Advertisement

Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್‌ ಆರತಿ

12:01 PM Nov 13, 2024 | Team Udayavani |

ಶಿವರಾಜ್‌ ಕುಮಾರ್‌ ನಟನೆಯ “ಭೈರತಿ ರಣಗಲ್‌’ ಚಿತ್ರ ನ.15ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಈ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ ಅದ್ಧೂರಿಯಾಗಿ ನಡೆಯಿತು.

Advertisement

ವಿಶೇಷ ಎಂದರೆ 1996 ರಲ್ಲಿ ಶಿವಣ್ಣ ಅಭಿನಯದ ಸೂಪರ್‌ ಹಿಟ್‌ ಚಿತ್ರ ಜನುಮದ ಜೋಡಿ ಕೂಡ ನವೆಂಬರ್‌ 15 ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗಿತ್ತು. ಈಗ ಭೈರತಿ ರಣಗಲ್‌ ಚಿತ್ರ ಕೂಡ ಅದೇ ದಿನ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.

ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಡಾಲಿ ಧನಂಜಯ, ನೀನಾಸಂ ಸತೀಶ್‌, ವಿಜಯ ರಾಘವೇಂದ್ರ, ಸುಧಾರಾಣಿ, ಶೃತಿ, ರಕ್ಷಿತಾ ಪ್ರೇಮ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌. ಎಂ ಸುರೇಶ್‌, ಮಾಜಿ ಅಧ್ಯಕ್ಷರಾದ ಸಾ ರಾ ಗೋವಿಂದು, ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್‌, ನಿರ್ದೇಶಕರಾದ ಚೇತನ್‌, ಪವನ್‌ ಒಡೆಯರ್‌ ಸೇರಿದಂತೆ ಸ್ಯಾಂಡಲ್‌ ವುಡ್‌ ನ ಹಲವಾರು ಗಣ್ಯರು ಭಾಗಿಯಾಗಿ “ಭೈರತಿ’ಗೆ ಶುಭಕೋರಿದರು.

“ಮಫ್ತಿ ಚಿತ್ರದ ಭೈರತಿ ರಣಗಲ್‌  ಪಾತ್ರವನ್ನು ತಾವು ಮೆಚ್ಚಿಕೊಂಡು ಯಶಸ್ವಿ ಮಾಡಿದ್ದೀರಿ. ಈಗ ಮಫ್ತಿ ಚಿತ್ರದ ಪ್ರೀಕ್ವೇಲ್‌ ಈ ಭೈರತಿ ರಣಗಲ್. ನಿರ್ದೇಶಕ ನರ್ತನ್‌ ತುಂಬಾ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಅಷ್ಟೇ ಚೆನ್ನಾಗಿ ನಿರ್ದೇಶನವನ್ನು ಮಾಡಿದ್ದಾರೆ.

ಭೈರತಿ ರಣಗಲ್ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗುತ್ತಾನೆ. ನಮ್ಮ ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್‌ ನಿರ್ಮಿಸಿರುವ ಎರಡನೇ ಚಿತ್ರವಿದು. ಅನುಭವಿ ತಂತ್ರಜ್ಞರ ಹಾಗೂ ಕಲಾವಿದರ ಸಮಾಗಮದಲ್ಲಿ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನವೆಂಬರ್‌ 15ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಇಪ್ಪತ್ತೆಂಟು ವರ್ಷಗಳ ಹಿಂದೆ ನವೆಂಬರ್‌ 15 ರಂದೇ ನನ್ನ ಜನುಮದ ಜೋಡಿ ಚಿತ್ರ ನರ್ತಕಿ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಅದರ ನಿರ್ದೇಶಕರು ನಾಗಾಭರಣ. ಈ ಚಿತ್ರ ಕೂಡ ನವೆಂಬರ್‌ 15 ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗುತ್ತಿದೆ. ಇದರ ನಿರ್ದೇಶಕರು ನರ್ತನ್‌. ಎರಡು ಚಿತ್ರಗಳಲ್ಲೂ ನ ನ ಇದೆ. ಇದು ಕಾಕತಾಳೀಯ. ಆ ಚಿತ್ರದ ನಿರ್ಮಾಪಕರು ನನ್ನ ಅಮ್ಮ. ಈ ಚಿತ್ರದ ನಿರ್ಮಾಪಕರು ನನ್ನ ಹೆಂಡತಿ’ ಎಂದರು ಶಿವಣ್ಣ.

Advertisement

 ಭೈರತಿ ಗೆಟಪ್‌ನಲ್ಲಿ ಫ್ಯಾನ್ಸ್‌

“ಮಫ್ತಿ’ ಚಿತ್ರದಲ್ಲಿ ಭೈರತಿ ಪಾತ್ರದಲ್ಲಿ ಶಿವಣ್ಣ ಲುಂಗಿ ಹಾಗೂ ಕಪ್ಪು ಅಂಗಿಯಲ್ಲಿ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದರು. ಈಗ “ಭೈರತಿ ರಣಗಲ್‌’ನಲ್ಲೂ ಅದು ಮುಂದುವರೆದಿದೆ. ಸಿನಿಮಾ ಬಿಡುಗಡೆ ದಿನ ಅಭಿಮಾನಿಗಳು ಚಿತ್ರಮಂದಿರಕ್ಕೆ ಭೈರತಿ ಗೆಟಪ್‌ನಲ್ಲಿ ಬರಲಿದ್ದಾರೆ. ಇತ್ತೀಚೆಗೆ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ನಟ ಧನಂಜಯ್‌ ಕೂಡಾ ತಾನು ಭೈರತಿ ಗೆಟಪ್‌ನಲ್ಲೇ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next