Advertisement

ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮಹತ್ವದ ಒಪ್ಪಂದ

05:19 PM Mar 24, 2023 | Team Udayavani |

ನವದೆಹಲಿ: ಹೈದರಾಬಾದ್‌ನ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (BEL) ಜೊತೆಗೆ ರಕ್ಷಣಾ ಸಚಿವಾಲಯ ಮಹತ್ವದ ಹೊಂದಾಣಿಕೆ ಮಾಡಿಕೊಂಡಿದ್ದು, ಸುಮಾರು 3,000 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ಇಂಟಿಗ್ರೇಟೆಡ್‌ ಎಲೆಕ್ಟ್ರಾನಿಕ್‌ ಯುದ್ಧ ವ್ಯವಸ್ಥೆ (Integrated Electronic Warfare System)  ʻಪ್ರಾಜೆಕ್ಟ್‌ ಹಿಮಶಕ್ತಿʼಯನ್ನು ಇವೆರಡರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಇದು ಆತ್ಮನಿರ್ಭರ ಭಾರತ ವ್ಯವಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ.

Advertisement

ಇದನ್ನೂ ಓದಿ: ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!

ʻಪ್ರಾಜೆಕ್ಟ್‌ ಹಿಮಶಕ್ತಿʼ ಕಾರ್ಯಕ್ರಮದ ಅಡಿಯಲ್ಲಿ ಭಾರತದ ರಕ್ಷಣಾ ಸಂಸ್ಥೆಗಳು, ಎಲೆಕ್ಟ್ರಾನಿಕ್ಸ್‌ ಸಂಸ್ಥೆಗಳು, BEL ಮತ್ತು ಅದರ ಇತರೆ ಸಹ ಸಂಸ್ಥೆಗಳಾದ MSME ಮೊದಲಾದವುಗಳು ತಮ್ಮೊಳಗೆಯೇ ಉತ್ತಮ ಬಾಂಧವ್ಯ ಹೊಂದಲಿದೆ. ಈ ಒಪ್ಪಂದವು ಎರಡು ವರ್ಷಗಳಲ್ಲಿ ಕನಿಷ್ಟ 3 ಲಕ್ಷ ಉದ್ಯೋಗ ಸೃಷ್ಟಿಸುವ ಸಾಧ್ಯತೆಯಿದೆ. ಇದು ಭಾರತದ ಎಲೆಕ್ಟ್ರಾನಿಕ್‌ ಇತಿಹಾಸದಲ್ಲಿ ಅತ್ಯಂತ ಮಹತ್ವದ ಒಪ್ಪಂದಗಳಲ್ಲಿ ಒಂದಾಗಿರಲಿದೆ ಎಂದು ಹೇಳಲಾಗಿದೆ. ಇದು ಆತ್ಮನಿರ್ಭರತೆಯನ್ನು ಉತ್ತೇಜಿಸಲಿದ್ದು ಮೇಡ್‌-ಇನ್‌-ಇಂಡಿಯಾ ವ್ಯವಸ್ಥೆಗೆ ಪೂರಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next