Advertisement
ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಜಾಂಗ್ ಮಿಯಾವೊ ಅವರನ್ನು 7-11, 11-7, 11-4, 9-11, 11-8 ಸೆಟ್ ಗಳ ಅಂತರದಿಂದ ಜಯ ಸಾಧಿಸಿದರು. ಭವಿನಾ ಪಟೇಲ್ ಭಾನುವಾರ ಚಿನ್ನದ ಪದಕದ ಪಂದ್ಯದಲ್ಲಿ ಚೀನಾದ ಯಿಂಗ್ ಜ್ಯೂ ಅವರನ್ನು ಎದುರಿಸಲಿದ್ದಾರೆ.
Related Articles
Advertisement
ಪ್ಯಾರಾಲಿಂಪಿಕ್ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಕ್ರೀಡಾಪಟುಗಳು ನಿರಾಸೆ ಅನುಭವಿಸಿದ್ದಾರೆ. ವನಿತಾ 50 ಕೆಜಿ ವಿಭಾಗದಲ್ಲಿ ಸಕೀನಾ ಖಾತುನ್ 5ನೇ ಸ್ಥಾನ ಪಡೆದರೆ, ಇದೇ ತೂಕದ ಪುರುಷರ ಸ್ಪರ್ಧೆಯಲ್ಲಿ ಜೈದೀಪ್ ಮೂರೂ ಪ್ರಯತ್ನದಲ್ಲಿ ವಿಫಲರಾದರು. 2014ರ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತೆಖಾತುನ್ ಮೊದಲ ಪ್ರಯತ್ನದಲ್ಲಿ 90 ಕೆಜಿ, ಅಂತಿಮ ಸುತ್ತಿನಲ್ಲಿ 93 ಕೆಜಿ ಭಾರವೆತ್ತಿದರು. ಖಾತುನ್ ಕಾಮನ್ವೆಲ್ತ್ ಗೇಮ್ಸ್ ಪದಕ ಗೆದ್ದ ಭಾರತದ ಏಕೈಕ ಪ್ಯಾರಾಲಿಂಪಿಯನ್ ಎಂಬುದು ವಿಶೇಷ. ಅವರು 2014ರ ಗ್ಲಾಸ್ಗೋ ಗೇಮ್ಸ್ ನಲ್ಲಿ ಕಂಚು ಜಯಿಸಿದ್ದರು. 2018ರ ಪ್ಯಾರಾ ಏಷ್ಯಾ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.