Advertisement

Udupi; ಭಗವದ್ಗೀತೆಯ ಮೂಲ ರಹಸ್ಯ ಯೋಗಶಾಸ್ತ್ರ ಅನಾವರಣ

10:25 PM Aug 13, 2024 | Team Udayavani |

ಉಡುಪಿ: ಭಗವದ್ಗೀತೆಯಲ್ಲಿನ ಯೋಗಶಾಸ್ತ್ರವನ್ನು ಅಧ್ಯಯನ ಮಾಡಿ ಸಾಧಿಸಿದರೆ ಸಾಧನೆಯ ಶಿಖರವೇರಬಹುದು. ಯೋಗಿಯಾಗಬಹುದು ಎಂದು ಬ್ರಹ್ಮಋಷಿ ಕೆ.ಎಸ್‌. ನಿತ್ಯಾನಂದ ಸ್ವಾಮೀಜಿ ಹೇಳಿದರು.

Advertisement

ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದಲ್ಲಿ ಮೂಲ ರಹಸ್ಯವನ್ನೊಳ ಗೊಂಡ ಭಗವದ್ಗೀತೆಯ ಮೊದಲ ಅಧ್ಯಾಯದ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಭಗವದ್ಗೀತೆ ಸಂಪಾದಕ ಮಂಡಳಿಯ ಸದಸ್ಯ ಚಿಕ್ಕಮಗಳೂರಿನ ಸುಬ್ರಹ್ಮಣ್ಯ ಕೆ.ಎಸ್‌. ಮಾತನಾಡಿ, ಎಷ್ಟೋ ಕಾಲದಿಂದ ಮುಚ್ಚಿಟ್ಟಲ್ಪಟ್ಟಿದ್ದ ಭಗವದ್ಗೀತೆಯ ಮೂಲ ರಹಸ್ಯ ಈಗ ಪುಸ್ತಕ ರೂಪದಲ್ಲಿ ಲಭ್ಯವಾಗಿದೆ. ಪ್ರತೀ ತಿಂಗಳು ಭಗವದ್ಗೀತೆಯ ಒಂದೊಂದು ಅಧ್ಯಾಯದಂತೆ 18 ಅಧ್ಯಾಯಗಳ ಮಂಥನ ನಡೆಸಿ ಅಲ್ಲಿ ಅನಾವರಣಗೊಂಡ ವಿಚಾರವನ್ನು ಪುಸ್ತಕ ರೂಪದಲ್ಲಿ ಹೊರ ತರಲಾಗುತ್ತಿದೆ.ಅಲ್ಲಿಯವರೆಗೆ ಸ್ವತಃ ಅಧ್ಯಯನ ಮಾಡಿ ಯಶಸ್ಸು ಪಡೆಯಿರಿ. ಒಂದು ವರ್ಷಗಳವರೆಗೆ ವಾಚಕರಾಗಿ, ಪ್ರವಚಕರಾಗದಿರಿ ಎಂದರು.

ವೇದವಿಜ್ಞಾನ ಡಾಟ್‌ ಇನ್‌ ಅಂತರ್ಜಾಲವನ್ನು ಅನಾವರಣ ಗೊಳಿಸ ಲಾಯಿತು. ಭಗವದ್ಗೀತೆ ಸಂಪಾದಕ ಮಂಡಳಿಯ ಸದಸ್ಯರಾದ ನಾಗೇಶ್‌ ಎಚ್‌.ಜಿ. ಬೇಲೂರು, ಚಂದ್ರಶೇಖರ ಸುರ್ಭಟ್‌ ಬೆಂಗಳೂರು, ಮದನ್‌ ಕುಮಾರ್‌ ಕೆ.ಎನ್‌. ಚಿಕ್ಕಮಗಳೂರು, ನಾಗೇಶ್‌ ಅಡಿಗ ಚಿಕ್ಕಮಗಳೂರು, ಡಾ| ಮಾಲತಿ ಕೆ. ಮಣಿಪಾಲ, ಗಿರೀಶ್‌ ವಿ.ಎಸ್‌. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next