Advertisement

ವಿದೇಶಿ ನೇರ ಬಂಡವಾಳಕ್ಕೆ ಭಾರ್ತಿ ಏರ್‌ಟೆಲ್‌ ರಿಕ್ವೆಸ್ಟ್‌

09:51 AM Dec 10, 2019 | Team Udayavani |

ಹೊಸದಿಲ್ಲಿ: ಸಿಂಗಾಪುರ ಮೂಲದ ಸಿಂಗ್ಟೆಲ್‌ ಮತ್ತು ಇತರ ವಿದೇಶಿ ಕಂಪೆನಿಗಳಿಂದ ಭಾರ್ತಿ ಏರ್‌ಟೆಲ್‌ಗೆ ವಿದೇಶಿ ನೇರ ಬಂಡವಾಳ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಭಾರತದ ಹಳೆಯ ದೂರಸಂಪರ್ಕ ಸಂಸ್ಥೆ ಭಾರ್ತಿ ಟೆಲಿಕಾಂ ಮನವಿ ಮಾಡಿದೆ. 4,900 ಕೋಟಿ ವಿದೇಶ ನೇರ ಬಂಡವಾಳಕ್ಕೆ ಸರಕಾರದ ಅನುಮೋದನೆಯನ್ನು ಸಂಸ್ಥೆ ಕೇಳಿದೆ.

Advertisement

ಸದ್ಯ ಭಾರ್ತಿ ಟೆಲಿಕಾಂ ಭಾರ್ತಿ ಏರ್‌ಟೆಲ್‌ನಲ್ಲಿ ಶೇ.41ರಷ್ಟು ಷೇರು ಹೊಂದಿದೆ. ವಿದೇಶಿ ಟೆಲಿಕಾಂ ಕಂಪೆನಿಗಳು ಶೇ.21.46ರಷ್ಟು ಷೇರು ಹೊಂದಿವೆ. ಅದನ್ನು ಶೇ.50ಕ್ಕೆ ಹೆಚ್ಚಿಸುವ ಕುರಿತು ಭಾರ್ತಿ ಟೆಲಿಕಾಂ ಚಿಂತನೆ ನಡೆಸಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಒಪ್ಪಿಗೆ ಸಿಕ್ಕರೆ ದೇಶದ ಅತಿ ಹಳೆಯ ಟೆಲಿಕಾಂ ಕಂಪೆನಿಯು ವಿದೇಶಿ ಸಂಸ್ಥೆಯಾಗಿ ಬದಲಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next