Advertisement

ಭಗತ್‌ ಸಿಂಗ್‌ ಕೈಬಿಟ್ಟಿಲ್ಲ , ಹೆಡ್ಗೆವಾರ್ ಸೇರ್ಪಡೆ ತಪ್ಪಿಲ್ಲ; 

02:16 AM May 18, 2022 | Team Udayavani |

ಬೆಂಗಳೂರು: ಹತ್ತನೇ ತರಗತಿ ಪಠ್ಯಪುಸ್ತಕದಲ್ಲಿ ಭಗತ್‌ಸಿಂಗ್‌ ಕುರಿತ ಅಧ್ಯಾಯವನ್ನು ಕೈಬಿಟ್ಟು ಆರೆಸ್ಸೆಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡ್ಗೆವಾರ್ ಭಾಷಣ ಸೇರ್ಪಡೆ ಮಾಡಲಾಗಿದೆ ಎಂಬ ವಿಚಾರ ವಿವಾದ ಸೃಷ್ಟಿಸಿದ್ದು, ವಿಪಕ್ಷಗಳು ಸರಕಾರದ ವಿರುದ್ಧ ಮುಗಿಬಿದ್ದಿವೆ. ಇದರ ನಡುವೆಯೇ ಸ್ಪಷ್ಟನೆ ನೀಡಿರುವ ಸರಕಾರ, ಭಗತ್‌ ಸಿಂಗ್‌ ಪಠ್ಯ ಕೈಬಿಟ್ಟಿಲ್ಲ ಎಂದು ಹೇಳಿದೆ. ಹೆಡ್ಗೆವಾರ್ ಭಾಷಣ ಸೇರಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದೂ ಸಮರ್ಥಿಸಿಕೊಂಡಿದೆ.

Advertisement

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು ಟಿಪ್ಪು ಸುಲ್ತಾನ್‌ ಕುರಿತ ಪಠ್ಯವನ್ನು ಕೈಬಿಟ್ಟಿದೆ ಎಂಬುದು ವಿವಾದಕ್ಕೆ ಕಾರಣ

