Advertisement

3000 ಎಕರೆ ಜಮೀನು ನೀರಾವರಿ! ಬೂದಿಹಾಳ ಬಾಂದಾರದಿಂದ ರೈತರಿಗೆ ಅನುಕೂಲ­

08:24 PM Apr 22, 2021 | Team Udayavani |

ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಬೂ ದಿಹಾಳದಲ್ಲಿ ನಿರ್ಮಿಸಿರುವ ಬಾಂದಾರದಿಂದ ಸುಮಾರು 3 ಸಾವಿರ ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. ಸುಮಾರು ನಾಲ್ಕು ದಶಕಗಳ ರೈತರ ಕನಸು ಇದೀಗ ನನಸಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹರ್ಷ ವ್ಯಕ್ತಪಡಿಸಿದರು.

Advertisement

ನಿಪ್ಪಾಣಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್‌ ಗೆ ಗಂಗಾಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕೋವಿಡ್‌-19 ಹತೋಟಿಗೆ ಬಂದ ನಂತರ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತು ಕಣೇರಿಮಠದ ಕಾಡಸಿದ್ಧೇಶ್ವರ ಸ್ವಾಮೀಜಿಯವರನ್ನು ಕರೆಯಿಸಿ ಈ ಬಾಂದಾರದ ಉದ್ಘಾಟನೆ ನೆರವೇರಿಸಲಾಗುವುದು. ಕೋಡ್ನಿಯಲ್ಲಿ ನಿರ್ಮಿಸಿದ ಬಾಂದಾರದಲ್ಲಿ ಮೂರ್ನಾಲ್ಕು ದಿನಗಳಲ್ಲಿ ಗಂಗಾಪೂಜೆ ನೆರವೇರಿಸಲಾಗುವುದು. ಈ ಬಾಂದಾರಗಳ ಹಿನ್ನೀರಿನಿಂದ ಕೇವಲ ನಮ್ಮ ತಾಲೂಕುಗಳ ರೈತರಿಗೆ ಅಷ್ಟೇ ಅಲ್ಲದೆ ಪಕ್ಕದ ಮಹಾರಾಷ್ಟ್ರದ ಕೆಲ ಗ್ರಾಮಗಳ ರೈತರಿಗೂ ನೆರವಾಗುತ್ತಿದೆ. ಈ ಕುರಿತು ಅಲ್ಲಿಯ ರೈತರು ಕರೆ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಸಂಜಯ ಸಂಕಪಾಳ ಮಾತನಾಡಿ, ಬೇಸಿಗೆ ಕಾಲದಲ್ಲಿ ಕಾಳಮ್ಮವಾಡಿ ಡ್ಯಾಂದಿಂದ ನೀರು ಬಿಟ್ಟಾಗ ಕೇವಲ ಮೂರ್ನಾಲ್ಕು ದಿನಗಳವರೆಗೆ ಮಾತ್ರ ಇಲ್ಲಿ ನೀರು ಸಿಗುತ್ತಿತ್ತು. ನಂತರ ನದಿ ಮತ್ತೆ ಖಾಲಿಯಾಗುತ್ತಿತ್ತು. ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಖುದ್ದಾಗಿ ಬಂದು ಪರಿಶೀಲನೆ ನಡೆಸಿ, ಗ್ರಾಮಸ್ಥರು-ರೈತರೊಂದಿಗೆ ಚರ್ಚಿಸಿ ಈ ಬಾಂದಾರ ನಿರ್ಮಾಣ ಮಾಡಿದ್ದರಿಂದ ಕೋಡ್ನಿ ಗ್ರಾಮದವರೆಗೆ ಹಿನ್ನೀರು ಹೋಗಿ ಪರಿಸರದ ರೈತರಿಗೆ ಬಹಳ ಅನುಕೂಲವಾಗಿದೆ. ಅಲ್ಲದೆ ಬೂ ದಿಹಾಳ, ಕೋಡ್ನಿ, ಯಮಗರ್ಣಿ ಹಾಗೂ ನಾಗನೂರ ಗ್ರಾಮಸ್ಥರಿಗೆ ವಿಶೇಷವಾಗಿ ರೈತರಿಗೆ ಈ ಬಾಂದಾರ ವರದಾನವಾಗಿ ಪರಿಣಮಿಸಲಿದೆ ಎಂದರು.

ಹಿರಿಯ ಗ್ರಾಮಸ್ಥ ಮಹಾದೇವ ಜಾಧವ, ರಾಜು ಕಾನಡೆ ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಬಾಗಿನ ಅರ್ಪಿಸಿದರು. ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್‌ ಚಂದ್ರಕಾಂತ ಕೋಠಿವಾಲೆ, ಸಂಚಾಲಕ ಅವಿನಾಶ ಪಾಟೀಲ, ಸಮಿತ ಸಾಸನೆ, ಕಲ್ಲಪ್ಪಾ ನಾಯಿಕ, ಮ್ಹಾಳಪ್ಪಾ ಪಿಸೂತ್ರೆ, ಜ್ಯೋತಿಪ್ರಸಾದ ಜೊಲ್ಲೆ, ಬಿಜೆಪಿ ನಗರ ಘಟಕ ಅಧ್ಯಕ್ಷ ಪ್ರಣವ ಮಾನವಿ, ಗ್ರಾಮೀಣ ಘಟಕ ಅಧ್ಯಕ್ಷ ಪವನ ಪಾಟೀಲ, ತಾಲ್ಲೂಕಾ ಪಂಚಾಯಿತಿ ಉಪಾಧ್ಯಕ್ಷೆ ಅನೀತಾ ದೇಸಾಯಿ, ಗ್ರಾ.ಪಂ. ಅಧ್ಯಕ್ಷೆ ರಾಜಶ್ರೀ ಪವಾರ, ತಾತ್ಯಾ ನಾಯಿಕ, ಪ್ರಕಾಶ ಶಿಂಧೆ, ವೈಭವ ರಾಂಗೋಳೆ, ನೀತಾ ಬಾಗಡೆ, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next