Advertisement
ಜ. 6 ರಂದು ಭಾಯಂದರ್ ಪೂರ್ವದ ಸಚಿನ್ ತೆಂಡುಲ್ಕರ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ವೃಂದದ 12 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ತುಳು-ಕನ್ನಡಿಗರು ಮಾಡುವ ಸತ್ಕರ್ಮಗಳಿಗೆ ನಾವು ಕೂಡಾ ಸಹಕರಿಸಿ,ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ. ತುಳು-ಕನ್ನಡಿಗರ ಯಾವುದೇ ರೀತಿಯ ಸೇವೆಗಳಿಗೆ ನಾನು ಬದ್ಧನಾಗಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಅದನ್ನು ಬಗೆಹರಿಸಲು ಸಿದ್ಧನಿದ್ದೇನೆ. ಇಂದು ಇಬ್ಬರು ಮರಾಠಿಗರನ್ನು ಗುರುತಿಸಿ ಸಮ್ಮಾನಿಸಿರುವುದು ನಿಮ್ಮ ದೊಡ್ಡಗುಣವನ್ನು ತೋರಿಸುತ್ತದೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಇಂತಹ ಪ್ರೀತಿ, ಸಂಸ್ಕೃತಿ-ಸಂಸ್ಕಾರವನ್ನು ಹಂಚುವ ಕಾರ್ಯಕ್ರಮ ನಿಮ್ಮಿಂದ ಸದಾ ನಡೆಯುತ್ತಿರಲಿ ಎಂದು ನುಡಿದರು.
ರಂಗನಿರ್ದೇಶಕ, ನಟ, ಬಾಬಾ ಪ್ರಸಾದ್ ಅರಸ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಅತಿಥಿಗಳಾದ ನಗರ ಸೇವಕ ಹರಿಶ್ಚಂದ್ರ ಅಮಾYಂವ್ಕರ್, ನಗರ ಸೇವಕ ದಿನೇಶ್ ನವಲಡೆ, ಶ್ರೀ ಅಯ್ಯಪ್ಪ ಆರಾಧನಾ ವೃಂದದ ಗೌರವಾಧ್ಯಕ್ಷರುಗಳಾದ ರವಿಕಾಂತ್ ಶೆಟ್ಟಿ ಇನ್ನ, ಅಶೋಕ್ ಎನ್. ಶೆಟ್ಟಿ, ಅಧ್ಯಕ್ಷ ಸುಕೇಶ್ ಶೆಟ್ಟಿ, ಉಪಾಧ್ಯಕ್ಷ ಉದಯ ಹೆಗ್ಡೆ, ಜತೆ ಕಾರ್ಯದರ್ಶಿ ನವೀನ್ ಕೆ. ಸುವರ್ಣ, ಜತೆ ಕೋಶಾಧಿಕಾರಿ ವಸಂತ ಕುಮಾರ್ ಮೆಂಡನ್, ಆರಾಧನಾ ಫ್ರೆಂಡ್ಸ್‌ನ ಕಾರ್ಯಾಧ್ಯಕ್ಷೆ ಪ್ರೇಮಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್ ಕುಮಾರ್ ಅಂಚನ್, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಉದಯ ಡಿ. ಸುವರ್ಣ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಮೀರಾ- ಭಾಯಂದರ್ ಬಂಟ್ಸ್ ಫೋರಂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಶೆಟ್ಟಿ, ಸಮಾಜ ಸೇವಕಿ ಸುಮಿತ್ರಾ ಕರ್ಕೇರ, ಯಕ್ಷಗಾನ ಪ್ರಸಂಗಕರ್ತ, ಕಲಾವಿದ ಎಂ. ಟಿ. ಪೂಜಾರಿ, ಯಕ್ಷಗಾನ ಸೇವಾರ್ಥಿಗಳಾದ ನಾರಾಯಣ ಸುವರ್ಣ, ವಸಂತ ಕುಮಾರ್ ಮೆಂಡನ್ ಹಾಗೂ ಗುರುನಾರಾಯಣ ಯಕ್ಷಗಾನ ಮಂಡಳಿಯನ್ನು ಗೌರವಿಸಲಾಯಿತು. ಸಾವಿರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ನಾರಾಯಣ ಸುವರ್ಣ, ವಸಂತ ಕುಮಾರ್ ಮೆಂಡನ್ ಅವರ ಸೇವಾರ್ಥಕವಾಗಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ ನಾಗ ಮಾಣಿಕ್ಯ ಯಕ್ಷಗಾನ ಪ್ರದರ್ಶನಗೊಂಡಿತು. ಹುಟ್ಟು ಸಹಜ, ಸಾವು ಆಕಸ್ಮಿಕ, ಈ ಹುಟ್ಟು ಹಾಗೂ ಸಾವಿನ ಮಧ್ಯೆ ತಾವು ಕೇವಲ ತನಗಾಗಿ ತನ್ನ ಪರಿವಾರದವರ ಉನ್ನತಿಗಾಗಿ ಬದುಕಬಾರದು. ಅದರೊಂದಿಗೆ ಪರರ ಏಳ್ಗೆಗೂ ಸ್ಪಂದಿಸುವ ಕಾರ್ಯ ನಮ್ಮ ಜೀವನದಲ್ಲಿ ನಡೆಯಬೇಕು. ಆಗ ನಮ್ಮ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ. ಮುಂಬಯಿ ಮಹಾನಗರದಲ್ಲಿ ತುಂಬಾ ಒತ್ತಡದ ಜೀವನವು ನಮ್ಮದಾಗಿದೆ. ಅಲ್ಲದೆ ಆಧುನಿಕ ಜೀವನ ಶೈಲಿಯನ್ನು ನಾವು ಹೊಂದಿದ್ದೇವೆ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಒತ್ತಡದ ಜೀವನದಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಆರೋಗ್ಯವನ್ನು ಕಾಪಾಡಿಕೊಳ್ಳಲು, ಒತ್ತಡದಿಂದ ಮುಕ್ತಿ ಪಡೆಯಲು ನಾವೆಲ್ಲ ಇಂತಹ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.
-ಡಾ| ಎನ್. ಎ. ಹೆಗ್ಡೆ , ಸಮ್ಮಾನಿತರು