ವಾಗಿತ್ತು. ಇದೀಗ ಭಗತ್‌ ಸಿಂಗ್‌ ವಿಷಯ ಕೂಡ ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು, ಭಗತ್‌ ಸಿಂಗ್‌ ಕುರಿತ ಅಧ್ಯಾಯ ಕೈ ಬಿಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮದ ಸುದ್ದಿಯನ್ನು ಟ್ವೀಟ್‌ ಮಾಡಿರುವ ಕೇಜ್ರಿವಾಲ್‌, ಸರ್ದಾರ್‌ಭಗತ್‌ಸಿಂಗ್‌ರನ್ನು ಬಿಜೆಪಿ ಜನರು ಏಕೆ ದ್ವೇಷಿಸುತ್ತಾರೆ? ಶಾಲಾ ಪುಸ್ತಕ ಗಳಿಂದ ಭಗತ್‌ ಹೆಸರನ್ನು ತೆಗೆದು ಹಾಕಿರುವುದು ಅವರ ತ್ಯಾಗಕ್ಕೆ ಮಾಡಿರುವ ಅವಮಾನವಾಗಿದೆ. ಹುತಾತ್ಮರಿಗೆ ಮಾಡಿರುವ ಈ ಅವ ಮಾನವನ್ನು ಯಾರೂ ಸಹಿಸುವುದಿಲ್ಲ. ಈ ನಿರ್ಧಾರವನ್ನು ಬಿಜೆಪಿ ಸರಕಾರ ಹಿಂಪಡೆಯಬೇಕು ಎಂದಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಅವರು “ಪಠ್ಯಪುಸ್ತಕಗಳನ್ನು ಪಕ್ಷಪುಸ್ತಕಗಳನ್ನಾಗಿ ಮಾಡುವ  ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳನ್ನು ಗರಿಯಾಗಿಸಿ ಡಿಲೀಟ್‌ ಮಾಡುವುದಾಗಿದೆ. ಪಠ್ಯವನ್ನು ವಿಕೃತಿಗೊಳಿಸುತ್ತಿರುವುದು ಎಂದರೆ, ಕನ್ನಡ ಅಸ್ಮಿತೆಯನ್ನು ಹತ್ತಿಕ್ಕುವ ಪಾತಕ ಯತ್ನ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು,  ಹೋರಾಟಕ್ಕೂ ಇಳಿಯಬೇಕು. ಅಯ್ಯೋ… ಕರ್ನಾಟಕ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿತೇ? ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಭಗತ್‌ಸಿಂಗ್‌ ಕುರಿತ ಪಾಠವನ್ನು ಪಠ್ಯದಿಂದ ತೆಗೆಯಲು ನಿರ್ಧರಿಸಿರುವುದು ದೇಶವಿರೋಧಿ ಕ್ರಮವಾಗಿದೆ. ಇಂದು ಭಗತ್‌ಸಿಂಗ್‌ ಪಾಠ ತೆಗೆದಿರುವವರು ಮುಂದಿನ ದಿನಗಳಲ್ಲಿ ಮಹಾತ್ಮ ಗಾಂಧೀಜಿ ಅವರ ಪಾಠವನ್ನು ತೆಗೆದು ಹಾಕಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಗತ್‌ಸಿಂಗ್‌ ಕುರಿತ ಪಾಠವೇನಿತ್ತು?
1919ರ ಎಪ್ರಿಲ್‌ 13ರಂದು ಜಲಿಯನ್‌ ವಾಲಾಬಾಗ್‌ನ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡವರಿಗೆ ಭಗತ್‌ ಸಿಂಗ್‌ ಸಲ್ಲಿಸಿರುವ ನಮನ ಕುರಿತು ಪಾಠದಲ್ಲಿ ಉಲ್ಲೇಖಿಸಲಾಗಿತ್ತು. 12 ವರ್ಷದ ಬಾಲಕ ಅಮೃತಸರದ ಜಲಿಯನ್‌ ವಾಲಾಬಾಗ್‌ನಲ್ಲಿ ಮೂಕನಂತೆ‌ ಅತ್ತಿಂದಿತ್ತ ಓಡಾಡುತ್ತಿದ್ದ. ಶಾಲೆಗೆ ಹೋಗಬೇಕಾಗಿದ್ದ ಆ ಬಾಲಕ ಅಂದು ತನ್ನ ಹಳ್ಳಿಯಿಂದ ರೈಲಿನಲ್ಲಿ ಅಮೃತಸರಕ್ಕೆ ಬಂದಿಳಿದಿದ್ದ. ಅವನ ಕೈಚೀಲದಲ್ಲಿ ಒಂದೆರಡು ಪುಸ್ತಕಗಳು ಹಾಗೂ ಒಂದು ಪುಟ್ಟ ಡಬ್ಬಿ ಇತ್ತು. ಅಮೃತಸರದ ಮಣ್ಣನ್ನು ಹಣೆಗಿಟ್ಟುಕೊಂಡ, ಮತ್ತಷ್ಟು ಮಣ್ಣನ್ನು ತನ್ನ ಡಬ್ಬಿಯಲ್ಲಿ ತುಂಬಿಕೊಂಡು ಮನೆಗೆ ಹಿಂದಿರುಗಿದ. ಮನೆಯಲ್ಲಿ ಆತನ ಸಹೋದರಿ ಊಟ ಮಾಡುವಂತೆ ಒತ್ತಾಯಿಸಿದಾಗ ಊಟವನ್ನು ನಿರಾಕರಿಸಿದ. ಅವನಿಗೆ ಪ್ರಿಯವಾದ ಮಾವಿನ ಹಣ್ಣನ್ನು ಕೂಡ ನಿರಾಕರಿಸಿದ. ಕೊನೆಗೆ ತನ್ನ ಸಹೋದರಿಯನ್ನು ಮನೆಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಡಬ್ಬಿಯಲ್ಲಿದ್ದ ಆ ಮಣ್ಣನ್ನು ತೋರಿಸಿದ. ರಕ್ತದಲ್ಲಿ ಕಲೆಸಿದಂತಿದ್ದ ಆ ಮಣ್ಣನ್ನು “ತ್ಯಾಗದ ಪ್ರತೀಕ’ವೆಂದು ತಿಳಿಸಿ ಒತ್ತಿ ಹೇಳಿದ್ದ ಎಂಬ ಪಾಠವನ್ನು ಜಿ. ರಾಮಕೃಷ್ಣ ರಚಿಸಿದ್ದರು.

