Advertisement

ಭಟ್ಕಳ : ಟ್ಯಾಕ್ಸಿ ಚಾಲಕನ ಮೇಲೆ ಸಬ್ ಇನ್ಸ್ ಪೆಕ್ಟರ್ ಹಲ್ಲೆ : ಸೂಕ್ತ ಕ್ರಮಕ್ಕೆ ಆಗ್ರಹ

08:47 PM Jun 16, 2022 | Team Udayavani |

ಭಟ್ಕಳ : ಮಂಕಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಅಶೋಕ್ ಎನ್ನುವವರು ಟ್ಯಾಕ್ಸಿ ಚಾಲಕನೋರ್ವನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದು ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಮನವಿಯಲ್ಲಿ ಟ್ಯಾಕ್ಸಿ ಚಾಲಕ ಗಣಪತಿ ಹರೀಶ ನಾಯ್ಕ ಎನ್ನುವವರು ತಮ್ಮ ಟ್ಯಾಕ್ಸಿಯನ್ನು ಚಲಾಯಿಸಿಕೊಂಡು ಕುಮಟಾದಿಂದ ಧರ್ಮಸ್ಥಳಕ್ಕೆ ಬಾಡಿಗೆಗೆ ಹೋಗುತ್ತಿರುವಾಗ ರಾತ್ರಿ ಅನಂತವಾಡಿಯ ಸಮೀಪ ವಾಹನವನ್ನು ನಿಲ್ಲಿಸಲು ಸೂಚಿಸಿದ್ದಾರೆ ಆದರೆ ಟ್ಯಾಕ್ಸಿ ಚಾಲಕ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದಕ್ಕೆ ಕುಪಿತಗೊಂಡ ಸಬ್ ಇನ್ಸಪೆಕ್ಟರ್ ಅಶೋಕ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ.

ಅಲ್ಲದೇ ಅವರ ವಾಹನದಲ್ಲಿರುವ ಪ್ಯಾಸೆಂಜರ್ ಎದುರಿಗೇ ಅವಾಚ್ಯ ಶಬ್ದಗಳಿಂದ ಬೈದು ಅವಮಾನಿಸಿದ್ದು ತೀವ್ರ ಖಂಡನೀಯವಾಗಿದೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಇದನ್ನೂ ಓದಿ : ರೇಣುಕಾ ಚೌಧರಿ ವಿರುದ್ಧ ಪ್ರಕರಣ ದಾಖಲು; ಕೊರಳಪಟ್ಟಿ ಹಿಡಿದ ಕೈ ನಾಯಕಿಯ ಹೊಸ ರಾಗ

ಮನವಿಯನ್ನು ಸ್ವೀಕರಿಸಿದ ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ ಅವರು ಕ್ರಮ ಕೈಗೊಳ್ಳುವ ಭರವಸೆಯನ್ನ ನೀಡಿದರು.

Advertisement

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ನವೀನ ನಾಯ್ಕ ಕುಮಟಾ, ನ್ಯಾಯವಾದಿ ಸಂತೋಷ ಎಂ. ನಾಯ್ಕ, ರಕ್ಷಾಣಾಧಿಕಾರಿ ಮಜೀದ್ ಭಟ್ಕಳ, ಕಾರ್ಯದರ್ಶಿ ಮೋಹನ ಭಟ್ಕಳ, ಶ್ರೀಕಾಂತ ಹೊನ್ನಾವರ, ರಂಜನ್ ದೇವಾಡಿಗ ಮುರ್ಡೇಶ್ವರ, ಸಂದೀಪ್ ಹೊನ್ನಾವರ, ಫಾರೂಕ್ ಮುರ್ಡೇಶ್ವರ, ಶ್ರೀಕಾಂತ ಹೊನ್ನಾವರ, ಸಂದೀಪ ಯಲ್ಲಾಪುರ, ಶ್ರೀನಿವಾಸ ಅಂಕೋಲ, ಸುಬ್ಬು ಕುಮಟಾ, ಫ್ರಾನ್ಸಿಸ್ ಕಾರವಾರ, ಫೈಸಲ್ ಭಟ್ಕಳ, ಮಂಜು ಭಟ್ಕಳ, ಫೈರೋಜ್ ಭಟ್ಕಳ ಮುಂತಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next