Advertisement
ಅದರಲ್ಲೂ ಭಟ್ಟರ ಕೆಲಸದ ಶೈಲಿಯನ್ನು ತೀರಾ ಹತ್ತಿರದಿಂದ ನೋಡಿದ್ದಾರೆ. ಸದಾ ಹೊಸತನ್ನು ಯೋಚಿಸುತ್ತಾ, ತಾನು ಬರೆದ ದೃಶ್ಯವನ್ನೇ ಬದಲಿಸುತ್ತಾ, ಶೂಟಿಂಗ್ ಸ್ಪಾಟ್‌ನಲ್ಲೇ ಬದಲಾವಣೆ ಮಾಡುತ್ತಾ ಹೊಸದನ್ನು ಯೋಚಿಸುವ ಯೋಗರಾಜ್ ಭಟ್ಟರ ಕೆಲಸದ ಶೈಲಿಯನ್ನು ಅನಂತ್‌ನಾಗ್ ಇಷ್ಟಪಟ್ಟಿದ್ದಾರೆ ಮತ್ತು ಅದಕ್ಕೆ ಒಗ್ಗಿಕೊಂಡಿದ್ದಾರೆ.
Related Articles
Advertisement
ಮಲ್ಪೆಯಿಂದ ಬೆಂಗಳೂರಿಗೆ ವಾಪಾಸ್: “ಪಂಚರಂಗಿ’ಯಲ್ಲಿ ನಡೆದ ಘಟನೆಯನ್ನು ಹೇಳಬೇಕು. ಮಲ್ಪೆಯಲ್ಲಿ ಶೂಟಿಂಗ್ ಇತ್ತು. ನಾನು ಅಲ್ಲಿಗೆ ಹೋಗಿ, ಸ್ಕ್ರಿಪ್ಟ್, ಸೀನ್ ಎಂದಾಗ, ಇಲ್ಲಾ ಬರ್ತದೆ ಆಗ ಬರ್ತದೆ ಅಂತಿದ್ದಾರೆ. ಏಕೆಂದರೆ ಅವರಿಗೆ ಸ್ಕ್ರಿಪ್ಟ್ ಸರಿಯಾಗಿ ಕೂತಿರಲಿಲ್ಲ. ಅದು ಅವರ ಕೆಲಸದ ಶೈಲಿ. ನಾನು ಹೇಳಿದೆ, “ಯೋಗರಾಜ್ ಇದು ಯಾಕೋ ಸರಿ ಹೋಗ್ತಾ ಇಲ್ಲ. ಈ ತರಹದ ಪಾತ್ರಕ್ಕೆ ಇದು ಹೊಂದಿಕೆಯಾಗುತ್ತಿಲ್ಲ’ ಎಂದೆ.
ಆಗ ಭಟ್ಟರು, “ಒಂದು ಕೆಲ್ಸ ಮಾಡ್ತೀನಿ, ನೀವು ಬೆಂಗಳೂರಿಗೆ ಹೋಗಿ. ಒಂದ್ ಹದಿನೈದು ದಿವಸದ ನಂತರ ಬನ್ನಿ. ಅಷ್ಟೊತ್ತಿಗೆ ನಾನು ರೆಡಿಮಾಡಿಟ್ಟಿರ್ತೀನಿ’ ಅಂದ್ರು. ಆ ನಂತರ 15 ದಿನದ ನಂತರ ಶೂಟಿಂಗ್ ಹೋಗಿ ಮುಗಿಸಿಕೊಂಡು ಬಂದೆ. ಈ ತರಹ ನನಗೆ ಬಹಳ ರೂಢಿಯಾಗಿದೆ ಅವರ ಜೊತೆ. ಆದರೆ ಭಟ್ಟರು ಅವರ ಕೆಲಸದಲ್ಲಿ ಖುಷಿಕಾಣುತ್ತಾರೆ ಮತ್ತು ಯಶಸ್ಸು ಕೂಡಾ ಕಂಡಿದ್ದಾರೆ.
