Advertisement

Bhatkal : ಸಚಿವ ಮಂಕಾಳ ವೈದ್ಯರಿಗೆ ಅದ್ದೂರಿ ಸ್ವಾಗತ

09:43 PM May 28, 2023 | Team Udayavani |

ಭಟ್ಕಳ: ಶನಿವಾರವಷ್ಟೇ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮಂಕಾಳ ವೈದ್ಯ ಅವರು ಬೆಂಗಳೂರಿನಿಂದ ಬರುತ್ತಲೇ ಹೊನ್ನಾವರದಲ್ಲಿಯೇ ಅಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿ ಜಿಲ್ಲೆಗೆ ಬರಮಾಡಿಕೊಂಡಿದ್ದು ಸಾವಿರಾರು ಜನರು, ಬೈಕ್, ಕಾರ್ ರ‍್ಯಾಲಿಯ ಮೂಲಕ ಭಟ್ಕಳದ ತನಕ ಮೆರವಣಿಗೆ ನಡೆಸಿದರು.

Advertisement

ಮಂಕಾಳ ವೈದ್ಯ ಅವರು ತೆರೆದ ಜೀಪಿನಲ್ಲಿ ರಸ್ತೆಯುದ್ದಕ್ಕೂ ಕಾಯುತ್ತಾ ನಿಂತಿರುವ ಸಾವಿರಾರು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರು, ಮಕ್ಕಳು ಎಲ್ಲರನ್ನು ಕೈಬೀಸಿ ಅಭಿನಂದಿಸುತ್ತಾ ಸಾಗಿದ್ದು ಎಲ್ಲ ಕಡೆಗಳಲ್ಲಿಯೂ ಜನ ಸಾವಿರ ಸಾವಿರ ಸಂಖ್ಯೆಯಲ್ಲಿ ಇವರನ್ನು ಸ್ವಾಗತಿಸುವುದಕ್ಕೆ ನಿಂತಿರುವುದು ವಿಶೇಷವಾಗಿತ್ತು.

ಸಂಜೆ 5 ಗಂಟೆಯ ಸುಮಾರಿಗೆ ಹೊನ್ನಾವರಕ್ಕೆ ತಲುಪುತ್ತಲೇ ಹೊನ್ನಾವರ ಗ್ರಾಮದ ಮುಗ್ವಾದ ಹುಲಿಯಪ್ಪನಕಟ್ಟೆ ಹತ್ತಿರ ಇವರನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಹೆಚ್ಚಿವರಿ ಪೊಲೀಸ್ ವರಿಷ್ಟಾಧಿಕಾರಿ ಸಿ. ಟಿ. ಜಯಕುಮಾರ್, ಹೊನ್ನಾವರ ಮತ್ತು ಭಟ್ಕಳದ ತಹಸೀಲ್ದಾರ್, ತಾಲೂಕಾ ಮಟ್ಟದ ವಿವಿಧ ಅಧಿಕಾರಿಗಳು ಹಾರ ಹಾಕಿ ಹೂಗುಚ್ಚ ನೀಡಿ ಸ್ವಾಗತಿಸಿದರು.

ನಂತರ ತೆರೆದ ಜೀಪಿನಲ್ಲಿ ಬಂದ ಅವರು ಭಟ್ಕಳಕ್ಕೆ ಆಗಮಿಸುತ್ತಲೇ ಕಾರ್ಯಕರ್ತರ ಸಂಭ್ರಮ ಇಮ್ಮಡಿಗೊಂಡಿತ್ತು. ಇಲ್ಲಿನ ಶಂಶುದ್ಧೀನ್ ಸರ್ಕಲ್ ಹತ್ತಿರ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಪಕ್ಷದ ಮುಖಂಡರು, ವಿವಿಧ ಸಮಾಜದ ಮುಖಂಡರುಗಳು ಸಚಿವರನ್ನು ಕಂಡು ದೂರದಿಂದಲೇ ಅಭಿನಂದಿಸಿದರು. ಸಾವಿರಾರು ಬೈಕ್‌ಗಳಲ್ಲಿ ಬಂದಿದ್ದ ಕಾರ್ಯಕರ್ತರ ಮಂಕಾಳ ವೈದ್ಯದ ಪರ ಘೋಷಣೆ ಮುಗಿಲು ಮುಟ್ಟಿತ್ತು.

