ಶಿವಮೊಗ್ಗ: ಮಧ್ಯ ಕರ್ನಾಟಕ, ಬಯಲು ಸೀಮೆ ಜಿಲ್ಲೆಗಳ ದಾಹ ತಣಿಸುವ ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ಗುರುವಾರ ಮಧ್ಯಾಹ್ನ 12 ಸಾವಿರ ಕ್ಯೂಸೆಕ್ಸ್ ನೀರನ್ನು ಕ್ರಸ್ಟ್ ಗೇಟ್ ಮೂಲಕ ಹೊರಬಿಡಲಾಯಿತು.
ಇದೇ ಮೊದಲ ಬಾರಿಗೆ ಜುಲೈ 14ರಂದೇ ಜಲಾಶಯ ಭರ್ತಿಯಾಗಿದೆ. ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಪೂಜೆ ಸಲ್ಲಿಸಿದರು. ಹಂತಹಂತವಾಗಿ ನೀರಿನ ಹೊರಹರಿವು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಸಂಜೆ ವೇಳೆಗೆ 30 ಸಾವಿರ ಕ್ಯೂಸೆಕ್ಸ್ ವರೆಗೆ ನೀರು ಹೊರಬಿಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಸಾವೇಹಕ್ಲು ಭರ್ತಿ: ಗಮನ ಸೆಳೆದ ಓವರ್ ಫ್ಲೋ
ಜಲಾಶಯದ ಇತಿಹಾಸದಲ್ಲೇ ಮೊದಲ ಬಾರಿಗೆ ಜು.15ರೊಳಗೆ ಭರ್ತಿ ಆಗಿರುವುದು ಅಚ್ಚುಕಟ್ಟು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಭದ್ರಾವತಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ ಜಿಲ್ಲೆಗಳ ಜೀವನಾಡಿ ಆಗಿರುವ ಭದ್ರಾ ಜಲಾಶಯ ನಿರೀಕ್ಷೆ ಮೀರಿ ಅವಧಿಗೆ ಮುನ್ನವೇ ಭರ್ತಿಯಾಗಿದೆ.