Advertisement

ಭಟ್ಕಳ: ಅಕ್ರಮ ಕೋಣ ವಧೆ ; ಮಾಂಸ ಸಹಿತ ಆರೋಪಿ ಬಂಧನ

07:27 PM Jul 11, 2022 | Team Udayavani |

ಭಟ್ಕಳ: ನಗರದ ನಾಗಪ್ಪ ನಾಯಕ ರಸ್ತೆ 2ನೇ ಕ್ರಾಸ್‌ನಲ್ಲಿರುವ ಆಲ್ ತಯ್ಯಬ್ ಆಲ್ ಖತೀಬ್ ಮನೆಯ ಕಂಪೌಂಡ್ ಒಳಗಡೆ ಇರುವ ಖಾಲಿ ಜಾಗದಲ್ಲಿ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಕೋಣವೊಂದನ್ನು ವಧೆ ಮಾಡಿರುವ ಕುರಿತು ಮಾಹಿತಿ ಪಡೆದ ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಸುಮಾ ಬಿ.ಪಿ. ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಯನ್ನು ಇನಾಮುಲ್ಲಾ ಹಸನ್ ಖತೀಬ್ (27) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ನಾಗಪ್ಪ ನಾಯಕ ರಸ್ತೆ 2ನೇ ಕ್ರಾಸ್‌ನಲ್ಲಿರುವ ಆಲ್ ತಯ್ಯಬ್ ಆಲ್ ಖತೀಬ್ ಮನೆಯ ಕಂಪೌಂಡ್ ತಪಾಸಣೆ ನಡೆಸಿದಾಗ ಖಾಲಿ ಜಾಗದಲ್ಲಿ  ಇನಾಮುಲ್ಲಾ ಮಾರಾಟ ಮಾಡುವ ಉದ್ದೇಶದಿಂದ ಕೋಣವನ್ನು ವಧೆ ಮಾಡಿ ಸುಮಾರು 30 ಕೆ.ಜಿ. ಮಾಂಸ ಸಂಗ್ರಹಿಸಿದ್ದು ಕಂಡು ಬಂದಿದ್ದು ತಕ್ಷಣ ಆತನನ್ನು ಬಂಧಿಸಿ, ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಸುಮಾ ಬಿ.ಇ. ಅವರು ನೀಡಿದ ದೂರಿನನ್ವಯ ಸಬ್ ಇನ್ಸಪೆಕ್ಟರ್ ಹೆಚ್. ಬಿ. ಕುಡಗುಂಟಿ ಅವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next