Advertisement

ಮಾಣಿಕ್‌ ಬದಲು ಭೌಮಿಕ್‌ ಸಿಎಂ? ತ್ರಿಪುರದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ

08:06 PM Mar 03, 2023 | Team Udayavani |

ನವದೆಹಲಿ:ತ್ರಿಪುರ ವಿಧಾನಸಭೆ ಚುನಾವಣೆಯಲ್ಲಿ ಸರಾಗವಾಗಿ ಬಹುಮತ ಗಳಿಸಿ ಜಯ ಸಾಧಿಸಿರುವ ಬಿಜೆಪಿ ಈಗ ಮುಖ್ಯಮಂತ್ರಿ ಮಾಣಿಕ್‌ ಸಹಾರನ್ನು ಕೈಬಿಟ್ಟು, ಬೇರೊಬ್ಬರಿಗೆ ಸಿಎಂ ಸ್ಥಾನ ನೀಡುವ ಸಾಧ್ಯತೆಯಿದೆಯೇ?
ಹೌದು ಎನ್ನುತ್ತಿವೆ ಮೂಲಗಳು. ಅದಕ್ಕೆ ಪೂರಕವೆಂಬಂತೆ ಶುಕ್ರವಾರ ನಿರ್ಗಮಿತ ಸಿಎಂ ಮಾಣಿಕ್‌ ಸಹಾ ಅವರು ರಾಜ್ಯಪಾಲ ಸತ್ಯದೇವ್‌ ನರೈನ್‌ ಆರ್ಯರನ್ನು ಭೇಟಿ ಮಾಡಿ, ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ, ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಸದ್ಯದಲ್ಲೇ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಹೆಸರನ್ನು ನಿರ್ಧರಿಸಲಾಗುತ್ತದೆ. ಮಾ.8ರಂದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಬಿಜೆಪಿ ತಿಳಿಸಿದೆ.

ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್‌ ಅವರನ್ನು ಸಿಎಂ ಸ್ಥಾನಕ್ಕೇರಿಸುವ ಬಗ್ಗೆ ಪಕ್ಷ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಅತಿದೊಡ್ಡ ಕೊಡುಗೆ ನೀಡಿದವರು ಮಹಿಳೆಯರು. ಅಲ್ಲದೇ, 2024ರ ಲೋಕಸಭೆ ಚುನಾವಣೆಗೆ ರಾಜ್ಯಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೇ ಹೊಸ ಸಂದೇಶವೊಂದನ್ನು ನೀಡುವ ಉದ್ದೇಶದಿಂದ ಬಿಜೆಪಿ, ಈ ಬಾರಿ ಭೌಮಿಕ್‌ರಿಗೆ ಸಿಎಂ ಸ್ಥಾನ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಹಕ್ಕು ಮಂಡಿಸಿದ ಸಂಗ್ಮಾ:
ಇನ್ನೊಂದೆಡೆ, ಮೇಘಾಲಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಎನ್‌ಪಿಪಿ ಅಧ್ಯಕ್ಷ ಕಾನ್ರಾಡ್‌ ಕೆ.ಸಂಗ್ಮಾ ಅವರು ಶುಕ್ರವಾರ ರಾಜ್ಯಪಾಲ ಫ‌ಗು ಚೌಹಾಣ್‌ರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಬಿಜೆಪಿ ಮತ್ತು ಇತರರ ಬೆಂಬಲದೊಂದಿಗೆ ಸರ್ಕಾರ ರಚಿಸುವುದಾಗಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next