Advertisement

ಲೋಕ ಕಲ್ಯಾಣಕ್ಕಾಗಿ ಗಂಗೆ ಧರೆಗಿಳಿಸಿದ ಭಗೀರಥ

12:51 PM May 12, 2019 | pallavi |

ಬಾಗಲಕೋಟೆ: ತ್ರಿಶಂಕು ಸ್ಥಿತಿಯಲ್ಲಿರುವ ತಮ್ಮ ಪೂರ್ವಜರಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಶಿವನ ಜಟೆಯಲ್ಲಿರುವ ಗಂಗೆಯನ್ನೇ ಧರೆಗಿಳಿಸಿದ ಯೋಗಿ ಭಗೀರಥ ಎಂದು ಉಪ ವಿಭಾಗಾಧಿಕಾರಿ ಎಚ್.ಜಯಾ ಹೇಳಿದರು.

Advertisement

ಜಿಪಂ ಸಭಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಭಗೀರಥ ಜಯಂತಿ ಕಾರ್ಯಕ್ರಮಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಅವರು, ಮಾತನಾಡಿದರು. ಜಗತ್ತಿನ ಉದ್ಧಾರಕ್ಕಾಗಿ ಗಂಗಾಮಾತೆಯನ್ನೇ ಭೂಮಿಗೆ ತಂದ ಕೀರ್ತಿ ಭಗೀರಥರದ್ದಾಗಿದೆ ಎಂದರು.

ಭಗೀರಥ ಒಬ್ಬ ಶ್ರೇಷ್ಟ ಗುರುಭಕ್ತನಾಗಿ ಪುರಾಣಪುರುಷನಾಗಿ, ತನ್ನ ಸಾಹಸ, ಏಕಾಗ್ರ ಮನಸ್ಥಿತಿಗೆ ತಪೋನಿಷ್ಠೆಗೆ ಪ್ರಸಿದ್ಧನಾಗಿದ್ದನಿಂದ ಭಗೀರಥ ಪ್ರಯತ್ನ ಎಂಬ ನುಡಿ ಎಲ್ಲೆಡೆ ಪ್ರಸರಿಸಿತು. ಸತ್ಕಾರ್ಯಗಳಿಂದ ಜನರಿಗೆ ಒಳ್ಳೆಯದಾಗಬೇಕು. ಭೂಮಿಗೆ ಗಂಗೆಯನ್ನು ತರುವಲ್ಲಿ ಕಠೊರ ತಪಸ್ಸು ಮಾಡಿದ ಭಗೀರಥರು ಸವಾಲು ಮತ್ತು ಸಮಸ್ಯೆಗಳಿಗೆ ಎಂದಿಗೂ ಎದೆಗುಂದಲಿಲ್ಲ. ಸಮಾಜಕ್ಕೆ ಒಳಿತು ಮಾಡಲು ಪರಮಾತ್ಮನನ್ನು ಒಲಿಸಿಕೊಂಡರು ಎಂದರು.

ಸಮಸ್ತ ಮನುಕುಲದ ಉದ್ದಾರಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಭಗೀರಥರಂಥ ಮಹಾತ್ಮರ ಆದರ್ಶ ಮತ್ತು ತತ್ವಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಒಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಿಸಿದ್ದ‌ಕ್ಕೆ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಪಶು ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹೆಗಡೆ, ವಯಸ್ಕರ ಶಿಕ್ಷಣಾಧಿಕಾರಿ ಬಸವರಾಜ ಶಿರೂರ, ಬಾಗಲಕೋಟೆ ತಹಶೀಲ್ದಾರ್‌ ಎಂ.ಬಿ.ನಾಗಠಾಣ, ಗ್ರೇಡ್‌- 2 ತಹಶೀಲ್ದಾರ್‌ ವಸ್ತ್ರದ, ಕಂದಾಯ ಇಲಾಖೆಯ ಶಿರಸ್ತೆದಾರ ಎಂ.ಬಿ.ಗುಡೂರ ಉಪಸ್ಥಿತರಿದ್ದರು.

Advertisement

ಮಹರ್ಷಿ ಭಗಿರಥ ಜಯಂತಿ ಆಚರಣೆ
ಬನಹಟ್ಟಿ:
ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿಯಲ್ಲಿ ಶ್ರೀ ಭಗೀರಥ ಗ್ರಾಮೀಣ ಸಂಘದ ವತಿಯಿಂದ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು.