ಹೆಡ್ಗೆವಾರ್ ಕುರಿತ ವಿಚಾರವೇನಿದೆ?
“ನಿಮ್ಮ ಆದರ್ಶ ವ್ಯಕ್ತಿ ಯಾರು?’ ಎಂಬ ಪ್ರಶ್ನೆ ಕೇಳಿದಾಗ ಜನರು ಬಗೆಬಗೆಯ ಉತ್ತರಗಳನ್ನು ನೀಡುತ್ತಾರೆ. ಕೆಲವರಿಗೆ ಸ್ವಾತಂತ್ರ್ಯ ಹೋರಾಟಗಾರರು, ಮತ್ತೆ ಕೆಲವರಿಗೆ ತಮ್ಮ ಊರು ಅಥವಾ ರಾಜ್ಯದ ಮಹಾನ್‌ ವ್ಯಕ್ತಿಗಳು, ಐತಿಹಾಸಿಕ ವ್ಯಕ್ತಿಗಳು ಆದರ್ಶವಾಗಬಹುದು. ಕೆಲವರು ತಮ್ಮ ಹಿರಿಯರು, ತಂದೆ-ತಾಯಿ, ಕುಟುಂಬ ಸದಸ್ಯರನ್ನು ಆದರ್ಶವೆಂದು ಪರಿಗಣಿಸಬಹುದು. ಆದರೆ ವ್ಯಕ್ತಿಯ ಹೊರತಾಗಿ ತಣ್ತೀವನ್ನು ಆದರ್ಶವೆಂದು ಪರಿಗಣಿಸುವವರು ವಿರಳ. ವ್ಯಕ್ತಿಗಳನ್ನು ಆದರ್ಶವಾಗಿ ಪರಿಗಣಿಸಿದಾಗ, ನಿಷ್ಕಳಂಕ ವ್ಯಕ್ತಿ ಸಿಗುವುದು ಕಷ್ಟ. ಆದರೆ ವ್ಯಕ್ತಿಯ ಬದಲಾಗಿ ಎಂದೂ ಬದಲಾಗದ ತಣ್ತೀಗಳನ್ನು ಶಾಶ್ವತ ಮೌಲ್ಯಗಳನ್ನು ಆದರ್ಶವಾಗಿರಿಸಿಕೊಳ್ಳುವುದು ಉತ್ತಮ ಎಂದು ಆರೆಸ್ಸೆಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡ್ಗೆವಾರರು ಹೇಳಿರುವ ಭಾಷಣವನ್ನು ಪಠ್ಯದಲ್ಲಿ ನೀಡಲಾಗಿದೆ. ಹೆಡೆYವಾರರ ಹುಟ್ಟು, ಸ್ವಾತಂತ್ರ್ಯ ಹೋರಾಟ, ಜೈಲುವಾಸ, ಜಂಗಲ್‌ ಸತ್ಯಾಗ್ರಹ ಹಾಗೂ ಆರೆಸ್ಸೆಸ್‌ ಸಂಸ್ಥೆ ಸ್ಥಾಪಿಸಿದ ವಿವರಗಳನ್ನೂ ನೀಡಲಾಗಿದೆ.

ಪಠ್ಯಪುಸ್ತಕ ಸಂಘದ ಸ್ಪಷ್ಟನೆ
10ನೇ ತರಗತಿ ಪಠ್ಯದಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಕುರಿತ ಪಾಠವನ್ನು ಕೈಬಿಟ್ಟಿಲ್ಲ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘವು ಸ್ಪಷ್ಟನೆ ನೀಡಿದೆ. ಸದ್ಯ ಪರಿಷ್ಕರಿಸಿರುವ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕವು ಪ್ರಸ್ತುತ ಮುದ್ರಣ ಹಂತದಲ್ಲಿದೆ ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಪ್ರಕಟನೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next