Advertisement

ವರದಕ್ಷಣೆ ಕಿರುಕುಳ : 6 ತಿಂಗಳ ಜೈಲುವಾಸದ ಶಿಕ್ಷೆ ನೀಡಿದ ನ್ಯಾಯಾಲಯ

02:58 PM Sep 25, 2021 | Team Udayavani |

ಭಟ್ಕಳ: ವರದಕ್ಷಣೆ ಕಿರುಕುಳ ನೀಡಿದ ವ್ಯಕ್ತಿಯೋರ್ವರಿಗೆ ನ್ಯಾಯಾಲಯ 6 ತಿಂಗಳು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ಹೊಸನಗರದ ಮೊಹಮ್ಮದ್ ಶೌಕತ್ ಅಲಿ ಹಾಗೂ ಬದ್ರಿಯಾ ಕಾಲೋನಿಯ ಬಿಬಿ ಖತೀಜಾ ಅವರ ಮದುವೆಯು 1996 ರಲ್ಲಿ ನಡೆದಿತ್ತು. ಮೊದಲು ಸರಿಯಾಗಿ ಸಂಸಾರ ನಡೆದಿದ್ದರೂ ಸಹ ನಂತರ ಪತಿ ಮೊಹಮ್ಮದ್ ಶೌಕತ್  ಅಲಿ ಅವರು ಪತ್ನಿ ಬಿಬಿ ಖತೀಜಾರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಮಾಡಿದ್ದು ಸೆಕ್ಷನ್ 4989(ಎ) ಅಡಿಯಲ್ಲಿ ಭಟ್ಕಳ ನ್ಯಾಯಾಲಯದಲ್ಲಿ ಪತ್ನಿ ಬಿಬಿ ಖತೀಜಾ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ:ಆರೋಗ್ಯ ಸೇವೆಗೆ ಸರ್ಕಾರ ಬದ್ಧ,ಅರೋಗ್ಯ ಸೇವಾ ಕೇಂದ್ರಗಳ ನಿರ್ಮಾಣಕ್ಕೆ ಆದ್ಯತೆ:ಸಿಎಂ ಬೊಮ್ಮಾಯಿ

ತನಿಖೆಯನ್ನು ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಫವಾಜ್ ಪಿ.ಎ. ಅವರು ಆರೋಪಿ ಮೊಹಮ್ಮದ್ ಶೌಕತ್ ಅಲಿ ಅವರಿಗೆ 6 ತಿಂಗಳ ಸಜೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ವಿವೇಕ ಆರ್. ನಾಯ್ಕ ಅವರು ವಾದಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next