ಭಟ್ಕಳ: ತಾಲೂಕಿನಲ್ಲಿ ವೀಕೆಂಡ್ ಕರ್ಫ್ಯೂಗೆಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದುಬೆಳಗ್ಗೆಯಿಂದ ಜನರು ರಸ್ತೆಗಿಳಿಯದೇಆಡಳಿತದೊಂದಿಗೆ ಸ್ಪಂದಿಸಿರುವುದು ಸಂಪೂರ್ಣ ಯಶಸ್ಸಿಗೆ ಕಾರಣವಾಗಿದೆ.
ಬೆಳಗ್ಗೆ 6 ರಿಂದ 10 ರ ತನಕಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶನೀಡಲಾಗಿತ್ತಾದರೂ ಕೆಲವೊಂದುಕಿರಾಣಿ ಅಂಗಡಿಗಳಲ್ಲಿ ಬಿಟ್ಟರೆ ಬೇರೆಡೆಎಲ್ಲಿಯೂ ಕೂಡಾ ಜನಜಂಗುಳಿಕಂಡು ಬರಲಿಲ್ಲ.
ನಗರದಲ್ಲಿ ಕೇವಲಕೆಲವೇ ಕೆಲವು ಅಂಗಡಿಗಳು ಬಾಗಿಲುತೆರೆದುಕೊಂಡಿದ್ದು ನಂತರ ಹತ್ತು ಗಂಟೆನಂತರ ಅಗತ್ಯ ವಸ್ತುಗಳ ಅಂಗಡಿಗಳನ್ನುಕೂಡಾ ಮುಚ್ಚಲಾಗಿದ್ದು ಕೇವಲ ಔಷಧಅಂಗಡಿಗಳು, ಕ್ಲಿನಿಕ್‌ಗಳು ಮಾತ್ರಬಾಗಿಲು ತೆರೆದುಕೊಂಡಿವೆ.ರಾಜ್ಯದಲ್ಲಿ ಬಸ್ ಓಡಾಟಕ್ಕೆಯಾವುದೇ ನಿರ್ಬಂಧವಿಲ್ಲ ಎನ್ನುವುದನ್ನುಸರಕಾರ ಸ್ಪಷ್ಟಪಡಿಸಿದರೂ ಕೂಡಾಬಸ್ ನಿಲ್ದಾಣದಲ್ಲಿ ಜನರೇ ಇಲ್ಲದೇಬಸ್ ಓಡಿಸುವದೆಲ್ಲಿಗೆ ಎನ್ನುವಪ್ರಶ್ನೆ ಇಲಾಖೆಯದ್ದಾಗಿದೆ.
ಆದರೂಕೆಲವೊಂದು ದೂರ ಪ್ರಯಾಣದ ಬಸ್‌ಗಳು ಸಂಚರಿಸಿರುವುದು ಕಂಡು ಬಂತು.ಸದಾ ಜನರಿಂದ, ವಾಹನದಿಂದತುಂಬಿರುತ್ತಿದ್ದ ರಾಷ್ಟ್ರೀಯ ಹೆದ್ದಾರಿಇಂದು ಸಂಪೂರ್ಣ ಖಾಲಿಖಾಲಿಯಾಗಿತ್ತು. ದೂರದ ಲಾರಿಗಳು,ಸರಕು ಸಾಗಾಣಿಕೆ ವಾಹನಗಳು ಮಾತ್ರಆಗೊಂದು ಈಗೊಂದು ಎನ್ನುವಂತೆಓಡಾಡುತ್ತಿದ್ದು ಕೆಲವೊಂದು ಕಾರುಗಳುಮಾತ್ರ ಸಂಚರಿಸುವುದು ಕಂಡು ಬಂತು.ಗ್ರಾಮೀಣ ರಸ್ತೆಗಳೂ ಸ್ತಬ್ಧವಾಗಿದ್ದು,ಜನರೂ ಕೂಡಾ ಉತ್ತಮ ಬೆಂಬಲನೀಡಿದರು.ಪೊಲೀಸ್, ತಹಶೀಲ್ದಾರ್,ಪುರಸಭೆ, ಪಪಂ ಅಧಿಕಾರಿಗಳು ಗಸ್ತುತಿರುಗುತ್ತಿದ್ದು ಅಪರೂಪಕ್ಕೊಮ್ಮೆರಸ್ತೆಗಿಳಿಯುವವರನ್ನು ಪ್ರಶ್ನಿಸಿಕಳುಹಿಸುತ್ತಿದ್ದುದು ಕಂಡು ಬಂದಿದೆ.