Advertisement
ಸಭೆ ಆರಂಭವಾಗುತ್ತಲೇ ಸದಸ್ಯರು ಕೆಆರ್‌ಡಿಐಎಲ್ ಇಲಾಖೆಯ ಕಾರ್ಯವೈಖರಿ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆ ವಿರುದ್ಧ ಅಸಮಾಧಾನ ಹೊರ ಹಾಕಿದರು. ಕೆಆರ್‌ಡಿಐಎಲ್‌ನಿಂದ ಮೇಹಕರ್, ಖಟಕ್ ಚಿಂಚೋಳಿಯಲ್ಲಿ ನಿರ್ಮಾಣಗೊಂಡ ವಸತಿ ನಿಲಯದ ಕಟ್ಟಡಗಳನ್ನು ಹಸ್ತಾಂತರ ಮಾಡದಿರುವುದು, ತಾಲೂಕಿನ ನಾನಾ ಕಡೆಗಳಲ್ಲಿ ಅಂಗನವಾಡಿ ಕಟ್ಟಡಗಳು ಅಪೂರ್ಣವಾಗಿರುವುದು, ಇನ್ನೂ ಕೆಲವು ಕಡೆಗಳಲ್ಲಿ ಕಟ್ಟಡ ಕಳಪೆಯಾಗಿ ನಿರ್ಮಾಣವಾಗುತ್ತಿರುವ ಬಗ್ಗೆ ಸದಸ್ಯರು ಪ್ರಶ್ನಿಸಿದರು.
ಜ್ಯಾಂತಿ, ಖಟಕ್ ಚಿಂಚೋಳಿ, ಮದಕಟ್ಟಿ ಕ್ಷೇತ್ರ ಸೇರಿದಂತೆ ಮುಂತಾದ ಸದಸ್ಯರು ಧ್ವನಿಗೂಡಿಸಿ, ಕೆಆರ್‌ಡಿಐಎಲ್‌ನ ಅಧಿಕಾರಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಪ್ರತಿಸಲ ನಡೆಯುವ ಸಭೆಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಸಭೆಯಲ್ಲಿ ಹೆಚ್ಚಾಗಿ ಗೈರಾಗಿರುವುದು ಕಂಡು ಬರುತ್ತಿದೆ. ತಾಲೂಕಿನ ನಾನಾ ಕಡೆಗಳಲ್ಲಿ ಕೆಆರ್ ಡಿಐಎಲ್‌ನಿಂದ ನಡೆಯುತ್ತಿರುವ ಕಾಮಗಾರಿ ತೃಪ್ತಿ ತಂದಿಲ್ಲ. ಕೆಆರ್‌ಡಿಐಎಲ್ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
Related Articles
Advertisement
ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಮಾರುತಿರಾವ್ ಮಗರ್, ಕಾರ್ಯನಿರ್ವಾಹಕ ಅಧಿಕಾರ ಬಸವರಾಜ ನಾಯ್ಕರ್ ಸೇರಿದಂತೆ ತಾಲೂಕು ಅನುಷ್ಠಾನ ಅಧಿಕಾರಿಗಳು ಹಾಜರಿದ್ದರು.