೂಲಕ ಕೋಲಾಟ ಕಲೆಯನ್ನು ಇಂದಿನ ಮಕ್ಕಳವರೆಗೂ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ:2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ ಸ್ವಗ್ರಾಮದಲ್ಲಿಯೇ ಕಲಾ ತಂಡವನ್ನು ರಚಿಸಿರುವ ಅವರ ಶಿಷ್ಯ ಶೇಖರ್ ಎಂಬುವರು ಪುಟ್ಟ ಮಕ್ಕಳಿಂದ ಹಿಡಿದು ಮಧ್ಯವಯಸ್ಕರವರೆಗೂ ಕೋಲಾಟ ಕಲೆಯನ್ನು ಭೂಮಿಗೌಡರ ಮಾರ್ಗದರ್ಶನದಲ್ಲಿ ಮುಂದುವರಸಿದ್ದಾರೆ. ಅಪಾರವಾದ ಶ್ರೀಮಂತಿಕೆ ಇಲ್ಲದಿದ್ದರೂ ಮಧ್ಯಮ ವರ್ಗದ ಕುಟುಂಬದವರಾದ ಭೂಮಿಗೌಡರು ಯಾವುದೇ ಗುರುದಕ್ಷಿಣೆ ಇಲ್ಲದೆ ಸಾವಿರಾರು ಮಂದಿಗೆ ಕೋಲಾಟ ಕಲೆ ಕಲಿಸಿದ್ದು, ಸುಮಾರು 50ಕ್ಕೂ ಹೆಚ್ಚು ಸಂಘ-ಸoಸ್ಥೆಗಳು ಇವರ ಕಲೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿವೆ. ಇದೀಗ ಅವರ ಕಲಾ ಸೇವೆ ಗುರುತಿಸಿರುವ ಕರ್ನಾಟಕ ಜಾನಪದ ಅಕಾಡೆಮಿ 2020ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಗೌರವ ಸಲ್ಲಿಸಿದೆ.