Advertisement
ಈತ ತನ್ನ ಬಿ.ಕಾಂ. ಎರಡನೇ ವರ್ಷಕ್ಕೆ ಕಾಲೇಜಿನಿಂದ ಹೊರ ಬಂದು ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು ಎನ್ನುವ ಹಂಬಲದೊಂದಿಗೆ ಬರೀಗೈಯಲ್ಲಿ ಕಾಲ್ನಡಿಗೆಯನ್ನು ಪ್ರಪಂಚ ಸುತ್ತಲು ಹೊರಟು ನಿಂತಾದ ಈತನ ಪಾಲಕರಿಗೆ ಉಸಿರೇ ನಿಂತಂತಾಗಿತ್ತು. ಆದರೂ ಸಾವರಿಸಿಕೊಂಡು ಮಗನ ಹಠಸಾಧನೆಗೆ ಒಪ್ಪಿಗೆ ನೀಡುವ ಮೂಲಕ ಸಾತ್ ನೀಡಿದ್ದಾರೆ ತಂದೆ ಹಾಗೂ ತಾಯಿ.
Related Articles
Advertisement
ಕಾಲ್ನಡಿಗೆಯಲ್ಲಿಯೇ ಈಗಾಗಲೇ ರಾಜಸ್ಥಾನ, ಹರ್ಯಾಣ, ದೆಹಲಿ, ಉತ್ತರಾಖಂಡ, ಹಿಮಾಚಲ, ಚಂಡೀಘಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ, ಕೇರಳವನ್ನು ಕ್ರಮಿಸಿರುವ ಈತ ಮಂಗಳೂರು ಮೂಲಕ ಕರ್ನಾಟಕವನ್ನು ಪ್ರವೇಶಿಸಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಅ.19ರಂದು ಮಧ್ಯಾಹ್ನ ತಲುಪಿದ್ದಾನೆ.
ಇಲ್ಲಿ ಗೋವಾ ಮೂಲಕ ತನ್ನ ಕಾಲ್ನಡಿಗೆಯನ್ನು ಮುಂದುವರಿಸುವ ಗುರಿಯನ್ನು ಹೊಂದಿದ್ದ ಈತ ದಿನಾಲೂ 20-30 ಕಿ.ಮಿ. ದೂರ ಕ್ರಮಿಸುತ್ತಾನೆ. ಸೈಬೀರಿಯಾ ತಲುಪಲು ಇನ್ನೂ 10 ವರ್ಷಗಳು ಬೇಕು ಎನ್ನುವ 19ರ ಹರೆಯದ ರಹೋನ್ ಮುಖದಲ್ಲಿ ಎನೋ ಸಾಧನೆ ಮಾಡಿದ ಭಾವ ಮೂಡುತ್ತದೆ.
ಒಟ್ಟಾರೆ ಛಲದಿಂದ ಹೊರಟ ಈತನ ಯಾತ್ರೆ ಕಳೆದ ಒಂದು ವರ್ಷದಿಂದ ಸುಗಮವಾಗಿ ಸಾಗುತ್ತಿದ್ದು ತಾನು ಭೇಟಿ ನೀಡಿದ ಪ್ರದೇಶದಲ್ಲೆಲ್ಲಾ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ನನಗೆ ಹಣದ ಅವಶ್ಯಕತೆ ಇಲ್ಲ, ಜನರು ಊಟ, ತಿಂಡಿ ವಸತಿ ವ್ಯವಸ್ಥೆಯನ್ನು ಮಾಡುತ್ತಾರೆ, ಯಾರಲ್ಲಿಯೂ ಏನನ್ನು ಕೇಳುವುದಿಲ್ಲ ಎನ್ನುವ ಈತ ನೀಡಿದ್ದನ್ನು ಸ್ವೀಕರಿಸುತ್ತೇನೆ ಎನ್ನುತ್ತಾರೆ. ಒಟ್ಟಾರೆ 18ನೇ ವರ್ಷಕ್ಕೆ ಪ್ರಪಂಚ ಪರ್ಯಟನೆಗೆ ಹೊರಟ ಈತನ ಯಾತ್ರೆ ಸುಗಮವಾಗಿ ಸಾಗಲಿ ಎನ್ನುವ ಹಾರೈಕೆಯೊಂದಿಗೆ ಬೀಳ್ಕೊಡಲಾಯಿತು.