Advertisement
ನಗರದ ರಂಗಮಂದಿರದಲ್ಲಿ ರವಿವಾರ ಶ್ರೀಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಡಾ|ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಶನ್ ಹಾಗೂ ನವೀನ್ ಪಬ್ಲಿಕ್ ಸ್ಕೂಲ್ ಚಿಟ್ಟಾ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಶೈಕ್ಷಣಿಕ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಚಿದ್ರಿ ಮಾತನಾಡಿ, ತಾಯಿಯೇ ಮಕ್ಕಳ ಮೊದಲ ಗುರುವಾದ ಕಾರಣ ಆಕೆ ಮಕ್ಕಳಿಗೆ ಬಾಲ್ಯದಲ್ಲಿ ಮಾತೃಭಾಷೆ ಶಿಕ್ಷಣ ದಯಪಾಲಿಸಬೇಕು. ಪಾಲಕರು ಮಕ್ಕಳ ಕೈಗೆ ಮೊಬೈಲ್ ಕೊಡಕೂಡದು. ಅವರಿಗೆ ಗತಕಾಲದ ವೀರಾಂಗನೆಯ ಕಥೆಗಳು ಹಾಗೂ ಇತಿಹಾಸ ಕಲಿಸಿದಾಗ ಭವಿಷ್ಯದಲ್ಲಿ ಧೈರ್ಯವಂತ ದೇಶಪ್ರೇಮಿಗಳಾಗಿ ಹೊರಹೊಮ್ಮುವರು ಎಂದರು.
ಇದೇ ವೇಳೇ ಡಾ| ಬಸವರಾಜ ಪಾಟೀಲ ಸೇಡಂ, ಡಾ| ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಶನ್ ಗೌರವಾಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ, ವೀಣಾ ಜಲಾದೆ, ಜೈಸಿಂಗ್ ಠಾಕೂರ, ಸೈಯ್ಯದ್ ಅಲ್ಪಾಸ್, ನಿಕಿತಾ ಪಾಟೀಲ ಸೇರಿದಂತೆ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಫಲಿತಾಂಶ ಪಡೆದ ಜಿಲ್ಲೆಯ 53 ಶಾಲಾ ಕಾಲೇಜುಗಳ ಮುಖ್ಯಸ್ಥರನ್ನು ಇದೇ ವೇಳೆ ಸನ್ಮಾನಿಸಲಾಯಿತು. ವಿಕಾಸ ಅಕಾಡೆಮಿ ಜಿಲ್ಲಾ ಉಪಾಧ್ಯಕ್ಷ ಡಾ|ಅಬ್ದುಲ್ ಖದೀರ್, ಡಾ| ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಶನ್ ಅಧ್ಯಕ್ಷ ಡಾ|ವಿಕ್ರಮ್ ಸಿದ್ದಾರೆಡ್ಡಿ, ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಶಾಂತಕುಮಾರ ಬಿರಾದಾರ, ಕಾಮಶೆಟ್ಟಿ ಚಿಕಬಸೆ ಸೇರಿದಂತೆ ಅನೇಕರು ಇದ್ದರು.