Advertisement

ಬರಹಗಾರರಿಗೆ ಬಸವಣ್ಣ ಅಕ್ಷಯ ಪಾತ್ರೆ

03:13 PM Jan 12, 2020 | Naveen |

ಬೀದರ: ಸೃಜನಶೀಲ ಬರಹಗಾರರಿಗೆ ಬಸವಣ್ಣ ಅಕ್ಷಯ ಪಾತ್ರೆ. ಅವರ ವಚನಗಳನ್ನು ಅಧ್ಯಯನ ಮಾಡಿದಷ್ಟು ಬಿಚ್ಚಿಕೊಳುತ್ತಾ ಹೋಗುತ್ತವೆ ಎಂದು ಹುಮನಾಬಾದನ ಪ್ರಾಂಶುಪಾಲ ಅಜೆಯೇಂದ್ರ ಸ್ವಾಮಿ ಬಣ್ಣಿಸಿದರು.

Advertisement

ನಗರದ ಶರಣ ಉದ್ಯಾನದಲ್ಲಿ ಶುಕ್ರವಾರ ಸಂಜೆ ಜರುಗಿದ 243ನೇ ಶರಣ ಸಂಗಮ ಮತ್ತು ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅನುಭಾವ ನೀಡಿದ ಅವರು, ಮೊಗೆದಷ್ಟ ಆಳ ಮತ್ತು ದೃಷ್ಟಿ ಹರಿಸಿದಷ್ಟು ಎತ್ತರ ಬಸವಣ್ಣ. ಅವರು ದೇವರನ್ನು ವಿರೋಧಿಸಿದರು. ಬಸವಣ್ಣನವರ ಕ್ರಾಂತಿ ಮಾನವೀಯತೆಯ ಕ್ರಾಂತಿ ಎಂದು ಹೇಳಿದರು.

ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ ಸಾನ್ನಿಧ್ಯ ವಹಿಸಿ ಮಾತನಾಡಿ, ವಿಶ್ವದ ಅಧ್ಯಾತ್ಮ ಲೋಕದಲ್ಲಿ ವಚನಗಳು ಅನರ್ಘ್ಯ ರತ್ನಗಳಾಗಿವೆ. 12ನೇ ಶತಮಾನದಲ್ಲಿ ಅನುಭವ
ಮಂಟಪದ ಶರಣರ ಅಂತರಂಗ ಅರಳಿ ವಚನಗಳು ಹೊರಹೊಮ್ಮಿವೆ. ಕಲ್ಯಾಣ ಕ್ರಾಂತಿಯ ಫಲವಾಗಿ ನೀಡುವವರುಂಟು ಬೇಡುವವರಿಲ್ಲವೆಂಬ ಸುಭೀಕ್ಷು ಸಮಾಜ ನಿರ್ಮಾಣವಾಗಿತ್ತು. ಸರ್ವಸಮತ್ವದ ಬಾವುಟ ಬಾನೆತ್ತರಕ್ಕೆ ಹಾರಿತ್ತು. ಕಾಯಕ- ದಾಸೋಹಗಳಿಂದಾಗಿ ಸ್ವಾವಲಂಬನೆ ಎಲ್ಲೆಲ್ಲಿಯೂ ಮನೆ ಮಾಡಿತ್ತು. ಅಂಥ ಕಲ್ಯಾಣದ ಇತಿಹಾಸ ಪುನರ್‌ ನಿರ್ಮಾಣದ ಕನಸೇ ವಚನ ವಿಜಯೋತ್ಸವ ಎಂದರು.

ವಚನ ವಿಜಯೋತ್ಸವವು ವಚನ ಸಂರಕ್ಷಣೆಗೆ ಪ್ರಾಣಾರ್ಪಣೆಗೈದ ಶರಣರ ಸ್ಮರಣೆಯೂ ಹೌದು. ಅಂದು ವಚನಗಳನ್ನು ರಾಜ್ಯಶಾಹಿಯ ಸೈನಿಕರು ತುಳಿದು, ಸುಟ್ಟು ಅಟ್ಟಹಾಸಗೈದಿದ್ದರು. ಇಂದು ವಚನಗಳನ್ನು ಜಗತ್ತಿಗೆ ತಲುಪಿಸುವ ಸಂಕಲ್ಪದಿಂದ ತಲೆಮೇಲೆ ಹೊತ್ತು ಮೆರೆಸಲಾಗುತ್ತಿದೆ ಎಂದು ಹೇಳಿದರು.

ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಅಧ್ಯಕ್ಷ ಅನಿಲಕುಮಾರ ರಗಟೆ ಮತ್ತು ಕಲಬುರಗಿ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ವೀರಭದ್ರಪ್ಪ ಉಪ್ಪಿನ ಅವರು ಷಟ್‌ ಸ್ಥಲ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನ ಪಂಚಕಮಿಟಿಯ ಅಧ್ಯಕ್ಷ ಅನಿಲಕುಮಾರ ರಗಟೆ, ನಿರ್ದೇಶಕರಾದ ಬಸವರಾಜ ಬಾಲಕಿಲೆ, ಚಿರಡೆ ಮಲ್ಲಣ್ಣ, ಅನಿಲ ಮೆಟಿಗೆ, ಸುಭಾಷ ಹೊಳಕುಂದೆ, ಜಗನಾಥ ಖೂಬಾ, ಬಸವರಾಜ ತೊಂಡಾರೆ, ಮಲ್ಲಿಕಾರ್ಜುನ ಕರಕೋಡೆ, ಕಾಶೆಪ್ಪ ಸಕ್ಕರಭಾವಿ, ಭದ್ರು ಪಾಟೀಲ, ರೇವಣಪ್ಪ ರಾಯವಾಡೆ ಮತ್ತು ಕಲಬುರ್ಗಿಯ ರಾಜಶೇಖರ ಯಂಕಂಚಿ, ಉಪಾಧ್ಯಕ್ಷ ರೇವಣಸಿದ್ಧಯ್ಯ ಮಠ, ನಿರ್ದೇಶಕರಾದ ಶಿವರುದ್ರಯ್ಯ ಮಠ, ಬಸವರಾಜ ಶೆರಿಕಾರ, ಸತೀಷ ಸಜ್ಜನ ಅವರನ್ನು ಅಭಿನಂದಿಸಲಾಯಿತು.

Advertisement

ಬೆಳ್ಳೇರಿಯ ಬಸವಾನಂದ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಬಸವರಾಜ ಬಿರಾದಾರ ಉಂಡೆ ಅಧ್ಯಕ್ಷತೆ ವಹಿಸಿದ್ದರು. ವಿಜಯಲಕ್ಷ್ಮಿ ಸಾವ್ಲೆ ಗುರುಪೂಜೆ, ವಚನ ಪಠಣ ಮಾಡಿಸಿದರು. ಗಂಗಪ್ಪ ಸಾವ್ಲೆ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next