ಊರಿನ ಹಿರಿಯರಾದ ಭೀಮಶಿ ಪಾಟೀಲ ಮಾತನಾಡಿ, ಸಮಾಜ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುನ್ನಡೆಯಲು ಸಮಾಜದ ಪ್ರತಿಯೊಬ್ಬರು ಶ್ರಮಿಸಬೇಕು. ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಭಗೀರಥ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷ ಪುಂಡಲೀಕ ಗೋಪಾಳಿ, ಉಪಾಧ್ಯಕ್ಷ ವಿಠuಲ ಹೆಗ್ಗಣ್ಣವರ, ಸದಸ್ಯರಾದ ಪ್ರಭು ಕಿಚಡಿ, ಕೃಷ್ಣಾ ಗೋಪಾಳಿ, ಮಂಜುನಾಥ ಕೊಡಗನೂರ, ಸಿದ್ದಪ್ಪ ಔರಸಂಗ, ಹಾಲಪ್ಪ ಗೋಪಾಳಿ, ಬಸಪ್ಪ ಗೋಪಾಳಿ, ರಾಯಪ್ಪ ಹೆಗ್ಗಣ್ಣವರ, ಭೀಮಸಿ ಪಾಟೀಲ, ಶಿವಯ್ನಾ ಮಠಪತಿ, ವಿಠuಲ ಆಲಕನೂರ, ಸಿದ್ದಪ್ಪ ಆಲಕನೂರ, ಧರೆಪ್ಪಾ ಗೋಪಾಳಿ, ಕಲ್ಲಪ್ಪಾ ಹಾರೂಗೇರಿ, ಮಲ್ಲು ಅವಕ್ಕನವರ, ಸಂಗನಗೌಡ ಬ್ಯಾಕೋಡ, ಲಕ್ಕಪ್ಪ ಹೊಣ್ಣವಾಡ, ವಿಠuಲ ರಬಕವಿ, ಶಿವಾನಂದ ಕಿಚಡಿ, ಸಿದ್ದಪ್ಪ ಕಿಚಡಿ, ಪರಶುರಾಮ ಪೂಜಾರಿ, ಮಾಳಪ್ಪ ಔಸಂಗ ಉಪಸ್ಥಿತರಿದ್ದರು.

ಮಕ್ಕಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿ

ಬನಹಟ್ಟಿ: ಮಕ್ಕಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಅವರನ್ನು ನಾಳಿನ ಸತøಜೆಗಳನ್ನಾಗಿ ರೂಪಿಸಿ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್‌ ಕೆ. ರಾಘವೇಂದ್ರರಾವ್‌ ಹೇಳಿದರು. ರಬಕವಿ-ಬನಹಟ್ಟಿ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಮಹರ್ಷಿ ಭಗೀರಥ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ವರು ಮಾತನಾಡಿದರು. ಸಮಾಜದ ಜಿಲ್ಲಾ ಅಧ್ಯಕ್ಷ ಭೀಮಸಿ ಪಾಟೀಲ ಮಾತನಾಡಿದರು.ಉಪ್ಪಾರ ಅಭಿವೃದ್ಧಿ ಸಂಘದ ಅಧ್ಯಕ್ಷ ಭೀಮಪ್ಪ ಸಸಾಲಟ್ಟಿ, ರಾಜ್ಯ ಸಂಚಾಲಕ ಸಿದ್ದು ಮುಶ್ಯಪ್ಪಗೋಳ, ಪ್ರಕಾಶ ಬೆಂಡಿಕಾಂಣ, ಸದಾಶಿವ ಕೊಡಗಾನೂರ, ಸುರೇಶ ಪಾಟೀಲ, ಸಂಜು ಕಾಕಂಡಕಿ, ಯಮನ್ಪ ಉಪ್ಪಾರ, ರಾಮಪ್ಪ ಹೆಗ್ಗಣ್ಣವರ, ವಿಠuಲ ಹೆಗ್ಗಣ್ಣವರ, ದಶರಥ ಕಾರಜೋಳ, ಪರಶುರಾಮ ಮೋಪಗಾರ, ಮಹಾನಿಂಗ ಮೋಪಗಾರ, ಯಲ್ಲಪ್ಪ ಉಪ್ಪಾರ, ಬಾಳಪ್ಪ ಜಗದಾಳ, ಮಾದಪ್ಪ ವಗ್ಗರ, ಮಹಾಲಿಂಗ ಲಾತೂರ, ಕಲ್ಲಪ್ಪ ಪುಜೇರಿ, ಮಲ್ಲಪ್ಪ ಬ್ಯಾಕೋಡ, ಸಿದ್ದಪ್ಪ ಉಪ್ಪಾರ, ಶ್ರೀನಿವಾಸ ಲೋನಾರೆ, ವಿಜಯ ಲಾತೂರ, ಈರಪ್ಪ ಬ್ಯಾಕೋಡ, ಬಸಪ್ಪ ಗೋಪಾಳಿ, ಪರಪ್ಪ ಬ್ಯಾಕೋಡ, ರಾಮು ಸಂಗಾನಟ್ಟಿ, ಶಂಕರ ಪಾಟೀಲ, ಬಸವರಾಜ ಬಿಜ್ಜರಗಿ ಇದ್ದರು.

