Advertisement

ನಾಗರಿಕರ ಸಂಕಷ್ಟಕ್ಕೆ ಸ್ಪಂದಿಸಿ: ಸೋಮಶೇಖರ್‌

05:46 PM May 01, 2020 | Naveen |

ಭದ್ರಾವತಿ: ಹುಟ್ಟಿದವರಿಗೆ ಸಾವು ಹೇಗೆ ನಿಶ್ಚಿತವೂ ಹಾಗೆಯೇ ಸರ್ಕಾರಿ ಕೆಲಸಕ್ಕೆ ಸೇರಿದವರಿಗೆ ನಿವೃತ್ತಿ ಎಂಬುದು ಅಷ್ಟೇ ನಿಶ್ಚಿತ ಎಂದು ನಿವೃತ್ತ ತಹಶೀಲ್ದಾರ್‌ ಸೋಮಶೇಖರ್‌ ಹೇಳಿದರು.

Advertisement

ಗುರುವಾರ ಅವರು ವೃತ್ತಿಯಿಂದ ನಿವೃತ್ತರಾದ ಕಾರಣ ಸಾರ್ವಜನಿಕರು ವಿವಿಧ ಇಲಾಖೆಯವರು ಆಶ್ರಯದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅವಧಿಯಲ್ಲಿರುವಷ್ಟು ಕಾಲ ಸಾರ್ವಜನಿಕರ ಕಷ್ಟ ಸುಖಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿದಾಗ ಮಾತ್ರ ಅಧಿಕಾರ, ಹುದ್ದೆ ಸಾರ್ಥಕತೆ ಪಡೆಯುತ್ತದೆ. ಅಧಿಕಾರಿಗಳು, ಸಿಬ್ಬಂದಿ, ನಾಗರಿಕರು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಆಡಳಿತ ರಥ ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ. ಭದ್ರಾವತಿಯಲ್ಲಿ ನನ್ನ ಅಧಿಕಾರದ ಅವಧಿ ವೇಳೆ ಉತ್ತಮವಾಗಿ ಕಾರ್ಯನಿರ್ವಹಿಸಲು ಇಲ್ಲಿನ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ,ನಾಗರಿಕರು ಹಾಗೂ ಮಾರ್ಗದರ್ಶನ ನೀಡಿದ ಇಲ್ಲಿನ ಇಬ್ಬರು ಶಾಸಕರ ಸಹಕಾರ ಕಾರಣ ಅವರೆಲ್ಲರಿಗೂ ಈ ಮೂಲಕ ಧನ್ಯವಾದಗಳು ಎಂದರು.

ಉಪಭಾಗಾಧಿಕಾರಿ ಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ನೂತನ ತಹಶೀಲ್ದಾರ್‌ ಸೋಮಶೇಖರ್‌, ನಗರಸಭೆ ಆಯುಕ್ತ ಮನೋಹರ್‌, ತಾಪಂ ಇಒ ತಮ್ಮಣ್ಣಗೌಡ, ಡಿವೈಎಸ್‌ಪಿ ಸುಧಾಕರ್‌ ನಾಯ್ಕ, ಉಪ ತಹಶೀಲ್ದಾರ್‌ ರಂಗಮ್ಮ, ಜೈನ್‌ ಸಮಾಜದ ಸಂಪತ್‌ ಕುಮಾರ್‌ ಬಾಟಿಯಾ, ಮಾಜಿ ಸೈನಿಕ ಗಿರೀಶ್‌, ಪತ್ರಕರ್ತ ರವೀಂದ್ರ, ಆಶ್ರಯ ಸಮಿತಿಯ ರಾಘವೇಂದ್ರ ಮುಂತಾದವರು ಮಾತನಾಡಿದರು. ಡಾ.ಗಾಯತ್ರಿ, ನೀಲೇಶ್‌, ಡಾ.ಮಲ್ಲಪ್ಪ, ಗ್ರಾಮಾಂತರ ಸರ್ಕಲ್‌ ಇನ್ಸ್ ಪೆಕ್ಟರ್‌ ಮಂಜುನಾಥ್‌ ಮುಂತಾದವರು.
ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next