Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ
Team Udayavani, Jan 16, 2025, 9:32 AM IST
ಮುಂಬೈ: ಭೋಜ್‌ಪುರಿ ಚಿತ್ರರಂಗದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ, ಖ್ಯಾತ ನಟ ಮತ್ತು ನಿರ್ಮಾಪಕ ಸುದೀಪ್ ಪಾಂಡೆ ಹೃದಯಾಘಾತದಿಂದ ಬುಧವಾರ(ಜ.15) ನಿಧನ ಹೊಂದಿದ್ದಾರೆ.
ಮುಂಬೈ ನಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸುದೀಪ್ ಪಾಂಡೆಗೆ ನಟನೆಯ ಮೇಲೆ ಹೆಚ್ಚಿನ ಉತ್ಸಾಹ ಇದ್ದುದರಿಂದ ಅವರು ತಮ್ಮ ಕೆಲಸವನ್ನು ತೊರೆದು ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅದರಂತೆ 2007 ರಲ್ಲಿ ಬಂದ ‘ಭೋಜ್‌ಪುರಿಯಾ ಭಯ್ಯಾ’ ಸುದೀಪ್ ಅವರ ಮೊದಲ ಚಿತ್ರ. ಇದರ ನಂತರ ಅವರು ‘ಮಸಿಯಾ ಬಾಬು’, ‘ಹಮರ್ ಸಂಗಿ ಬಜರಂಗಬಲಿ’, ‘ಭೋಜ್‌ಪುರಿಯಾ ದರೋಗಾ’, ‘ಹಮರ್ ಲಾಲ್ಕರ್’, ‘ಹಮ್ ಹೇ ಧರಮ್ ಯೋದ್ಧ’, ‘ಖೂನಿ ದಂಗಲ್’, ‘ಧರ್ತಿ ಕಾ ಬೇಟಾ’ ಮತ್ತು ‘ಹಮರ್ ಸಂಗಿ’ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು.ಜೊತೆಗೆ ಕೆಲವು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದರು ಅಷ್ಟು ಮಾತ್ರವಲ್ಲದೆ ರಾಜಕೀಯದ ಜೊತೆ ನಂಟು ಹೊಂದಿದ್ದ ಸುದೀಪ್ ಅವರು, ಎನ್‌ಸಿಪಿ ಪಕ್ಷದ ಸದಸ್ಯರಾಗಿದ್ದರು.
ಜನವರಿ 5ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಟ:
ಸುದೀಪ್ ಅವರು ಮೊನ್ನೆ ಮೊನ್ನೆ ಜನವರಿ 5ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಜೊತೆಗೆ ಸುದೀಪ್ ಅವರ ಅಪಾರ ಅಭಿಮಾನಿಗಳು ಶುಭಾಶಯ ಕೋರಿದ್ದರು ಆದರೆ ಇದರ ಬೆನ್ನಲ್ಲೇ ಸುದೀಪ್ ಅವರ ಅಭಿಮಾನಿಗಳಿಗೆ ನಿಧನದ ಸುದ್ದಿ ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ. ನಟನ ಅಗಲಿಕೆಗೆ ಚಿತ್ರತಂಡ ಸಂತಾಪ ಸೂಚಿಸಿದೆ.
ಇದನ್ನೂ ಓದಿ: Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್ ಅಸ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress: ಪಾಕಿಸ್ತಾನದ ನಟನ ಜತೆ ಮೂರನೇ ಮದುವೆ ಆಗಲು ಸಜ್ಜಾದ ಭಾರತದ ಖ್ಯಾತ ನಟಿ
Saif Ali Case: ಶಂಕಿತನಾಗಿ ಬಂಧಿಸಿದ್ದಕ್ಕೆ ನನ್ನ ಕೆಲಸವೂ ಹೋಯಿತು, ಮದುವೆಯೂ ಇಲ್ಲ – ಆಕಾಶ್
Bollywood: ಕರಣ್ ಜೋಹರ್ ಚಿತ್ರದಲ್ಲಿ ಅನನ್ಯಾ?
Anger: ಸ್ಕೈಫೋರ್ಸ್ ಸಿನೆಮಾಕ್ಕೆ ಕರ್ನಾಟಕದ ಕೊಡವರ ಕಿಡಿ
Saif Ali Khan Stabbing Case: ನಟ ಸೈಫ್ ರಕ್ತದ ಮಾದರಿ, ಬಟ್ಟೆ ಸಂಗ್ರಹಿಸಿದ ಪೊಲೀಸರು
MUST WATCH
ಹೊಸ ಸೇರ್ಪಡೆ
INDvENG: ಭಾರತದ ಬ್ಯಾಟಿಂಗ್ ಕುಸಿತ: ರಾಜಕೋಟ್ ನಲ್ಲಿ ಗೆಲುವಿನ ನಗೆ ಬೀರಿದ ಇಂಗ್ಲೆಂಡ್
ಗುರಿ ಸಾಧಿಸದಿದ್ರೆ ಅಧಿಕಾರಿಗಳೇ ಹೊಣೆ: ಚಲುವರಾಯಸ್ವಾಮಿ
Jagadish Shettar: ಕ್ರೈಸ್ತರು ಇಟಲಿಗೆ, ಮುಸ್ಲಿಮರು ಮೆಕ್ಕಾಕ್ಕೆ ಯಾತ್ರೆ ಮಾಡುವುದಿಲ್ಲವೇ?
KAS ಹುದ್ದೆ ಭರ್ತಿಯಲ್ಲಿ ಲೋಪ: ಕೆಪಿಎಸ್‌ಸಿಗೆ ಕೆಎಟಿಯಿಂದ ನೋಟಿಸ್
BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್