Advertisement
ಬಸವಣ್ಣನವರ ಜಯಂತ್ಯುತ್ಸವ ಸಂದರ್ಭದಲ್ಲಿ ಕೊಳ್ಳೂರ ಪಿಎಂ ಕೇರ್ಸ್ ನಿಧಿಗೆ 5.55 ಲಕ್ಷ ರೂ. ಹಾಗೂ ಕರ್ನಾಟಕ ಸಿಎಂ ಕೋವಿಡ್- 19 ಪರಿಹಾರ ನಿಧಿಗೆ ದೇಣಿಗೆ ನೀಡಿದ 5.55 ಲಕ್ಷ ರೂ. ಚೆಕ್‌ಗಳನ್ನು ರವಿವಾರ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಅವರಿಗೆ ಸಲ್ಲಿಸಿದರು. ಕೊರೊನಾ ಸೃಷ್ಟಿಸಿರುವ ಸಂದಿಗ್ಧ ಪರಿಸ್ಥಿತಿ ಮತ್ತು ವಿಪತ್ತಿನ ಸವಾಲು ಎದುರಿಸಲು ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಕೋವಿಡ್-19 ಪರಿಹಾರ ನಿಧಿ ಮೂಲಕ ನಾಗರಿಕರಿಂದ ನೆರವು ಕೋರಿದ್ದಾರೆ. ಇದಕ್ಕೆ ಸ್ಪಂದಿಸುವ ಮೂಲಕ ಕೊಳ್ಳೂರ 11 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಜಿಲ್ಲೆಯಿಂದ ಈವರೆಗೆ ವೈಯಕ್ತಿಕವಾಗಿ ನೀಡಿದ ಅತ್ಯಧಿಕ ಪರಿಹಾರ ಮೊತ್ತ ಇದಾಗಿರುವುದು
ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಉಳ್ಳವರು ಬಡವರನ್ನು ಗುರುತಿಸಿ ನೆರವಿಗೆ ಬಂದರೆ ಎಲ್ಲರೂ ಸಂಕಷ್ಟದಿಂದ ಪಾರಾಗಬಲ್ಲರು ಎಂದು ಗುರುನಾಥ ಕೊಳ್ಳೂರ ಹೇಳಿದ್ದಾರೆ. ಸಂಸದ ಭಗವಂತ ಖೂಬಾ, ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್‌ಪಿ ಡಿ.ಎಲ್. ನಾಗೇಶ, ಎಡಿಸಿ ರುದ್ರೇಶ ಗಾಳಿ, ಎಸಿ ಅಕ್ಷಯ ಶ್ರೀಧರ, ಜಿಕೆ ಕನ್ಸ್‌ಟ್ರಕ್ಶನ್ ಎಂಡಿ ಸಚಿನ್ ಕೊಳ್ಳೂರ, ಪ್ರಮುಖರಾದ ಬಾಬು ವಾಲಿ, ಬಿ.ಜಿ. ಶೆಟಕಾರ್, ಚಂದ್ರಶೇಖರ ಪಾಟೀಲ ಗಾದಗಿ, ಹಣಮಂತ ಬುಳ್ಳಾ ಇದ್ದರು.