Advertisement

ಭುಜಂಗ ಪಾರ್ಕ್‌: ರೇಡಿಯೋ ಟವರ್‌ಗೆ ಚಾಲನೆ

10:19 PM Oct 02, 2020 | mahesh |

ಉಡುಪಿ: ಸುಂದರ ಸಂಜೆ, ಪಾರ್ಕ್‌ನಲ್ಲಿ ಹಾಯಾಗಿ ಕುಳಿತು ರೇಡಿಯೋ ಕೇಳಬೇಕು ಎಂಬ ಆಕಾಂಕ್ಷೆ ಹೊಂದಿರುವವರಿಗೆ ಇದೀಗ ಶುಭ ಸುದ್ದಿ. ಉಡುಪಿಯ ಪ್ರಸಿದ್ಧ ರೇಡಿಯೋ ಟವರ್‌ ಮತ್ತೆ ಕಾರ್ಯಾರಂಭ ಮಾಡಿದೆ.

Advertisement

ಗಾಂಧಿ ಜಯಂತಿಯಂದು ಲೋಕಾರ್ಪಣೆ
ಅಜ್ಜರಕಾಡುವಿನ ಭುಜಂಗ ಪಾರ್ಕ್‌ ನಲ್ಲಿ 1938ರಲ್ಲಿ ನಿರ್ಮಾಣಗೊಂಡಿರುವ ರೇಡಿಯೋ ಟವರ್‌ ಕೆಲವು ವರ್ಷಗಳಿಂದ ಕಾರ್ಯ ನಿರ್ವಹಣೆ ಸ್ಥಗಿತಗೊಳಿಸಿತ್ತು. ಕಳೆದ ಬಾರಿಯ ಗಾಂಧಿ ಜಯಂತಿ ಕಾರ್ಯಕ್ರಮದಂದು ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್‌ ಇದನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲು ಸೂಚಿಸಿದ್ದರು. ಅದರಂತೆ ಶುಕ್ರವಾರ ಗಾಂಧಿ ಜಯಂತಿ ಪ್ರಯುಕ್ತ ಶಾಸಕ ಕೆ.ರಘುಪತಿ ಭಟ್‌ ಅವರು ಉದ್ಘಾಟನೆ ನೆರವೇರಿಸಿದರು.

ಸಂಜೆ 5.30ಯಿಂದ 8ರವರೆಗೆ ಅವಕಾಶ
ದುರಸ್ತಿಗೊಂಡಿರುವ ಈ ಟವರ್‌ ಮೂಲಕ ಪಾರ್ಕ್‌ಗೆ ಆಗಮಿಸುವ ಸಾರ್ವಜನಿಕರು, ಟವರ್‌ನ ಕೆಳಗಡೆ ಇರುವ ಕಲ್ಲುಬಂಡೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕುಳಿತು ಪ್ರತಿದಿನ ಸಂಜೆ 5.30ರಿಂದ 8 ಗಂಟೆಯವರೆಗೆ ರೇಡಿಯೋ
ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ.

ಹೊಸ ಮೈಕ್‌, ರೇಡಿಯೋ
ಟವರ್‌ನ ಹಳೆಯ ಮೂಲ ಸ್ವರೂಪದಲ್ಲಿ ಏನೂ ಬದಲಾವಣೆ ಮಾಡದೆ, ಹೊಸ ಮೈಕ್‌ಗಳು ಮತ್ತು ರೇಡಿಯೋ ಅಳವಡಿಸಲಾಗಿದೆ. ಕೇಳುಗರಿಗೆ ಹೊಸ ಅನುಭವ ನೀಡಲಿರುವ ಈ ಟವರ್‌ ಹೆಚ್ಚು ಕರ್ಕಶವಿಲ್ಲದೆ ಪಾರ್ಕ್‌ನೊಳಗಿನ ಕೇಳುಗರಿಗೆ ಮಾತ್ರ ಮಾರ್ದನಿಸಲಿದೆ. ಅಲ್ಲದೆ ಈ ಹಿಂದಿನಂತೆ ಬೆಳಗ್ಗೆ 8, ಮಧ್ಯಾಹ್ನ 12.30 ಮತ್ತು ರಾತ್ರಿ 8 ಗಂಟೆಗೆ ಟವರ್‌ ಮೂಲಕ ಅಲಾರಂ ಮೊಳಗಲಿದೆ.

ರೇಡಿಯೋ ಟವರ್‌ ನ ಉದ್ಘಾಟನೆ ನೆರವೇರಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next