ವಾಸ್ತುಪ್ರಕಾರದ ಕೋಪಿಷ್ಠ ಬದಲಾದ: “ವಾಸ್ತುಪ್ರಕಾರ’ ಚಿತ್ರದಲ್ಲೂ ಹೀಗೆ ಆಯಿತು. ಮೊದಲು ಆ ಚಿತ್ರದಲ್ಲಿ ನನ್ನದು ಒಂದು ರೀತಿಯ ಕೋಪಿಷ್ಠ ಬೇಕು ಅಂದರು. ಅದೇ ತರಹ ಎಲ್ಲಾ ಸೀನ್‌ಗಳು ರೆಡಿ ಇತ್ತು. ಇನ್ನೇನು ಶೂಟಿಂಗ್‌ಗೆ ಅರ್ಧಗಂಟೆ ಇದೆ ಎನ್ನುವಷ್ಟರಲ್ಲಿ ಭಟ್ಟರು ಬಂದು, “ಅಲ್ಲಾ ಸಾರ್ ನಾನು ಯೋಚನೆ ಮಾಡಿದೆ. ನಿಮ್ಮನ್ನು ಕೋಪಿಷ್ಠನನ್ನಾಗಿ ಮಾಡಿದರೆ ಸರಿಹೋಗಲ್ಲ.
ನಿಮ್ಮ ಮಹಿಳಾ ಆಡಿಯನ್ಸ್‌ಗೆ ಇಷ್ಟವಾಗಲಿಕ್ಕಿಲ್ಲ. ಒಂದು ಕೆಲ್ಸ ಮಾಡೋಣ ಸಾರ್, ನೀವು ಸಾಫ್ಟ್ ಆಗಿಬಿಡಿ. ಪೂರ್ತಿ ಸಾಫ್ಟ್ ಸಾರ್. ನಿಮ್ಮ ಹೆಂಡತಿಯ ಪಾತ್ರವನ್ನು ಬಹಳ ಕೋಪಿಷ್ಠೆ ಮಾಡುವ’ ಅಂದ್ರು. ಭಟ್ಟರು ಎಲ್ಲರೂ ನಡೆಯೋ ದಾರಿಯಲ್ಲಿ ನಡೆಯಲ್ಲ. ಬೇರೆ ದಾರಿ ಮಾಡಿಕೊಂಡು ಹೋಗುತ್ತಾರೆ. ಅಂಜದೇ ಹೆದರದೇ ಸೋಲಿಗೆ ಭಯಪಡದೇ ಭಿನ್ನವಾಗಿದ್ದನ್ನು ಮಾಡುತ್ತಾ ಮುಂದೆ ಸಾಗುತ್ತಾರೆ.
ಅವರ ಬಹುತೇಕ ಚಿತ್ರದಲ್ಲಿ ಪಾತ್ರ ಕೊಟ್ಟಿದ್ದಾರೆ. ಏನೂ ಇಲ್ಲಾಂದ್ರೆ ಒಂದು ದಿವಸದ ಪಾತ್ರವಾದರೂ ಕೊಡುತ್ತಾರೆ. “ಮುಗುಳುನಗೆ’ಯಲ್ಲಿ ಆರಂಭದ ಮತ್ತು ಕೊನೆಯ ಸೀನ್ ನಂದು. ಮೊದಲನೇ ಸೀನ್‌ನಲ್ಲಿ ಗಣೇಶ ಮಗುವಾಗಿ ಬರ್ತಾನೆ ಕಡೆ ಸೀನ್‌ಬಲ್ಲಿ ಗಣೇಶ ಅಪ್ಪನಾಗಿ ಬರ್ತಾನೆ. ಅವರ ಕೆಲಸದ ಶೈಲಿ ನನಗೆ ಇಷ್ಟ. ಕ್ರಿಯೇಟಿವ್ ಆಗಿ ಯೋಚಿಸುತ್ತಾ ಇಂಪ್ರೂವ್ ಮಾಡ್ತಾನೇ ಇರ್ತಾರೆ. ತನ್ನ ಕಥೆಗೆ ಏನು ಬೇಕು ಅನ್ನೊದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ.
ಬರೆದಿದ್ದ ಹಳತಾಯಿತೆಂಬ ಭಾವ: ಅನಂತ್‌ನಾಗ್ ಅವರ ಮಾತುಗಳನ್ನು ಕೇಳಿದ ಭಟ್ರು, “ಅನಂತ್‌ಸಾರ್ ತುಂಬಾ ಚೆನ್ನಾಗಿ ಹೇಳಿದರು. ಹೌದು, ನಾನು ಸೀನ್‌ಗಳನ್ನು ಬದಲಿಸುತ್ತಿರುತ್ತೇನೆ. ಬರೆದಿದ್ದು ಹಳತಾಯಿತೇನೋ ಎಂಬ ಕಾರಣಕ್ಕೆ ಇನ್ನೇನೋ ಹೊಸನ್ನು ಬರೆಯಲು ಹೊರಡುತ್ತೇನೆ’ ಎಂದರು ಭಟ್ಟರು