ಭಗೀರಥರ ತತ್ವಾದರ್ಶ ಪಾಲಿಸಿ

ಬಾದಾಮಿ: ಭಗೀರಥ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖಂಡ ಶಿವಪ್ಪ ಹನಮಸಾಗರ ಹೇಳಿದರು.

ಕೆಂದೂರಲ್ಲಿ ಭಗೀರಥ ಜಯಂತಿ ನಿಮಿತ್ತ ಭಗೀರಥ ಸರ್ಕಲ್ ಉದ್ಘಾಟಿಸಿ ಅವರು ಮಾತನಾಡಿದರು. ಮಹಾನ್‌ ಮುಖಂಡರ ಆದರ್ಶ ತತ್ವಗಳು ಮನುಕುಲಕ್ಕೆ ಮಾದರಿಯಾಗಿವೆ. ದೇವನೊಬ್ಬ ನಾಮ ಹಲವು ಎಂಬಂತೆ ಯಾವುದೇ ಜನಾಂಗದವರಾದರೂ ಆದರ್ಶ ತತ್ವಗಳು ಒಂದೇ ಎಂದು ಹೇಳಿದರು. ಗ್ರಾಮದ ಮುಖಂಡರಾದ ಮಾಗುಂಡಪ್ಪ ಗುಡದಾರ, ರಾಮಚಂದ್ರ ಬೆಕಿನಾಳ, ಸಿದ್ದಪ್ಪ ಸಂಕಪ್ಪನ್ನವರ, ರಂಗಪ್ಪ ಗೋದೆಮ್ಮನವರ, ಬಸಲಿಂಗಯ್ಯ ಹಿರೇಮಠ, ರಂಗಪ್ಪ ಜಿಂಗಿ, ಪ್ರಕಾಶ ಬಂಡರಗಲ್, ಮಲ್ಲಪ್ಪ ಚಿಲಾರಿ, ಕೃಷ್ಣಾ ನಿಲುಗಲ್, ವಿಠuಲ ಬಂಡರಗಲ್ಲ, ವಾಸು ಚಿಲಾರಿ, ರಂಗನಾಥ ಬಂಡರಗಲ್ಲ, ಸಿದ್ದಪ್ಪ ನರಸಾಪುರ, ಗುರುನಾಥ ಹುದ್ದಾರ ಹಾಜರಿದ್ದರು.

ದೇವಋಷಿ ಭಗೀರಥ ಜಯಂತಿ ಆಚರಣೆ

ತೇರದಾಳ: ಸಸಾಲಟ್ಟಿ ಗ್ರಾಮ ಪಂಚಾಯ್ತಿಯಲ್ಲಿ ದೇವಋಷಿ ಭಗೀರಥ ಜಯಂತಿ ಆಚರಿಸಲಾಯಿತು. ಪಿಡಿಒ ಮಂಜು ಬಡಿಗೇರ ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ರಾಜು ಬೆಳವಣಕಿ, ಸದಸ್ಯ ದೇವರಾಜ ಬಳಗಾರ, ಅಶೋಕ ಉಳ್ಳಾಗಡ್ಡಿ, ರವಿ ಕಾಂಬಳೆ ಇದ್ದರು. ಗ್ರಾಮದ ಭಗೀರಥ ದೇವಸ್ಥಾನದಲ್ಲಿ ಭಗೀರಥ ಜಯಂತಿ ಆಚರಿಸಲಾಯಿತು. ಸಮಾಜದ ಮುಖಂಡರು ಉಪಸ್ಥಿತರಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next