ಮುಂಬಯಿ: ಭಾರತ್ ಕೋ.ಆಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್ ಇದರ ಸ್ಟಾಫ್ ವೆಲ್ಫೆàರ್ ಕ್ಲಬ್‌ನ 29 ನೇ ವಾರ್ಷಿಕ ಮಹಾಸಭೆಯು ಜು. 29 ರಂದು ಗೋರೆಗಾಂವ್ ಪೂರ್ವದ ಭಾರತ್ ಬ್ಯಾಂಕಿನ ತರಬೇತಿ ಕೇಂದ್ರದಲ್ಲಿ ಜರಗಿತು.
ವೆಲ್ಫೆàರ್ ಕ್ಲಬ್‌ನ ಅಧ್ಯಕ್ಷ ಭಾರತ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸಿ. ಆರ್. ಮೂಲ್ಕಿ ಇವರು ಮಹಾಸಭೆಯ ಅಧ್ಯಕ್ಷತೆ ವಹಿಸಿ, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಗೌರವ ಕಾರ್ಯದರ್ಶಿ ಮೋಕ್ಷಾ ಕುಂದರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾ ಪ್ರಬಂಧಕರಾದ ವಿದ್ಯಾನಂದ ಎಸ್. ಕರ್ಕೇರ, ದಿನೇಶ್ ಬಿ. ಸಾಲ್ಯಾನ್, ಸುರೇಶ್ ಸಾಲ್ಯಾನ್, ಉಪ ಮಹಾಪ್ರಬಂಧಕ ಮಹೇಶ್ ಬಿ. ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರೇವತಿ ಪೂಜಾರಿ, ಪುಷ್ಪರಾಜ್ ಬೇಲಾಡಿ, ದೀಪಕ್ ಪ್ರಭು, ನಿಶಾ ಎಸ್. ಕೆಲ್ಲಪುತ್ತಿಗೆ, ಕಿರಣ್ ಕುಮಾರ್ ಬಿ. ಅಮೀನ್, ದಿನೇಶ್ ಎ. ಪೂಜಾರಿ, ಸೌರಭ್ ಅಗರ್‌ವಾಲ್, ವಿಪುಲ್ ಪೂಜಾರಿ, ತೇಜಸ್ ಪೂಜಾರಿ, ವಿನೀತಾ ಕೋಟ್ಯಾನ್, ರಿತೇಶ್ ಕೋಟ್ಯಾನ್, ಭಾರತ್ ಬ್ಯಾಂಕಿನ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ರಮೇಶ್ ಟಿ. ಪೂಜಾರಿ ಉಪಸ್ಥಿತರಿದ್ದರು.
ಆರೋಗ್ಯ ವಿಚಾರ ಸಂಕಿರಣದಲ್ಲಿ ಡಾ| ಅನುಪಾ ನಾಗ್‌ಪಾಲ್ ಅವರು ವಿವಿಧ ಕಾಯಿಲೆಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯದರ್ಶಿ ಮೋಕ್ಷಾ ಕುಂದರ್ ವಂದಿಸಿದರು. ನವೀನ್ ಕುಮಾರ್ ಕರ್ಕೇರ, ಸೌರಭ್ ಅಗರ್‌ವಾಲ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾದವರ ಹೆಸರು ವಾಚಿಸಿದರು.
ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.