ಭಾಲ್ಕಿ: ತಾಲೂಕಿನ ಹಲಸಿ ಗ್ರಾಮದಲ್ಲಿ ಜೂ.6ರ ಗುರುವಾರ ಸಂಜೆ 5 ಗಂಟೆಗೆ ಸಿಡಿಲು ಬಡಿದು ಎತ್ತು ಸಾವನ್ನಪ್ಪಿದ ಘಟನೆ ನಡೆದಿದೆ.
ವಿದ್ಯವಾನ್ ಗದಿಗೆಪ್ಪ ಪಾಟೀಲ್ ಎಂಬವರು ತನ್ನ ಹೊಲದ ಕೆಲಸ ಮಾಡುತ್ತಿದ್ದ ಸಮಯ ಸುಮಾರು ಸಂಜೆ 5 ಗಂಟೆಗೆ ಆಕಸ್ಮಿಕವಾಗಿ ಮಳೆ ಬಂದ ಕಾರಣ ಎದ್ದು ದನ-ಕರುಗಳನ್ನು ಮಳೆಯಿಂದ ಕೊಟ್ಟಿಗೆ ಕಡೆ ತರುವಾಗ ಸಿಡಿಲು ಬಡಿದಿದೆ.
ರೈತ ಬಂದು ನೋಡಿದಾಗ ಎತ್ತು ಸ್ಥಳದಲ್ಲೇ ಸಾವನಪ್ಪಿದ್ದು, ಸ್ಥಳಕ್ಕೆ ಪಶು ಚಿಕಿತ್ಸಾಲಯ ಲಾಧಾ ಗ್ರಾಮದ ವೈದ್ಯಧಿಕಾರಿ ಖುಬಾ, ಮರಣೋತ್ತರ ಪರೀಕ್ಷೆ ನಡೆಸಿದರು.
ಸ್ಥಳೀಯ ಮೆಹಕರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೈತ ವಿದ್ಯವಾನ್ ಗದಿಗೆಪ್ಪ ಪಾಟೀಲ್ ತಮ್ಮ ಹೊಲದಲ್ಲಿದ್ದಾಗ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಎತ್ತು ಸಾವನ್ನಪ್ಪಿದ ಘಟನೆ ನಡೆದಿದ್ದು, ತದನಂತರ ಸುಮಾರು ಅರ್ಧ ಗಂಟೆ ಮಳೆ ಸುರಿದಿದೆ ಎಂದು ಗ್ರಾ.ಪಂ. ಸದಸ್ಯ ಸಂತೋಷ್ ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ರಾಜಕುಮಾರ್ ಬಿರಾದರ್, ಪ್ರಶಾಂತ ಪೋಸ್ತೇ, ಅನಿಲ್ ಕುಮಾರ್ ಪೋಸ್ತೇ, ಉಪಸ್ಥಿತರಿದ್ದರು.