Advertisement

ಜ್ಞಾನ ನೀಡುವ ಭಗವಂತ ಭವಾನೀ ಶಂಕರ

03:45 AM Feb 12, 2017 | Harsha Rao |

ಹೆಬ್ರಿ: ಸಂಪೂರ್ಣ ಶಿಥಿಲವಾಗಿದ್ದ ದೇವಸ್ಥಾನವನ್ನು ಅತೀ ಕಡಿಮೆ ಅವಧಿಯಲ್ಲಿ ಸರ್ವರ ಸಹಕಾರದಿಂದ ಸುಂದರ ಹಾಗೂ ಸಂಪೂರ್ಣ ಜೀರ್ಣೋದ್ಧಾರಗೊಳಿಸಿ ಭಗವಂತನೆ ಕೃಪೆಗೆ ಪಾತ್ರರಾಗಿದ್ದೀರಿ. ನಮಗೆ ಜ್ಞಾನವನ್ನು ನೀಡುವಂತ ಭಗವಂತನೆಂದರೆ ಈಶ್ವರ ಅರ್ಥಾತ್‌ ಭವಾನೀ ಶಂಕರ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

Advertisement

ಅವರು ಭೈರಂಜೆ ಶ್ರೀ ಭವಾನೀ ಶಂಕರ ದೇವಸ್ಥಾನದಲ್ಲಿ ಫೆ. 3ರಿಂದ ಆರಂಭಗೊಂಡು 10ರ ವರೆಗೆ ನಡೆದ ಅಷ್ಟಬಂಧಸಹಿತ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಅಂಗವಾಗಿ ಗುರುವಾರ ಜರಗಿದ ಧಾರ್ಮಿಕ ಸಭೆ ಯಲ್ಲಿ ಆಶೀರ್ವಚನ ನೀಡಿದರು.

ಶಾಸಕ ವಿನಯ ಕುಮಾರ್‌ ಸೊರಕೆ ಅಧ್ಯಕ್ಷತೆ ವಹಿಸಿದ್ದರು ಜಿ.ಪಂ. ಸದಸ್ಯೆ ಚಂದ್ರಿಕಾ ಕೇಲ್ಕರ್‌, ವೀರಭದ್ರ
ದೇವಸ್ಥಾನದ ಕಾರ್ಯಾಧ್ಯಕ್ಷ ಗೋವರ್ಧನ ದಾಸ್‌ ಹೆಗ್ಡೆ, ಉದ್ಯಮಿ ಶಿವಪ್ರಸಾದ್‌ ಹೆಗ್ಡೆ, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೇವೇಂದ್ರ ವಾಗೆÛ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ ನಾಯಕ್‌ ಆತ್ರಾಡಿ, ಡಾ| ಪಾದೆಕಲ್ಲು ವಿಷ್ಣು ಭಟ್ಟ, ಕೊಡಿಬೆಟ್ಟು ಗ್ರಾ.ಪಂ. ಅಧ್ಯಕ್ಷ ರಾಜು ಪೂಜಾರಿ, ಅನಂತ ಪದ್ಮನಾಭ ನಾಯಕ್‌, ಕ್ಷೇತ್ರದ ಪ್ರಧಾನ ತಂತ್ರಿ ಯಫìಲೆ ಸುಬ್ರಹ್ಮಣ್ಯ ಕೃಷ್ಣ ಪರಾಡ್ಕರ್‌, ವಿಷ್ಣು ತೆಂಡುಲ್ಕರ್‌, ರವೀಂದ್ರ ನಾಯಕ್‌, ಹರಿದಾಸ ಕಾಮತ್‌, ಅಪ್ಪಿ ನಾಯ್ಕ, ಸುರೇಶ್‌ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಮಧ್ಯಾಹ್ನ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಧಿಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಪ್ರಭಾಕರ ಪ್ರಭು ಪ್ರಸ್ತಾವನೆಗೈದರು. ದೇವೇಂದ್ರ ಸ್ವಾಗತಿಸಿ, ರವೀಂದ್ರ ನಾಯಕ್‌, ದಿನೇಶ್‌, ಎಚ್‌.ಎನ್‌. ನಟರಾಜ್‌ ಕಾರ್ಯಕ್ರಮ ನಿರೂಪಿಸಿ, ಚಂದ್ರಶೇಖರ ನಾಯ್ಕ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯರಿಂದ ನೃತ್ಯ ಸಂಗಮ ಕಾರ್ಯಕ್ರಮ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next