ನವದೆಹಲಿ: ಭಾರತ ಮತ್ತು ನೇಪಾಳದಲ್ಲಿ ರಾಮನಿಗೆ ಸಂಬಂಧಿಸಿದಂತಿರುವ ಎಲ್ಲ ಪವಿತ್ರ ಕ್ಷೇತ್ರಗಳನ್ನು ಸುತ್ತಲಿರುವ “ಶ್ರೀ ರಾಮಾಯಣ ಯಾತ್ರೆ’ಯಲ್ಲಿ ಯಾತ್ರಿಗಳಿಗೆ ಯೋಗ ತರಬೇತಿಯನ್ನು ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
Advertisement
ಯಾತ್ರಿಗಳನ್ನು ಹೊತ್ತ ಭಾರತ್ ಗೌರವ್ ರೈಲು ಅಂತಾರಾಷ್ಟ್ರೀಯ ಯೋಗ ದಿನವಾದ ಜೂ.21ರಂದು ದೆಹಲಿಯ ಸಫ್ದರಜಂಗ್ ನಿಂದ ಪ್ರಯಾಣ ಆರಂಭಿಸಲಿದೆ. ರೈಲಿನ ಎಲ್ಲ ಬೋಗಿಗಳು ವಿಭಿನ° ಥೀಮ್ ಆಧರಿಸಿರಲಿವೆ. ಅದರಲ್ಲಿ ಎರಡು ಬೋಗಿಗಳನ್ನು ಯೋಗಕ್ಕೆ ಮೀಸಲಿರಿಸಲಾಗಿದೆ. ಯೋಗ ಹೇಳಿಕೊಡುವುದಕ್ಕಾಗಿ ಓರ್ವ ತರಬೇತುದಾರರನ್ನು ನೇಮಿಸಲಾಗಿದೆ. ಆಸಕ್ತ ಪ್ರಯಾಣಿಕರು ತರಬೇತುದಾರರ ಸೂಚನೆಯಂತೆ ಯೋಗಾಭ್ಯಾಸ ಮಾಡಬಹುದು ಎಂದು ತಿಳಿಸಲಾಗಿದೆ.