Advertisement

ಇಂದಿನಿಂದ ರತ್ನಪುರಿಯಲ್ಲಿ ಭಾವೈಕ್ಯತೆ ಜಾತ್ರೆ

03:00 PM Mar 06, 2021 | Team Udayavani |

ಹುಣಸೂರು: ಹಿಂದೂ ಮುಸ್ಲಿಂ ಭಾವೈಕ್ಯತೆ ಮೆರೆಯುವ  ಹುಣಸೂರು ತಾಲೂಕಿನ ರತ್ನಪುರಿ ಶ್ರೀ ಆಂಜನೇಯ ಸ್ವಾಮಿ ಜಾತ್ರೆ ಮತ್ತು ಜಮಾಲ್‌ ಬೀಬಿ ಮಾ ಸಾಹೇಬ್‌ ಗಂಧೋತ್ಸವ ಹಾಗೂ ಉರೂಸ್‌ ಮಾ.6 ರಿಂದ 8ರವರೆಗೆ ಜರುಗಲಿದ್ದು, ಈಗಾಗಲೇ ಜಾತ್ರಾಮಾಳದಲ್ಲಿ ಜಾನುವಾರು ಪರಿಷೆ ಆರಂಭವಾಗಿದೆ.

Advertisement

ಇತಿಹಾಸ ಪ್ರಸಿದ್ಧ ರತ್ನಪುರಿ ಜಾತ್ರೆಗೆ ತನ್ನದೇ ಆದ ಐತಿಹ್ಯವಿದ್ದು, ಹಿಂದೂ, ಮುಸ್ಲಿಂ ಸಮುದಾಯ ಒಟ್ಟಾಗಿ ಜಾತ್ರೆ ನಡೆಸುವುದು, ಆಂಜನೇಯಸ್ವಾಮಿಗೆ ಹಣ್ಣು,ಕಾಯಿ, ಜವನದ ಪೂಜೆ ಸಲ್ಲಿಸಿದರೆ. ಆಂಜನೇಯಸ್ವಾಮಿ ದೇವಾ ಲಯದ ಬಳಿಯೇ ಇರುವಜಮಾಲ್‌ ಬೀಬೀ ಮಾ ಸಾಹೇಬ ದರ್ಗಾಕ್ಕೂ ಪೂಜೆ ಸಲ್ಲಿಸಿ, ದೂಪ ಹಾಕಿ, ಜಾತ್ರಾ ಮಾಳದಲ್ಲಿ ಸಿಹಿ ಬೂಂದಿ ಖರೀದಿಸಿ ಮನೆಗೆ ಕೊಂಡೊ ಯ್ಯುವುದು ಇಲ್ಲಿನ ವಿಶೇಷ. ವಿಶಾಲವಾದ ಜಾತ್ರಾಮಾಳದಲ್ಲಿ ಕಳೆದ 15 ದಿನ ಗಳಿಂದಲೇ ಜಾನುವಾರು ಜಾತ್ರೆ(ಪರಿಷೆ) ನಡೆಯುತ್ತಿದ್ದು, ಜಾತ್ರಾಮಾಳದಲ್ಲಿ ಜಾನುವಾರುಗಳದ್ದೇ ಪಾರುಪತ್ಯ ನಡೆಯುತ್ತಿದೆ. ಜಾತ್ರೆಗೆ ತೆರಳಲು ಹುಣಸೂರಿನಿಂದ ಭಾನುವಾರ ಬೆಳಗ್ಗೆಯಿಂದ ರಾತ್ರಿಯಿಡೀ ಕೆಎಸ್‌ಆರ್‌ಟಿಸಿ, ಬಸ್‌ ವ್ಯವಸ್ಥೆ ಕಲ್ಪಿಸಿದ್ದರೆ, ಖಾಸಗಿ ವಾಹನಗಳ ವ್ಯವಸ್ಥೆಯೂ ಇರಲಿದೆ.

ಮಾ.6ರಂದು ಧರ್ಮಾಪುರ ಗ್ರಾಮಸ್ಥರಿಂದ ಬೆಳಗ್ಗೆ 7.ರಿಂದ 8.30ರವರೆಗೆ ದೇವಾಲಯದ ಬಳಿ ಕೊಂಡೋತ್ಸವ ನಡೆಯಲಿದೆ. ಮಧ್ಯಾಹ್ನ 12 ರಿಂದ ಅನ್ನ ಸಂತರ್ಪಣೆ ಹಾಗೂ ಮಧ್ಯಾಹ್ನ 12.30ರಿಂದ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ.

ಜಮಾಲ್ ಬೀಬೀ ಮಾ ಸಾಹೇಬ ಉರೂಸ್ :

ಮಾ.7ರ ರಾತ್ರಿ 8ಕ್ಕೆ ಗಂಧೋತ್ಸವ ಮೆರವಣಿಗೆ ಹಾಗೂ ಜರಬ್‌ ಕಾರ್ಯಕ್ರಮವಿರಲಿದೆ. ಅಲ್ಲದೆ ಜಮಾಲ್‌ ಬೀಬೀ ಮಾ ಸಾಹೇಬ ದರ್ಗಾಕ್ಕೆ ವಿಶೇಷ ಪೂಜೆ, ದೀಪೋತ್ಸವ ನಡೆಯಲಿದೆ ಎಂದು ಉರೂಸ್‌ ಕಮಿಟಿ ಸದಸ್ಯರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next