ಮುಂಬೈ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ.
ಪಕ್ಷದ ಸೇವಾದಳದ ಪ್ರಧಾನ ಕಾರ್ಯದರ್ಶಿ, 75 ವರ್ಷದ ಕೃಷ್ಣಕುಮಾರ್ ಪಾಂಡೆ ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದ್ದಾರೆ.
ಇವರ ಸಾವಿಗೆ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದು, ಮೃತರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಟ್ವೀಟ್ ಮಾಡಿ, ಭಾರತ್ ಜೋಡೋ ಯಾತ್ರೆಯ 62ನೇ ದಿನ ಬೆಳಗ್ಗೆ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ದಿಗ್ವಿಜಯ್ ಸಿಂಗ್ ಮತ್ತು ನನ್ನ ಜೊತೆ ಕೃಷ್ಣಕುಮಾರ್ ನಡೆಯುತ್ತಿದ್ದರು. ಎಂದಿನಂತೆ ಕೆಲವು ನಿಮಿಷಗಳು ಕಳೆದನಂತರ ಅವರು ಧ್ವಜವನ್ನು ಇನ್ನೊಬ್ಬರಿಗೆ ನೀಡಿ ಮರಳಿದರು. ಕೆಲವೇ ನಿಮಿಷಗಳಲ್ಲಿ ಕುಸಿದುಬಿದ್ದರು… ಎಂದು ಘಟನೆಯನ್ನು ವಿವರಿಸಿದ್ದಾರೆ.