Advertisement

15 ರೂ. ಪಾವತಿಸಲು ಹೇಳಿದ ಕಂಡಕ್ಟರ್‌ಗೆ ಮನಬಂದಂತೆ ಥಳಿಸಿದ ಎನ್‌ಸಿಸಿ ಕೆಡೆಟ್:‌ ದೃಶ್ಯ ಸೆರೆ

04:58 PM Sep 15, 2022 | Team Udayavani |

ಮಧ್ಯಪ್ರದೇಶ: ಪ್ರಯಾಣ ದರದ ಬಗ್ಗೆ ಕಂಡಕ್ಟರ್‌ ಹಾಗೂ ಎನ್‌ಸಿಸಿ ಕೆಡೆಟ್‌ ಜತೆ ವಾದ ಪ್ರತಿವಾದ ನಡೆದು ಸಿಟಿ ಬಸ್ ಕಂಡಕ್ಟರ್‌ಗೆ ಮನಬಂದಂತೆ ಥಳಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದ್ದು, ಸಿಸಿಟಿವಿ ದೃಶ್ಯ  ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಇದನ್ನೂ ಓದಿ:ಸೆಮಿಕಂಡಕ್ಟರ್ ಹಾಗೂ ಎಫ್‍ಎಂಸಿಜಿಗಳಿಗೆ ಪಿಎಲ್‍ಐ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ: ಸಿಎಂ

ಎನ್‌ಸಿಸಿ ಕೆಡೆಟ್‌ ಆಗಿರುವ ಪ್ರಯಾಣಿಕ 10 ರೂ. ಬಸ್‌ ದರ ಪಾವತಿಸಿದ್ದಾನೆ. ಈ ವೇಳೆ ಆ ವ್ಯಕ್ತಿ ತೆರಳುತ್ತಿರುವ ಸ್ಥಳದ ದರ 15 ರೂ. ಎಂದು ಕಂಡಕ್ಟರ್‌ ಹೇಳಿದ್ದು, ಪ್ರಯಾಣಿಕ ಕೊಡಲು ನಿರಾಕರಿಸಿದ್ದಾನೆ. ಬಳಿಕ ಮಾತಿಗೆ ಮಾತು ಬೆಳೆದು ಕಂಡಕ್ಟರ್‌ ಬಸ್ಸಿನಿಂದ ದೂಡಿದ್ದಾನೆ. ಪ್ರಯಾಣಿಕ ಕೋಪಗೊಂಡು ಮನಬಂದಂತೆ ಥಳಿಸಿದ ಸಂಪೂರ್ಣ ದೃಶ್ಯ ಬಸ್ಸಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ನಗರದ ಜಹಾಂಗೀರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

25 ಸೆಕೆಂಡುಗಳ ವೀಡಿಯೊದಲ್ಲಿ ಬಸ್ ಕಂಡಕ್ಟರ್ ಮತ್ತು ಎನ್‌ಸಿಸಿ ಕೆಡೆಟ್‌ ಅವರ ಪ್ರಯಾಣ ದರದ ಬಗ್ಗೆ ವಾಗ್ವಾದವಿದೆ. ಯುವಕ ಪ್ರಯಾಣಿಸುವ  ಮಾರ್ಗದ ದರ 10 ರೂ. ಪಾವತಿಸಿದ್ದಾನೆ. ಈ ವೇಳೆ ಕಂಡಕ್ಟರ್‌ಗೆ ₹ 15 ಪಾವತಿಸುವಂತೆ ಒತ್ತಾಯಿಸಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next