Advertisement

ಭಾರತ್ ಜೋಡೋ ಯಾತ್ರೆ ಎಲ್ಲಾ ಸಮಾಜ ವಿರೋಧಿ ಅಂಶಗಳನ್ನು ಒಟ್ಟುಗೂಡಿಸಿತು: ಬಿಜೆಪಿ

05:25 PM Jan 30, 2023 | Team Udayavani |

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ಮುಕ್ತಾಯ ಗೊಳಿಸುತ್ತಿದ್ದಂತೆ ಬಿಜೆಪಿ ಟೀಕಾ ಪ್ರಹಾರ ನಡೆಸಿದ್ದು, ಯಾತ್ರೆ’ ಎಲ್ಲಾ ಸಮಾಜ ವಿರೋಧಿ ಅಂಶಗಳನ್ನು ಒಟ್ಟುಗೂಡಿಸಿತು ಎಂದಿದೆ.

Advertisement

ಬಿಜೆಪಿ ಸಂಸದ ಡಾ.ಸುಧಾಂಶು ತ್ರಿವೇದಿ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ಯಾತ್ರೆಯ ಮೂಲಕ ರಾಹುಲ್ ಗಾಂಧಿ ಎಲ್ಲಾ ಸಮಾಜ ವಿರೋಧಿ ಅಂಶಗಳನ್ನು ಒಟ್ಟುಗೂಡಿಸಿದ್ದಾರೆ. ಬಿಜೆಪಿ ನಾಯಕರು ಮಾಡಿದ ತ್ಯಾಗದಿಂದ ರಾಹುಲ್ ಗಾಂಧಿ ರಾಷ್ಟ್ರಧ್ವಜವನ್ನು ಹಾರಿಸಲು ಸಾಧ್ಯವಾಯಿತು ಎಂದು ಹೇಳಿದರು.

ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪ್ರತಿಕ್ರಿಯಿಸಿ, 370 ಮತ್ತು 35ಎ ವಿಧಿ ರದ್ದುಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ರಾಹುಲ್ ಗಾಂಧಿ ಮರೆತಿದ್ದಾರೆ. 2014 ರ ನಂತರ ಕಾಶ್ಮೀರದ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ ಎಂದುರು.

“ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಶ್ರೀನಗರದಲ್ಲಿ ಸ್ನೋಬಾಲ್‌ಗಳೊಂದಿಗೆ ಆಟವಾಡುವುದನ್ನು ನೀವು ನೋಡಿದ್ದೀರಿ, ಆದರೆ ಅವರು ಆರ್ಟಿಕಲ್ 370 ಮತ್ತು 35A ಅನ್ನು ರದ್ದುಗೊಳಿಸಿದ ಪ್ರಧಾನಿ ಮೋದಿಗೆ ಧನ್ಯವಾದ ಹೇಳಲು ಮರೆತಿದ್ದಾರೆ. 2014 ರ ನಂತರ ಪರಿಸ್ಥಿತಿ ಕಾಶ್ಮೀರ ಸಂಪೂರ್ಣವಾಗಿ ಬದಲಾಗಿದೆ, ಈಗ ಶಾಂತಿ ನೆಲೆಸಿದೆ ಮತ್ತು ಪ್ರವಾಸೋದ್ಯಮವೂ ಹೆಚ್ಚಿದೆ ಎಂದಿದ್ದಾರೆ.

”ಯಾತ್ರೆಯಲ್ಲಿ, ಭಾರತವನ್ನು ಒಗ್ಗೂಡಿಸುವವರ ಬದಲು ಭಾರತವನ್ನು ಒಡೆಯಲು ಕೆಲಸ ಮಾಡಿದವರನ್ನು ನೋಡಲಾಯಿತು, ಅಂತಹವರಿಗೆ ಕಾಂಗ್ರೆಸ್ ಏನು ಮಾಡಲು ಬಯಸುತ್ತದೆ ಎಂದು ಅವರೇ ಉತ್ತರಿಸಬೇಕು” ಎಂದುರು.

Advertisement
Advertisement

Udayavani is now on Telegram. Click here to join our channel and stay updated with the latest news.

Next