Advertisement

ಉಗ್ರ ನಂಟು: ಎನ್ಐಎಯಿಂದ ಭಟ್ಕಳದ ಇಬ್ಬರ ವಿಚಾರಣೆ ಮಾಡಿ ಬಿಡುಗಡೆ

08:15 PM Jul 31, 2022 | Team Udayavani |

ಭಟ್ಕಳ: ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧ ಪಟ್ಟಂತೆ ಭಟ್ಕಳದ ಸಹೋದರರಿಬ್ಬನ್ನು ಬೆಂಗಳೂರು ಹಾಗೂ ದೆಹಲಿಯ ಎನ್ಐಎ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ದೆಹಲಿಗೆ ಬರುವಂತೆ ನೋಟಿಸ್ ನೀಡಿ ಬಿಟ್ಟಿದ್ದಾರೆ.

Advertisement

ನಗರದ ಮುಖ್ಯ ರಸ್ತೆಯ ನಿವಾಸಿ ಅಬ್ದುಲ್ ಮುಕ್ತದಿರ್ ಹಾಗೂ ಆತನ ಸಹೋದರನನ್ನು ಎನ್ಐಎ ಅಧಿಕಾರಿಗಳು ರವಿವಾರ ಬೆಳಗಿನ ಜಾವ ವಶಕ್ಕೆ ತೆಗೆದುಕೊಂಡು ಮಂಕಿಯಲ್ಲಿ ವಿಚಾರಣೆ ನಡೆಸಿದ್ದರು. ಬೆಳಗ್ಗೆಯಿಂದ ಸಂಜೆಯ ತನಕ ವಿಚಾರಣೆ ನಡೆಸಿದ ನಂತರ ಸಹೋದರರನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಬರುವಂತೆ ನೋಟಿಸ್ ಕೊಟ್ಟು ತಂಡ ವಾಪಾಸಾಗಿದ್ದು,ಸ್ಥಳೀಯ ಪೊಲೀಸರು ಸಹೋರರಿಬ್ಬರನ್ನು ಕರೆದುಕೊಂಡು ಬಂದು ಅವರ ಕುಟುಂಬದವರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಎನ್ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದಿಂದ ರವಿವಾರ ಬೆಳಗಿನ ಜಾವ ಅವರ ಮನೆಯನ್ನು ಶೋಧ ಮಾಡಿ ಸಹೋದರಿಬ್ಬರನ್ನು ವಶಕ್ಕೆ ಪಡೆದಿದ್ದರು. ಅಲ್ಲಿಂದ ಅವರನ್ನು ವಿಚಾರಣೆಗಾಗಿ ಮಂಕಿಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಅವರನ್ನು ದೆವಿವಿಧ ರೀತಿಯಲ್ಲಿ ಪ್ರಶ್ನೆ ಮಾಡಿದ್ದರು.

ಅಬ್ದುಲ್ ಮುಕ್ತದಿರ್ ಪ್ರಿಂಟಿಂಗ್ ಕೆಲಸ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಐಸಿಸ್ ಬಗ್ಗೆ ಮೃದು ಧೋರಣೆಯನ್ನು ಹೊಂದಿದ್ದಲ್ಲದೇ ಕಮೆಂಟ್ ಗಳನ್ನು ಕೂಡಾ ಮಾಡುತ್ತಿದ್ದ ಎನ್ನಲಾಗಿದೆ. ಈತ ಐಸಿಸ್ ಬರಹಗಳನ್ನು ತರ್ಜುಮೆ ಮಾಡಿ ಪ್ರಕಟಿಸುತ್ತಿದ್ದಾನೆ ಎನ್ನುವ ಸಂಶಯದ ಮೇಲೆ ವಶಕ್ಕೆ ಪಡೆದಿದ್ದು, ವಿಚಾರಣೆಯಲ್ಲಿ ಯಾವ ಯಾವ ವಿಚಾರ ಪ್ರಸ್ತಾಪವಾಗಿದೆ ಎನ್ನುವುದು ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next