Advertisement

ಪ್ಯಾರಾ ಟಿಟಿ: ಭವಿನಾ ಪಟೇಲ್‌ಗೆ ಚಿನ್ನ; ಸೋನಾಲ್‌ ಬೆನ್‌ಗೆ ಕಂಚು

09:54 PM Aug 07, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಭಾರತದ ಭವಿನಾ ಹಸ್ಮುಖಾಭಾಯಿ ಪಟೇಲ್‌ ಅವರು ಗೇಮ್ಸ್‌ನ ಪ್ಯಾರಾ ಟೇಬಲ್‌ ಟೆನಿಸ್‌ ಸ್ಪರ್ಧೆಯ ಸಿಂಗಲ್ಸ್‌ ಕ್ಲಾಸ್‌ 3-5 ವಿಭಾಗದಲ್ಲಿ ಚಿನ್ನದ ಪದಕ ಗೆದ್ದರೆ ಸೋನಾಲ್‌ಬೆನ್‌ ಮನುಭಾಯಿ ಕಂಚು ಜಯಿಸಿದ್ದಾರೆ.

Advertisement

ಗುಜರಾತ್‌ನ 35ರ ಹರೆಯದ ಭವಿನಾ ನೈಜೀರಿಯದ ಫೆಚುಕುÌಡೆ ಕ್ರಿಸ್ಟಿಯಾನಾ ಇಕೆ³ಯೊಯಿ ಅವರನ್ನು 12-10, 11-2, 11-9 ಅಂತರದಿಂದ ಸೋಲಿಸಿ ಚಿನ್ನ ಗೆದ್ದರು. ಭಾವಿನಾ ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಭವಿನಾ, 2011ರ ಥೈಲೆಂಡ್‌ ಓಪನ್‌ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ವಿಶ್ವದಲ್ಲಿ ಎರಡನೇ ರ್‍ಯಾಂಕ್‌ ಪಡೆದಿದ್ದರು.

ಇದೇ ವಿಭಾಗದಲ್ಲಿ ಭಾರತದ ಸೋನಾಲ್‌ಬೆನ್‌ ಮನುಭಾಯಿ ಇಂಗ್ಲೆಂಡಿನ ಸುಯಿ ಬೈಲಿ ಅವರನ್ನು 11-5, 11-2, 11-3 ಅಂತರದಿಂದ ಕೆಡಹಿ ಕಂಚಿನ ಪದಕ ಜಯಿಸಿದ್ದಾರೆ. ಆದರೆ ರಾಜ್‌ ಅರವಿಂದನ್‌ ಅಲಗರ್‌ ಪುರುಷರ ಟಿಟಿ ಸ್ಪರ್ಧೆಯಲ್ಲಿ ನೈಜೀರಿಯದ ಇಸವು ಆಗುಂಕುನ್ಲ ಅವರಿಗೆ ಸೋತು ಕಂಚು ಗೆಲ್ಲಲು ವಿಫ‌ಲರಾದರು. ಈ ಮೊದಲು ಪ್ಯಾರಾ ಪವರ್‌ಲಿಫ್ಟರ್‌ ಸುಧೀರ್‌ ಗೇಮ್ಸ್‌ ದಾಖಲೆಯೊಂದಿಗೆ ಪುರುಷರ ಹೆವಿವೇಟ್‌ ವಿಭಾಗದಲ್ಲಿ ಚಿನ್ನ ಜಯಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next