Advertisement

ಭಾರತ್ ಜೋಡೋ ; ರಾಹುಲ್ ರನ್ನು ಹೂಗುಚ್ಛ ನೀಡಿ ಸ್ವಾಗತಿಸಿದ ಶ್ವಾನಗಳು

04:56 PM Dec 02, 2022 | Team Udayavani |

ತನೋಡಿಯಾ : ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪಕ್ಷದ ‘ಭಾರತ್ ಜೋಡೋ ಯಾತ್ರೆ’ ವೇಳೆ ಚಹಾ ಕುಡಿಯಲು ನಿಂತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನಾಯಿಯೊಂದು ಹೂಗುಚ್ಛ ನೀಡಿ ಸ್ವಾಗತಿಸಿ ಗಮನ ಸೆಳೆಯಿತು.

Advertisement

ಆರು ವರ್ಷದ ಲ್ಯಾಬ್ರಡಾರ್‌ ಶ್ವಾನಗಳ ಮಾಲೀಕರಾದ ಸರ್ವಮಿತ್ರ ನಾಚನ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಅವರನ್ನು ಸ್ವಾಗತಿಸಲು ತನ್ನ ತನೋಡಿಯಾ ಪಟ್ಟಣಕ್ಕೆ ಬಂದಿದ್ದರು.

ಲಿಜೋ ಮತ್ತು ರೆಕ್ಸಿ ಎಂಬ ನಾಯಿಗಳು “ಚಲೇ ಕದಮ್, ಜೂಡ್ ವತನ್” ಮತ್ತು “ನಫ್ರತ್ ಛೋಡೋ, ಭಾರತ್ ಜೋಡೋ” ಎಂಬ ಸಂದೇಶಗಳುಳ್ಳ ಹೂಗುಚ್ಛಗಳ ಬುಟ್ಟಿಯನ್ನು ಹಿಡಿದು ತಂದು ರಾಹುಲ್ ಗಾಂಧಿ ಅವರಿಗೆ ಹಸ್ತಾಂತರಿಸಿದವು.

“ನಾವು ಯಾತ್ರೆಗಾಗಿ ವಿಭಿನ್ನವಾದದ್ದನ್ನು ಮಾಡಲು ಬಯಸಿದ್ದೇವೆ. ನಾವು ಅದನ್ನು ಮೊದಲಿನಿಂದಲೂ ಅನುಸರಿಸುತ್ತಿದ್ದೇವೆ ಮತ್ತು ಗಾಂಧಿ ಅವರಿಗೆ ಹೂಗುಚ್ಛಗಳನ್ನು ಹಸ್ತಾಂತರಿಸಲು ನಾವು ನಾಯಿಗಳಿಗೆ ತರಬೇತಿ ನೀಡಿದ್ದೇವೆ ಎಂದು ಇಂದೋರ್ ಮೂಲದ ನಾಚನ್ ಪಿಟಿಐಗೆ ತಿಳಿಸಿದ್ದಾರೆ.

ಗಾಂಧಿಯವರು ಲಿಜೋ ಮತ್ತು ರೆಕ್ಸಿ ಅವರಿಂದ ಹೂಗುಚ್ಛಗಳನ್ನು ತೆಗೆದುಕೊಂಡಿದ್ದಲ್ಲದೆ, ಈ ಸಂದರ್ಭದಲ್ಲಿ ಅವುಗಳೊಂದಿಗೆ ಛಾಯಾಚಿತ್ರಗಳನ್ನೂ ಸಹ ಪಡೆದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next