Advertisement

ಭೈಯೂಜಿ ಮಹಾರಾಜ್‌ ಆತ್ಮಹತ್ಯೆಗೆ ಕುಮ್ಮಕ್ಕು: ಮೂವರು ಅರೆಸ್ಟ್‌

09:35 AM Jan 19, 2019 | udayavani editorial |

ಇಂದೋರ್‌ : ಸ್ವಘೋಷಿತ ಆಧ್ಯಾತ್ಮಿಕ ಗುರು ಭೈಯೂಜಿ ಮಹಾರಾಜ್‌ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಂದೋರ್‌ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. 

Advertisement

ವಿನಾಯಕ ಧುಳೆ, ಶರದ್‌ ದೇಶ್‌ಮುಖ್‌ ಮತ್ತು ಓರ್ವ ಮಹಿಳೆ  ಬಂಧಿತರಾಗಿದ್ದು ಇವರು ಭೈಯೂಜಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದವರೆಂದು ಆರೋಪಿಸಲಾಗಿದೆ. ಭೈಯೂಜಿ ಮಹಾರಾಜ್‌ 2018ರ ಜೂನ್‌ 12ರಂದು ತನ್ನ ನಿವಾಸದಲ್ಲಿ ಗುಂಡೆಸೆದು ಕೊಂಡು ಆತ್ಮಹತ್ಯೆ ಮಾಡಿದ್ದರು. 

ಬಂಧಿತ ವಿನಾಯಕ್‌, ಭೈಯೂಜಿ ಅವರ ನಿಕಟವರ್ತಿಯಾಗಿದ್ದ. ಆತನನ್ನು ಅವರು ತನ್ನ ಆಸ್ತಿಪಾಸ್ತಿ ಉಸ್ತುವಾರಿಯನ್ನಾಗಿ ಮಾಡಿದ್ದರು. ಬಂಧಿತ ಶರದ್‌, ಭೈಯೂಜಿ ಅವರ ಕಾರು ಚಾಲಕನಾಗಿದ್ದ. ಬಂಧಿತ ಮಹಿಳೆಯು ಭೈಯೂಜಿ ಅವರನ್ನು ಬ್ಲಾಕ್‌ ಮೇಲ್‌ ಮಾಡುತ್ತಿದ್ದು ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. 

ಬಂಧಿತ ಮೂವರನ್ನೂ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next