ಭದ್ರಾವತಿ: ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್19 ಸೋಂಕು ಪ್ರಕರಣಗಳ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ 22 ಹಾಗೂ 23ರಂದು ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ : ಲಂಕಾ ವಿರುದ್ಧ 3 ಏಕದಿನ, 3 ಟಿ20: ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್ ಬಹುತೇಕ ಖಚಿತ
ಈ ಕುರಿತಂತೆ ತಹಶೀಲ್ದಾರ್ ಜಿ. ಸಂತೋಷ್ ಕುಮಾರ್ ಅವರು ಆದೇಶ ಹೊರಡಿಸಿದ್ದು, ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಎರಡು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.
ಎರಡು ದಿನಗಳ ಕಾಲ ಹಾಲು ಮತ್ತು ಔಷಧ ಹೊರತುಪಡಿಸಿ, ಬೇರೆ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ. ಅಲ್ಲದೇ, ಸಾರ್ವಜನಿಕರು ಅನಾವಶ್ಯಕವಾಗಿ ಮನೆಗಳಿಂದ ಹೊರಕ್ಕೆ ಬಾರದೇ ಸಹಕಾರ ನೀಡಬೇಕು ಎಂದು ಕೋರಲಾಗಿದೆ.
ಎರಡೂ ದಿನಗಳ ಕಾಲ ದಿನಸಿ, ತರಕಾರಿ, ಹಣ್ಣು, ಸೊಪ್ಪು ಸೇರಿದಂತೆ ಯಾವುದೇ ರೀತಿಯ ವ್ಯಾಪಾರ ವ್ಯವಹಾರಗಳು ಇರುವುದಿಲ್ಲ. ಹೀಗಾಗಿ, ಶುಕ್ರವಾರವೇ ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳಬೇಕೆಂದು ತಹಶೀಲ್ದಾರ್ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ನಮಗೆ ಸಭೆ ಮಾಡಲು ಅನುಮತಿ ಕೊಡಲ್ಲ, ಸರ್ಕಾರ ಏನ್ನನ್ನೋ ಮುಚ್ಚಿಡುತ್ತಿದೆ: ರಾಮಲಿಂಗಾರೆಡ್ಡಿ