ಪಾಟ್ನಾ: ಅಪ್ರಾಪ್ತೆ ಮೇಲೆ ಅತ್ಯಾಚಾರಗೈದು, ಆಕೆಯ ಆಕ್ಷೇಪಾರ್ಹ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆ ಭೋಜ್‌ಪುರಿ ಗಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಭಿಷೇಕ್ (ಬಾಬುಲ್ ಬಿಹಾರಿ) ಬಂಧಿತ ಗಾಯಕ.
ಎರಡು ವರ್ಷದ ಹಿಂದೆ 21 ವರ್ಷದ ಅಭಿಷೇಕ್ ರಾಜೀವ್ ನಗರ ಪ್ರದೇಶದಲ್ಲಿ ವಾಸವಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
13 ವರ್ಷದ ಬಾಲಕಿಯೊಬ್ಬಳಿಗೆ ಸ್ನೇಹಿತರಾಗುವ ಆಮಿಷ ನೀಡಿ, ಹೊಟೇಲ್ ರೂಮ್ ವೊಂದಕ್ಕೆ ಕರೆದಿದ್ದಾನೆ. ಆ ಬಳಿಕ ಆಕೆಯ ಮೇಲೆ ಅತ್ಯಾಚಾರಗೈದು, ಆಕೆಯ ಆಕ್ಷೇಪಾರ್ಹ ಫೋಟೋಗಳನ್ನು ಸೆರೆಹಿಡಿದಿದ್ದಾನೆ.
Related Articles
ಇದನ್ನೂ ಓದಿ: Kollywood: ಪೋಷಕ ನಟನ ಕಾರು ಢಿಕ್ಕಿ; ಸಹಾಯಕ ನಿರ್ದೇಶಕ ಸ್ಥಳದಲ್ಲೇ ಮೃತ್ಯು
ಘಟನೆಯ ಬಳಿಕ ಅಪ್ರಾಪ್ತೆ ಯಾರೊಂದಿಗೂ ವಿಚಾರವನ್ನು ಹೇಳದೆ ಆರೋಪಿಯಿಂದ ಅಂತರ ಕಾಯ್ದುಕೊಂಡಿದ್ದಳು. ಕೆಲ ದಿನಗಳ ಹಿಂದೆ ಆರೋಪಿ ಅಭಿಷೇಕ್ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದಾದ ಬಳಿಕ ಪೋಷಕರೊಂದಿಗೆ ಎರಡು ವರ್ಷ ಹಿಂದಿನ ಕರಾಳ ಅನುಭವವನ್ನು ಹಂಚಿಕೊಂಡಿದ್ದಾಳೆ.
ಪೋಷಕರು ಸಂತ್ರಸ್ತೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿಯಲ್ಲಿ ಪೊಲೀಸರು ದೂರು ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಭಿಷೇಕ್ ಭೋಜ್ ಪುರಿ ಗಾಯಕನಾಗಿದ್ದು, ಯೂಟ್ಯೂಬ್ ನಲ್ಲಿ 27 ಸಾವಿರ ಸಬ್ ಸ್ಕ್ರೈಬರ್ಸ್ ನ್ನು ಹೊಂದಿದ್ದಾರೆ.