ಸೇಡಂ: ಮುಂಬರುವ ದಿನಗಳಲ್ಲಿ ಇಡೀ ಭಾರತ ಭಗವಾ ಯುಗವಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಸಂಯುಕ್ತ ಕಾರ್ಯದರ್ಶಿ ಡಾ| ಸುರೇಂದ್ರಕುಮಾರ ಜೈನ್ ಆಶಯ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ರಾಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಭಾಷಣ ಮಾಡಿದರು.
ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾದಾಗಲೇ ಭಾರತದಲ್ಲಿ ಆತಂಕ ನಿರ್ನಾಮವಾಗಲಿದೆ. ಭಾರತ ದೇವ ಸೂÌರಪಿ ರಾಷ್ಟ್ರ. ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿ ಗುಲಾಮರ ಪ್ರತೀಕ ಆದರೆ ರಾಮ ಮಂದಿರ ನಿರ್ಮಾಣರಾಷ್ಟ್ರದ ಗೌರವ ಪ್ರತೀಕವಾಗಿದೆ. ದೇಶದ ವಿನಾಶವನ್ನು ಬಯಸುವವರು ಮಾತ್ರ ಮಂದಿರ ನಿರ್ಮಾಣಕ್ಕೆ ವಿರೋಧಿಸುತ್ತಾರೆ ಎಂದು ಹೇಳಿದರು.
ಘಜಿನಿ ಮತ್ತು ಬಾಬರ್‌ರ ಸಮಾಧಿ ಧಿಗಳು ಗುಲಾಮಿಯ ಪ್ರತೀಕವಾಗಿವೆ. ದೇಶದ ಮುಸ್ಲಿಮರಿಗೆ ರಾಷ್ಟ್ರ ವಿರೋಧಿಗಳು ಆದರ್ಶಪ್ರಾಯರಲ್ಲ. ಅವರಿಗೆ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಆದರ್ಶರು. ದೇಶದಲ್ಲಿ ಬಹುಚರ್ಚಿತ ವಿಷಯ ತ್ರಿವಳಿ ತಲಾಖ್ ಬಗ್ಗೆ ಕೋರ್ಟ್ ನಿರ್ಧಾರ ತಳ್ಳಿಹಾಕಿ, ಧರ್ಮವನ್ನು ಅಡ್ಡ ತರುವ ಮತಾಂಧರು, ರಾಮ ಮಂದಿರ ನಿರ್ಮಾಣ ಬಂದಾಗ ಕೋರ್ಟ್‌ನತ್ತ ಮುಖ ಮಾಡುವುದು ಯಾವ ತರದ ನಿಷ್ಠೆ ಎಂದು ಪ್ರಶ್ನಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೆಜ್ಜೆಯಿಂದ ಇನ್ನೂ ಕೆಲ ದಿನಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಖಚಿತ ಎಂದು ಹೇಳಿದರು. ದೇಶ ಮತ್ತು ಹಿಂದೂ ವಿರೋಧಿ ಯಾಗಿದ್ದ ಟಿಪ್ಪು ಸುಲ್ತಾನ್ ಕರ್ನಾಟಕದ ಗೌರವವ್ಯಕ್ತಿ ಅಲ್ಲ. ಆದರೂ ಆತನ ಜಯಂತಿ ಮಾಡಿ ಗೌರವ ನೀಡುವ ಮೂಲಕ ಬಹುಸಂಖ್ಯಾತ ಹಿಂದೂಗಳ ಆಕ್ರೋಶಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಗುರಿಯಾಗಿದೆ.
ಟಿಪ್ಪು ಸುಲ್ತಾನ್ ಸಂತರಿಗೆ ಅವಮಾನ ಮಾಡುವುದು ದೇವಸ್ಥಾನ ಉರುಳಿಸುವಂತಹ ನೀಚ ಕೆಲಸ ಮಾಡಿದ್ದ. ಮುಸ್ಲಿಂ ಸಮುದಾಯದ ಜನರು ಯಾವುದೋ ಬಾಬರಗಿಂತ ಅಬ್ದುಲ್ ಕಲಾಂರತಂಹ ವ್ಯಕ್ತಿಗಳನ್ನು ಮಾದರಿಯಾಗಿ ಇಟ್ಟುಕೊಳ್ಳುವುದು ಸೂಕ್ತ ಎಂದು ಹೇಳಿದರು. ಸಾನಿಧ್ಯ ವಹಿಸಿದ್ದ ಕೋಡ್ಲಾ ಉರಿಲಿಂಗ ಪೆದ್ದಿ ಮಠದ ಶ್ರೀ ನಂಜುಂಡಸ್ವಾಮೀಜಿ ಭಾರತ ದೇಶ ಹಲವು ಧರ್ಮಗಳ ಸಮಾಗಮವಾಗಿದೆ.
ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ದೇಶದ ಚಿರಋಣಿಯಾಗಿರಬೇಕು ಎಂದು ಹೇಳಿದರು. ಮಳಖೇಡದ ಭಂಗಿಮಠದ ಶ್ರೀ ಕೊಟ್ಟುರೇಶ್ವರ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಬಚಪನ್ ಶಾಲೆ ನಿರ್ದೇಶಕ ಪ್ರದೀಪ ಪಾಟೀಲ ಮಾತನಾಡಿದರು. ವಿಎಚ್‌ಪಿ ಉತ್ತರ ಪ್ರಾಂತ ಪ್ರಮುಖ ಗೋವರ್ಧನಜೀ, ಜಿಲ್ಲಾ ಗೌರವಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಪ್ರಾಂತ ಕಾರ್ಯದರ್ಶಿ ಮಾರ್ತಾಂಡ ಶಾಸ್ತ್ರಿ, ಜಿಲ್ಲಾಧ್ಯಕ್ಷ ಸುಭಾಷ ಕಾಂಬಳೆ, ಸುರೇಶ ಹೇರೂರ,
ಲಕ್ಷಣ ಪಾಟೀಲ, ಶಿವರಾಜ ಸಂಗೋಳಗಿ, ಅಂಬರೀಶ, ಭಾಗ್ಯಶ್ರೀ ನಾಯಿಕೋಡಿ, ಶಾಕಂಬರಿ ಬೊಮ್ನಳ್ಳಿ ಇದ್ದರು. ವಿಭಾಗೀಯ ಕಾರ್ಯದರ್ಶಿ ಶಿವಕುಮಾರ ಬೊಳಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ನಿಡಗುಂದಾ ಓಂಕಾಶ ನಡೆಸಿಕೊಟ್ಟರು. ಮುರುಗಯ್ಯಸ್ವಾಮಿ ತೆಲ್ಕೂರ ವೈಯಕ್ತಿಕ ಗೀತೆ ಹಾಡಿದರು. ವೆಂಕಟರೆಡ್ಡಿ ಪಾಟೀಲ ಸ್ವಾಗತಿಸಿದರು. ವಿನೋದ ಕಲಶೆಟ್ಟಿ ನಿರೂಪಿಸಿದರು. ತಾಲೂಕು ಅಧ್ಯಕ್ಷ ರಾಘವೇಂದ್ರ ಮುಸ್ತಾಜರ ವಂದಿಸಿದರು.