ಭಟ್ಕಳ: ನಗರದ ಹೂವಿನ ಚೌಕದ ಬಳಿ ಇರುವ ಅಂಗಡಿಯೊಂದರಲ್ಲಿ ಅಕ್ರಮವಾಗಿ ವಿದೇಶಿ ಸಿಗರೇಟುಗಳನ್ನು ಮಾಡುತ್ತಿದ್ದವರನ್ನು ಬಂದಿಸಿದ ಘಟನೆ ನಡೆದಿದೆ.
ಹೂವಿನ ಚೌಕದಲ್ಲಿರುವ ರೀಮ್ಸ್ ಅಂಗಡಿಯಲ್ಲಿ ಅಕ್ರಮವಾಗಿ ಸಿಗರೇಟು ಮಾರುತ್ತಿರುವ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ನಗರ ಠಾಣೆಯ ಪೊಲೀಸರು ಅಂಗಡಿಯಿಂದ ವಿದೇಶಿ ನಿರ್ಮಿತ ವಿನ್ ಕಂಪೆನಿಯ ಸುಮಾರು ರೂ.2,27,000 ಮೌಲ್ಯದ 3500 ತಂಬಾಕು ಸಹಿತ ಸಿಗರೇಟು ಪ್ಯಾಕೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಗರೇಟು ಪ್ಯಾಕೇಟ್‍ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಇಟ್ಟುಕೊಂಡಿದ್ದು ಪ್ಯಾಕೆಟ್‍ಗಳ ಮೇಲೆ ಕಾನೂನಾತ್ಮಕವಾದ ಘೋಷಣೆಗಳು ಇಲ್ಲ ಎನ್ನಲಾಗಿದೆ. ಪ್ರತಿ ಪ್ಯಾಕೆಟ್‍ಗಳ ಮೇಲೆ ಪ್ರತಿಶತ 85ರಷ್ಟು ಜಾಗಾದಲ್ಲಿ ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕರ ಎನ್ನುವ ಘೋಷಣೆ ಸಹ ಇಲ್ಲ ಎನ್ನಲಾಗಿದೆ.
18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಯಲ್ಲಪ್ಪ ಮಾದಾರ ಅವರು ದೂರು ನೀಡಿದ್ದು ಅವರು ನೀಡಿದ ದೂರಿನ್ವಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಂಗಡಿಯ ಮಾಲೀಕ ಬಂದರು ರಸ್ತೆ 2ನೇ ಕ್ರಾಸ್ ನಿವಾಸಿ ಮುರಜುಕ್ ಅಹ್ಮದ್ ತಂದೆ ಮಹಮ್ಮದ್ ಫಾರೂಕ್ ಎನ್ನುವವರ ಮೇಲೆ ಕಲಂ 6, 7(3), 22, 24 ಕೊಟ್ಟಾ-2003 ನಿಯಮ-2 ಸಿಗರೇಟ್ ಎಂಡ್ ಟೊಬ್ಯಾಕೋ ಪ್ರಾಡಕ್ಟ್, (ಪ್ಯಾಕಿಂಗ್ ಎಂಡ್ ಲ್ಯಾಟಿಂಗ್) ತಿದ್ದುಪಡಿ ರೂಲ್ಸ್ 2014ರನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ : ಶೇಡಿಮನೆ: ಜೀಪ್‌ಗೆ ಬೈಕ್ ಢಿಕ್ಕಿ: ಬೈಕ್ ಸವಾರನಿಗೆ ಗಾಯ