Advertisement

ಮೈಕ್ರೋ ಫೈನಾನ್ಸ್‌ ಮಾಲಿಕರು-ದೂರುದಾರರ ಸಭೆ

01:30 PM Jun 24, 2020 | Naveen |

ಭದ್ರಾವತಿ: ಕೆಲವು ಮೈಕ್ರೋ ಫೈನಾನ್ಸ್‌ ಮಾಲಿಕರು ಸಾಲ ವಸೂಲಾತಿಗೆ ಮಹಿಳೆಯರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ತಾಲೂಕು ಆಡಳಿತಕ್ಕೆ ಜೆಡಿಯು ರಾಜ್ಯ ಉಪಾಧ್ಯಕ್ಷ ಶಶಿಧರಗೌಡ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಉಪ ತಹಶೀಲ್ದಾರ್‌ ರಂಗಮ್ಮ ಅವರು ತಾಲೂಕು ಕಚೇರಿಯಲ್ಲಿ ಮೈಕ್ರೋಫೈನಾನ್ಸ್‌ ಮಾಲಿಕರ ಹಾಗೂ ದೂರುದಾರರ ಸಭೆ ನಡೆಸಿದರು.

Advertisement

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಶಿಧರಗೌಡ, ಮೈಕ್ರೋಫೈನಾನ್ಸ್‌ನಿಂದ ಸಾಲ ಪಡೆದ ಅನೇಕ ಮಹೀಳೆಯರು ಕೋವಿಡ್ ಪರಿಸ್ಥಿತಿಯಲ್ಲಿ ಸಂಕಷ್ಠದಲ್ಲಿದ್ದರೂ ಸಹ ಮೈಕ್ರೋಫೈನಾನ್ಸ್‌ನವರು ಅವರ ಮೇಲೆ ಸಾಲ ವಸೂಲಾತಿಗೆ ಒತ್ತಡ ಹೇರುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಹಾಗಾಗಿ, ಆಗಸ್ಟ್‌ ತಿಂಗಳವರೆಗೆ ಸಾಲ ವಸೂಲಾತಿ ಮಾಡಬಾರದೆಂದು ಕೇಂದ್ರ ಸರ್ಕಾರ ಹೇಳಿದ್ದರೂ ವಸೂಲಾತಿ ಮಾಡುತ್ತಿದ್ದಾರೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಗ್ರಾಮೀಣ ಕೂಟದ ಮುಖ್ಯಸ್ಥ ಮಂಜುನಾಥ್‌ ಮೈಕ್ರೋಫೈನಾನ್ಸ್ ನವರು ಆರ್‌ಬಿಐ ನಿರ್ದೇಶನದ ಅನ್ವಯ ಕಾರ್ಯನಿರ್ವಹಿಸುತ್ತಿದ್ದೇವೆ. ಬಲವಂತವಾಗಿ ಸಾಲ ವಸೂಲಾತಿ ಮಾಡುತ್ತಿಲ್ಲ. ಸ್ವಯಂಪ್ರೇರಿತರಾಗಿ ಸಾಲ ಮರುಪಾವತಿ ಮಾಡುವವರಿಂದ ಹಣ ಸ್ವಿಕರಿಸುತ್ತಿದ್ದೇವೆ ಎಂದರು.

ಉಪತಹಶೀಲ್ದಾರ್‌ ರಂಗಮ್ಮ ಮಾತನಾಡಿ, ಕೊರೊನಾ ಪರಿಸ್ಥಿತಿಯಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸರ್ಕಾರದ ನಿರ್ದೇಶನದಂತೆ ಆಗಸ್ಟ್
31ರ ವರಗೆ ಸಾಲ ವಸೂಲಾತಿಗೆ ಬಲವಂತ ಮಾಡಬಾರದು ಸೂಚಿಸಿದರು. ಸಭೆಯಲ್ಲಿ ಗ್ರೇಡ್‌ ಟೂ ತಹಶೀಲ್ದಾರ್‌ ಮಂಜಾ ನಾಯ್ಕ, ಕಂದಾಯಾಧಿಕಾರಿ ಮಲ್ಲಿಕಾರ್ಜುನ, ಜೆಡಿಯೂ ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ ಕುಮಾರ್‌, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶಾಖಾಧಿಕಾರಿ ಪ್ರಸಾದ್‌, ರೇವಣ್ಕರ್‌, ವಿವಿಧ ಮೈಕ್ರೋಫೈನಾನ್ಸ್‌ ಪ್ರಮುಖರಾದ ವೆಂಕಟೇಶ್‌ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next