Advertisement

ಮಹಾಘಟಬಂಧನ್‌ ಮೂರಾಬಟ್ಟೆ

03:14 PM Apr 06, 2019 | Naveen |

ಬೀದರ: ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂದು ಬಿಜೆಪಿಗೆ ಕೇಳಿದರೆ ಮೋದಿ ಎಂಬ ಸ್ಪಷ್ಟ ಉತ್ತರ ನಮ್ಮಲ್ಲಿದೆ. ಆದರೆ, ಮಹಾಘಟಬಂಧನದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಇಂದಿಗೂ ಯಾವ ಪಕ್ಷದವರೂ ಉತ್ತರಿಸುತ್ತಿಲ್ಲ. ಮಹಾಘಟಬಂಧನ ಮೂರಾಬಟ್ಟೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು.

Advertisement

ನಗದರ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಘಟಬಂಧನದಲ್ಲಿ ಒಗ್ಗಟ್ಟು ಇಲ್ಲ. ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಮೈತ್ರಿಯಿಂದ ಪಕ್ಷಗಳು ದೂರ ಉಳಿದುಕೊಂಡಿವೆ. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್‌ಗೆ ಸಿಕ್ಕಿರುವ 8 ಸ್ಥಾನಗಳ ಪೈಕಿ ಕೆಲವು ಕಡೆ ಅಭ್ಯರ್ಥಿಗಳು ಸಿಕ್ಕಿಲ್ಲ. ತಮ್ಮಲ್ಲಿ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್‌ನವರಿಗೆ ಕರೆದುತಂದು ಟಿಕೆಟ್‌ ನೀಡಿದ್ದಾರೆ. ಮಂಡ್ಯ, ಹಾಸನ ಸೇರಿ ಹಲವು ಕ್ಷೇತ್ರಗಳಲ್ಲಿ ಅವರವರ ಪಕ್ಷಗಳಲ್ಲಿ ಮೈತ್ರಿ ಮುರಿದು ಗೊಂದಲ ಸೃಷ್ಟಿಯಾಗಿದೆ. ದೇವೇಗೌಡರು ಹಾಗೂ ಅವರಿಬ್ಬರ ಮೊಮ್ಮಕ್ಕಳು ಸ್ಪ ರ್ಧಿಸಿದರೆ, ಒಬ್ಬ ಮಗ ಸಿಎಂ, ಇನ್ನೊಬ್ಬ ಮಗ ಸಚಿವ, ಸೊಸೆ ಶಾಸಕರು. ಜೆಡಿಎಸ್‌ ಪಕ್ಷದ ಉಳಿವಿಗಾಗಿ ನಮ್ಮ ಕುಟುಂಬ ಚುನಾವಣೆಗೆ ಸ್ಪ ರ್ಧಿಸುತ್ತಿದೆ ಎಂದು ದೇವೇಗೌಡರು ಹೇಳುತ್ತಿದ್ದಾರೆ. ಹಾಗಾದರೆ ಚನ್ನಮ್ಮ
ಅವರೊಬ್ಬರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರೆ ಗೌಡರ
ಕುಟುಂಬದ ಚಿತ್ರ ಪೂರ್ಣಗೊಳ್ಳಲಿದೆ ಎಂದರು.

ರಾಜ್ಯದಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್‌ ಪಕ್ಷ ಹಾಳಾಗಿ ಹೋಗಿದೆ. ಇದೀಗ ಮನೆಗೆ ಹೋಗುವ ಪರಿಸ್ಥಿತಿ ಬಂದಿದೆ. ಮೈತ್ರಿ ನಿರ್ನಾಮ ಆಗುವ ಕಾಲ ಬಂದಿದೆ. ಲೋಕಸಭಾ ಚುನಾವಣೆ ನಂತರ ಸ್ವತಃ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಲೋಕ ಸಮರದ ನಂತರ ಬಿ.ಎಸ್‌. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ನರೇಂದ್ರ ಮೋದಿ ನಾಯಕತ್ವ, ದೇಶದ ಎಲ್ಲೆಡೆ ಎದ್ದಿರುವ ಮೋದಿ ಹವಾ ಹಾಗೂ ಬೂತ್‌ ಮಟ್ಟದಿಂದ ಪಕ್ಷದ ಸಂಘಟನೆ ಈ ಮೂರು ಅಂಶಗಳ ಆಧಾರದ ಮೇಲೆ ಕೇಂದ್ರದಲ್ಲಿ ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಎನ್‌ಡಿಎ ಸರ್ಕಾರ ಬರಲಿದೆ. ಬೀದರ್‌, ಕಲಬುರಗಿ ಸೇರಿ ಉತ್ತರ ಕರ್ನಾಟಕ ಭಾಗದ ಎಲ್ಲ ಸ್ಥಾನಗಳಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿದೆ ಎಂದರು.

ವಿವಿಧ ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇ 1,300ಕ್ಕೂ ಅಧಿ ಕ ಕೋಟಿ ಹಣವನ್ನು ರಾಜ್ಯ ಸರ್ಕಾರ ಪಾವತಿಸುವ ಮೂಲಕ, ಗುತ್ತಿಗೆದಾರರಿಂದ ಹಣ ಪಡೆದು ಲೋಕಸಭಾ ಚುನಾವಣೆಯಲ್ಲಿ ಬಳಸುವ ವ್ಯವಸ್ಥಿತ ಷಡ್ಯಂತ್ರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಗುತ್ತಿಗೆದಾರರಿಂದ ಬಂದ ಭ್ರಷ್ಟಾಚಾರದ ಹಣವನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದೆ. ಇದಕ್ಕೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next