Advertisement
ಸದ್ಯ ಕನ್ನಡ ಚಿತ್ರರಂಗದ ಮಂದಿಯ ಬಾಯಲ್ಲಿ ಓಡಾಡುತ್ತಿರುವ ಹೆಸರು “ಭೀಮ’. ಕೊನೆಗೂ “ಭೀಮ’ ಭರವಸೆಯ ಹಾದಿ ತೆರೆಸಿದ ಎಂಬ ಮಾತು ಕೇಳಿಬರುತ್ತಿದೆ. ಅದಕ್ಕೆ ಕಾರಣ ವಿಜಯ್ ನಟನೆ, ನಿರ್ದೇಶನದ “ಭೀಮ’ ಚಿತ್ರ ತೆರೆಕಂಡ ದಿನದಿಂದಲೇ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
Related Articles
Advertisement
ಸ್ಟಾರ್ ಸಿನ್ಮಾ ಬರಬೇಕು…
ಇಡೀ ಚಿತ್ರರಂಗ ಸ್ಟಾರ್‌ಗಳ ಸಿನಿಮಾ ಬಂದರೆ ಒಂದು ಜೋಶ್ ಬರುತ್ತದೆ ಎನ್ನುತ್ತಲೇ ಬಂದಿದೆ. ಅದು ಸತ್ಯ ಕೂಡಾ. ಅದನ್ನು ಮತ್ತೂಮ್ಮೆ ಸಾಬೀತು ಮಾಡಿದ್ದು “ಭೀಮ’. ಸ್ಟಾರ್‌ಗಳಿಗೆ ಒಂದು ಅಭಿಮಾನಿ ವರ್ಗವಿರುವುದರಿಂದ ಸಿನಿಮಾ ಓಪನಿಂಗ್ ತೆಗೆದುಕೊಳ್ಳುವುದು ಸುಲಭ. ಅದರಲ್ಲೂ ಆ್ಯಕ್ಷನ್, ಮಾಸ್ ಆದರೆ ಅದು ಇನ್ನೂ ಸುಲಭ. ಸಿನಿಮಾ ಒಂಚೂರು ಚೆನ್ನಾಗಿದ್ದು, ಮಾಸ್ ಮನ ಗೆದ್ದರೆ ಅದರ ಓಟ ನಿರಾಳ.. ಈ ವಿಚಾರದಲ್ಲಿ ಸೆಕೆಂಡ್ ಹಾಫ್ನಲ್ಲಿ ಸ್ಟಾರ್ ಚಿತ್ರವಾಗಿ “ಭೀಮ’ ಒಂದು ಭರವಸೆ ಮೂಡಿಸಿದೆ.
ಹಾಗೆ ನೋಡಿದರೆ “ಭೀಮ’ ತಂದ ಧೈರ್ಯವನ್ನು ಮೆಚ್ಚಲೇಬೇಕು. ಸಾಮಾನ್ಯವಾಗಿ ಚಿತ್ರಮಂದಿರಕ್ಕೆ ಬರುವ ಮುನ್ನ ಸ್ಯಾಟ್‌ಲೈಟ್, ಓಟಿಟಿ ಸೇರಿದಂತೆ ಇತರ ಬಿಝಿನೆಸ್‌ಗಳನ್ನು ಮುಗಿಸಿಕೊಂಡೇ ಬರುತ್ತಾರೆ. ಆದರೆ, ಮೂಲಗಳ ಪ್ರಕಾರ, “ಭೀಮ’ ತಂಡ ಮಾತ್ರ ಪ್ರೇಕ್ಷಕರನ್ನೇ ನಂಬಿಕೊಂಡು ಬಂದಿದೆ. ಇಲ್ಲಿ ಗೆದ್ದರೆ “ಡಿಜಿಟಲ್’ ಬಿಝಿನೆಸ್‌ನಲ್ಲಿ ಗೆಲ್ಲುತ್ತೇವೆ ಎಂಬ ನಂಬಿಕೆ ಅವರದು. ಈಗ ಅವರ ವಿಶ್ವಾಸ ಗೆದ್ದಂತಿದೆ. “ಭೀಮ’ನ ಕಲೆಕ್ಷನ್, ಚಿತ್ರಮಂದಿರಕ್ಕೆ ನುಗ್ಗಿ ಬರುತ್ತಿರುವ ಜನರನ್ನು ನೋಡಿ ಇನ್ನೊಂದಿಷ್ಟು ಸಿನಿಮಾ ತಂಡಗಳಿಗೆ ತಮ್ಮ ಚಿತ್ರಗಳ ಮೇಲೆ ವಿಶ್ವಾಸ ಮೂಡಿದ್ದು, ಬಿಡುಗಡೆಗೆ ತಯಾರಿ ನಡೆಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಇಂತಹ ಒಂದು ಓಪನಿಂಗ್ ಬೇಕಿತ್ತು. ಆ ವಿಚಾರದಲ್ಲಿ ಭೀಮನ ಸಾಧನೆ ಚೆನ್ನಾಗಿದೆ. ಬಹುತೇಕ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ನಾನು ಕಂಡ ಸತ್ಯವೆಂದರೆ 100-200 ಕೋಟಿ ಬಜೆಟ್‌ನ ಚಿತ್ರ ಬಿಡುಗಡೆಯಾದಾಗ ಪ್ರೇಕ್ಷಕ ಒಪ್ಪದೇ ಇದ್ದಾಗ ಎರಡನೇ ದಿನದ ಗಳಿಕೆ ಕುಸಿಯುತ್ತದೆ. ಆದರೆ, “ಭೀಮ’ ಕನ್ನಡ ಚಿತ್ರ ಎರಡನೇ ದಿನದಲ್ಲಿ ಶೇ 90 ಗಳಿಸಿದೆ ಎಂದರೆ ಪ್ರೇಕ್ಷಕರು ತುಂಬಾ ಪ್ರಬುದ್ಧರಾಗಿದ್ದಾರೆ. ಪ್ರೇಕ್ಷಕರು ಮಾತ್ರ ಸಿನಿಮಾ ಉದ್ಯಮವನ್ನು ಬದಲಾಯಿಸಬಹುದು ಮತ್ತು ಉಳಿಸಬಹುದು. ●ಕೆ.ವಿ.ಚಂದ್ರಶೇಖರ್, ಅಧ್ಯಕ್ಷರು, ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ
–ರವಿಪ್ರಕಾಶ್ ರೈ