Advertisement

Bhopal; ಮದುವೆ ಮನೆಗೆ ನುಗ್ಗಿ ವಧುವನ್ನು ಕಿಡ್ನ್ಯಾಪ್ ಮಾಡಲು ಯತ್ನ: ಕುಟುಂಬಿಕರಿಗೆ ಹಲ್ಲೆ

01:29 PM May 31, 2024 | Team Udayavani |

ಭೋಪಾಲ್: ಮಧ್ಯಪ್ರದೇಶದ ಅಶೋಕ್ ನಗರದಲ್ಲಿ ವಿವಾಹ ಸಮಾರಂಭದ ವೇಳೆ 22 ವರ್ಷದ ಯುವತಿಯನ್ನು ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ. ಪ್ರಮುಖ ಆರೋಪಿ ಕಲು ಅಲಿಯಾಸ್ ಸಲೀಂ ಖಾನ್ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮೂಲಕ ಅವಹೇಳನ ಮಾಡಿದ್ದಾನೆ; ನಂತರ ಆಕೆ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾಗ ಆಕೆಯ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾನೆ.

Advertisement

ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸಹಚರರಾದ ಜೋಧಾ, ಸಮೀರ್ ಮತ್ತು ಶಾರುಖ್ ಜೊತೆಗೆ ಕಲು ಮಹಿಳೆಯ ಮನೆಗೆ ನುಗ್ಗಿದ್ದಾನೆ. ಆಕೆ ಪ್ರತಿಭಟಿಸಿದಾಗ ಆಕೆಯ ಮನೆಯವರ ಮೇಲೆ ಹಲ್ಲೆ ನಡೆಸಿ, ಆಕೆಯ ತಂದೆಯ ಕಾಲು ಹಾಗೂ ಸಹೋದರನ ಕೈಯನ್ನು ಮುರಿದಿದ್ದಾರೆ. ಆಕೆಯ ತಾಯಿಗೂ ಅಮಾನುಷವಾಗಿ ಥಳಿಸಲಾಗಿದೆ. ದಾಳಿಕೋರರು ಕತ್ತಿ ಮತ್ತು ಕಬ್ಬಿಣದ ಸರಳುಗಳನ್ನು ಬೀಸುತ್ತಾ ಮಹಿಳೆಯನ್ನು ಆಕೆಯ ಮನೆಯಿಂದ ಹೊರಗೆ ಎಳೆದೊಯ್ದಿದ್ದಾರೆ.

ಜನರು ಮತ್ತು ಕುಟುಂಬಿಕರು ಸಹಾಯಕ್ಕಾಗಿ ಕೂಗಿದಾಗ ಜನರು ಸೇರಿದರು. ಆರಂಭದಲ್ಲಿ ಆರೋಪಿಗಳು ಜನರತ್ತ ಕತ್ತಿ ತೋರಿಸಿ ಬೆದರಿಸಿದರಾದರೂ, ಹೆಚ್ಚು ಜನ ಸೇರಿದಾಗ ಅಲ್ಲಿಂದ ಕಾಲ್ಕಿತ್ತರು. ಗಲಾಟೆಯ ಸಮಯದಲ್ಲಿ, ಆರೋಪಿಗಳು ಮಹಿಳೆಯ ಕುಟುಂಬ ಮತ್ತು ಅವಳು ನಿಶ್ಚಿತಾರ್ಥ ಮಾಡಿಕೊಂಡಿರುವ ಪುರುಷನ ಕುಟುಂಬಕ್ಕೆ ಬೆದರಿಕೆ ಹಾಕಿದರು.

ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಆರಂಭದಲ್ಲಿ ಹಿಂದೇಟು ಹಾಕಿದ್ದರು. ಬುಧವಾರ ತಡರಾತ್ರಿ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರ ಮಧ್ಯಪ್ರವೇಶದ ನಂತರ ಪೊಲೀಸರು ಮಹಿಳೆ ಮತ್ತು ಆಕೆಯ ತಂದೆ ಇಬ್ಬರ ದೂರಿನ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next