ಸರಳತೆ ಮೆರೆದ ಸಚಿವ
ಹಿರಿಯರೂ ಮಂಕಾಳ ವೈದ್ಯ ಅವರ ಗೆಲುವಿಗೆ ಅನೇಕ ವಿರೋಧಗಳ ನಡುವೆಯೂ ಶ್ರಮಿಸಿದ್ದ ಹಿರಿಯ ರಾಜಕಾರಣಿ, ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಎಲ್. ಎಸ್. ನಾಯ್ಕ ಅವರು ಶಂಶುದ್ಧೀನ್ ಸರ್ಕಲ್‌ನಲ್ಲಿ ಇರುವುದನ್ನು ಕಂಡ ಮಂಕಾಳ ವೈದ್ಯ ತಕ್ಷಣ ಜೀಪಿನಿಂದ ಕೆಳಗಿಳಿದು ಅವರ ಆಶೀರ್ವಾದ ಪಡೆದುಕೊಂಡಿರುವುದು ಅವರ ಸರಳತೆಗೆ ಸಾಕ್ಷಿಯಾಗಿತ್ತು. ಸಾವಿರಾರು ಜನರ ಮಧ್ಯೆ ಜೀಪಿನಿಂದ ಕೆಳಗಿಳಿದು ತಮ್ಮ ಗೆಲುವಿಗೆ ಶ್ರಮಿಸಿದ ಹಿರಿಯ ಜೀವವನ್ನು ಗೌರವಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Advertisement

ಪೊಲೀಸರ ಕಾರ್ಯ ಮೆಚ್ಚುಗೆ
ಸಾವಿರಾರು ಜನರು ಸೇರಿದ್ದು ಎರಡೂ ಕಡೆಗಳಲ್ಲಿ ಹೆದ್ದಾರಿ ಬ್ಲಾಕ್ ಆಗಿದ್ದರೂ ಸಹ ಅಂಬುಲೆನ್ಸ್ ಒಂದು ಬರುವುದನ್ನೆ ನೋಡಿ ತಕ್ಷಣ ವಾಹನಗಳನ್ನು, ಜನರನ್ನು ದೂರ ಸರಿಸಿ ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಹಿಂದೂ ಕಾರ್ಯಕರ್ತರ ಭಗವಾಧ್ವಜ
ಮಂಕಾಳ ವೈದ್ಯ ಅವರ ಗೆಲುವಿಗೆ ಭಟ್ಕಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರೂ ಶ್ರಮಿಸಿದ್ದು ಅತೀ ಹೆಚ್ಚಿನ ಮತಗಳಿಂದ ಆಯ್ಕೆಯಾಗಲು ಕಾರಣವಾಗಿತ್ತು. ಈ ಹಿಂದಿನ ಶಾಸಕ ಸುನಿಲ್ ನಾಯ್ಕ ಅವರು ಆರಂಭದಿಂದ ಕೊನೆಯ ತನಕವೂ ಹಿಂದೂ ಕಾರ್ಯಕರ್ತರನ್ನು ಕಡೆಗಣಿಸಿರುವುದೇ ಕಾರಣ ಎನ್ನುವುದು ಎಲ್ಲರ ಮಾತಾಗಿತ್ತು. ಅದು ಇಂದೂ ಕೂಡಾ ಮಂಕಾಳ ವೈದ್ಯ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಭಟ್ಕಳಕ್ಕೆ ಆಗಮಿಸಿದಾಗ ಕೂಡಾ ಪ್ರತಿಧ್ವನಿಸಿತ್ತು. ಹಲವಾರು ಹಿಂದೂ ಕಾರ್ಯಕರ್ತರು ಭಗವಾಧ್ವಜವನ್ನು ಹಿಡಿದು ಮಂಕಾಳ ವೈದ್ಯ ಅವರನ್ನು ಸ್ವಾಗತಿಸಿರುವುದು ಅವರನ್ನು ಈ ಹಿಂದೆ ಕಡೆಗಣನೆ ಮಾಡಿರುವುದಕ್ಕೆ ಸಾಕ್ಷಿಯಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next