Advertisement

ಭಾರತ್ ಜೋಡೋ ಯಾತ್ರೆ: ಹುಣಸೂರಿನಿಂದ 6 ಸಾವಿರ ಮಂದಿ ಭಾಗಿ

09:10 PM Oct 02, 2022 | Team Udayavani |

ಹುಣಸೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ, ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆ ಭಾನುವಾರ ಬೆಳಗ್ಗೆ ಕಳಲೆ ಗೇಟ್‌ನಿಂದ ಮ್ಯಸೂರಿನ ಬಂಡಿಪಾಳ್ಯಕ್ಕಾಗಮಿಸಿತು. ನಿರೀಕ್ಷೆಗೂ ಮೀರಿ ಹೆಚ್ಚಿನ ರೀತಿಯಲ್ಲಿ ಯಶಸ್ವಿಯಾಗಲು ಕಾರಣರಾದ, ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಶಾಸಕ ಹೆಚ್.ಪಿ.ಮಂಜುನಾಥ್ ಅಭಿನಂದನೆ ತಿಳಿಸಿದ್ದಾರೆ.

Advertisement

ಐಕ್ಯತಾ ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ, ಡಿ.ಕೆ.ಸುರೇಶ್, ಹಾಗೂ ಸಾವಿರಾರು ಕಾರ್ಯಕರ್ತರ ಜತೆಗೂಡಿ ಹೆಜ್ಜೆಹಾಕುವ ಮೂಲಕ ಸಾಥ್ ನೀಡಿದರು.

ಈ ವೇಳೆ ಉದಯವಾಣಿಯೊಂದಿಗೆ ಮಾತನಾಡಿದ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್, ಹುಣಸೂರಿನಿಂದ ಸುಮಾರು 6 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ರಾಹುಲ್ ಗಾಂಧಿಯ ಪ್ರೀತಿಯ ಕರ್ನಾಟಕ ಐಕ್ಯತಾ ಯಾತ್ರೆ. ಪರಿಪೂರ್ಣವಾಗಿ ಯಶಸ್ವಿಯಾಗಲು ಕಾರಣರಾದ ಎಲ್ಲ ಕಾರ್ಯಕರ್ತರು,ಮುಖಂಡರ ಸಹಕಾರ ಮರೆಯುವಂತಿಲ್ಲ, ಇದರ ಜತಗೆ ಮಾಧ್ಯಮಗಳ ಸಹಕಾರವನ್ನು ಸ್ಮರಿಸಿದರು.

ಯಾತ್ರೆಯಲ್ಲಿ ಸಂಸದ ಡಿ.ಕೆ.ಸುರೇಶ್, ಶಾಸಕ ಅನಿಲ್ ಚಿಕ್ಕಮಾದು, ಯತೀಂದ್ರ ಸಿದ್ದರಾಮಯ್ಯ, ರವಿಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.ಡಾ.ವಿಜಯ ಕುಮಾರ್, ಬಿ.ಕೆ ಹರಿಪ್ರಸಾದ್ ಯು.ಟಿ. ಖಾದರ್, ಐವನ್ ಡಿ ಸೋಜ, ಈಶ್ವರ್‌ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಸಲೀಮ್ ಅಹ್ಮದ್, ಅಯೂಬ್ ಖಾನ್ ಭಾಗಿಯಾಗಿದ್ದರು.

ಶನಿವಾರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿಗಾಗಮಿಸಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next