Advertisement

ಬುದ್ಧ, ಬಸವ, ಅಂಬೇಡ್ಕರ್‌ ಕಾಲಾತೀತರು

10:04 AM Nov 26, 2021 | Team Udayavani |

ಬೆಂಗಳೂರು: ತ್ಯಾಗ ಮೂಲ ಗುಣವನ್ನು ಹೊಂದಿದ್ದ ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಕಾಲಾತೀತರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 72ನೇ ಸಂವಿಧಾನ ದಿನಾಚರಣೆ ಅಂಗವಾಗಿ ವಿಶ್ವ ಬುದ್ಧ ಧಮ್ಮ ಸಂಘ ಮತ್ತು ನಾಗಸೇನಾ ಬುದ್ಧ ವಿಹಾರ ವತಿಯಿಂದ ಗುರುವಾರ ಸದಾಶಿವ ನಗರದ ನಾಗಸೇನಾ ವಿದ್ಯಾಲಯ ಮೈದಾನನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಬೌದ್ಧ ಧಮ್ಮಾಧಿವೇಶ ಉದ್ಘಾಟಿಸಿ ಮಾತನಾಡಿದರು.

Advertisement

ಬುದ್ಧ, ಬಸವ ಹಾಗೂ ಅಂಬೇ ಡ್ಕರ್‌ ಲೋಕ ಕಂಡ ಮಹಾ ಸಾಧಕ ರಾಗಿದ್ದು, ಸಾವಿನ ನಂತರವೂ ಹೇಗೆ ಬದುಕಬೇಕು ಎಂಬುದು ಅವರಿಗೆ ಇತ್ತು. ತ್ಯಾಗ ಮೂಲ ಗುಣ ವಾಗಿ ಹೊಂದಿದ್ಧ ಅವರ ಜೀವನ ಎಲ್ಲರಿಗೂ ಆದರ್ಶವಾಗಿದೆ. ಸದ್ಯ ಇಂತಹ ಮಹನೀಯರ ಆದರ್ಶನ ಗಳ ಜತೆಗೆ ಆಧುನಿಕ ತಂತ್ರಜ್ಞಾನ ಕಡೆ ಸಾಗಬೇಕಿದೆ.

ಬೇರುಗಳನ್ನು ಗಟ್ಟಿ ಯಾಗಿ ಇಟ್ಟುಕೊಂಡು ಆಧುನಿಕತೆ, ತಂತ್ರಜ್ಞಾನದ ಕಡೆ ಸಾಗುವುದೇ ನಮ್ಮ ಮುಂದಿರುವ ಸವಾಲು ಎಂದು ಹೇಳಿದರು. ಬುದ್ಧ ನನ್ನ ಮನಸಿಗೆ ಬಹಳ ಪ್ರಿಯವಾದ ವ್ಯಕ್ತಿ. ಅಮೆರಿಕಾದ ಯಾವುದೇ ಕಾರ್ಪೋ ರೇಟ್‌ ಕಂಪನಿಗೆ ಹೋದರು ಅಲ್ಲಿ ಬುದ್ಧ ಮೂರ್ತಿ ಇರುತ್ತದೆ. ಅದು ಬುದ್ಧನ ಪ್ರಭಾವ, ಆತ ಹೊಂದಿರುವ ಶಕ್ತಿ.

ಬುದ್ಧನ ಶಾಂತಿ ಸಾಧನೆಗೆ ಜಗಮೆ ಚ್ಚಿದ್ದು, ಇಂದಿಗೂ ಬುದ್ಧನ ನೆನೆಯು ತ್ತಿದ್ದೇವೆ ಎಂದು ಸ್ಮರಿಸಿದರು. ನಾಗಸೇನಾ ಬುದ್ಧ ವಿಹಾರ ವಿದ್ಯಾರ್ಥಿಗಳಿಗೆ ಬುದ್ಧನ ಗುಣಗಳಿವೆ. ವಿಹಾರ ನಿರ್ಮಿಸಿದ ಬಸಲಿಂಗಪ್ಪ ಅವರು ಬದ್ಧತೆ ಹೊಂದಿದ್ದ ನಾಯಕರಾಗಿದ್ದು, ಸಮಾಜ ಸೇವೆಗೆ ಅವರ ಜೀವ ಮುಡಿಪಿಟ್ಟಿದ್ದರು.

ಸದ್ಯ ನಾಗಸೇನಾ ಬುದ್ಧ ವಿಹಾರ ಅತ್ಯುತ್ತಮ ಕಾರ್ಯ ಮಾಡುತ್ತಿದ್ದು, ಸಂಸ್ಥೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದರು. “ಸಂವಿಧಾನವನ್ನು ಉಳಿಸಿಸೋಣ, ಬದುಕನ್ನು ಕಟ್ಟೋಣ, ದೇಶವನ್ನು ಬೆಳೆಸೋಣ’ ಎಂಬ ಸಂಕಲ್ಪವನ್ನು ಮುಖ್ಯಮಂತ್ರಿಗಳು ಮಾಡಿದರು.

Advertisement

ಬುದ್ಧ – ಬೀಮರ ಸಂದೇಶಗಳ ಪ್ರಸ್ತುತತೆ ಕುರಿತ ಚಿಂತನ ಮಂಥನಾ ಗೋಷ್ಠಿ, ಸಂವಿಧಾನ ಪ್ರಸ್ತಾವನೆ ಪಠಣ ಇದೇ ವೇಳೆ ಜರುಗಿತು. ಡಾ.ಎಂ.ವೆಂಕಟಸ್ವಾಮಿ, ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ, ವಿವಿಧ ಮಠಾಧಿಪತಿಗಳು ಇತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next