Advertisement
ಬೆಂಗಳೂರು: ಐಟಿ-ಬಿಟಿ ಸಿಟಿ, ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂಬ ಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿಯಲ್ಲಿ ಬರೋಬ್ಬರಿ 1.19 ಕೋಟಿ ರೂ. ವಾಹನಗಳಿದ್ದು, ರಸ್ತೆ ಅಪಘಾತಗಳಲ್ಲೂ ಕರ್ನಾಟಕದಲ್ಲೇ ಮುಂಚೂಣಿ ಸ್ಥಾನ ಪಡೆದು ಕೊಂಡಿದೆ. 2024ರಲ್ಲಿ ಇಲ್ಲಿನ ವಿವಿಧ ಭಾಗಗಳಲ್ಲಿ ಸಂಭವಿಸಿದ ರಸ್ತೆ ಅಪಘಾತವು 802 ಮಂದಿಯನ್ನು ಬಲಿ ಪಡೆದು ಕೊಂಡಿದ್ದು, ಇದು ಬೆಂಗಳೂರಿನ ಆಕ್ಸಿಡೆಂಟ್ಗಳ ಭೀಕರತೆಗೆ ಸಾಕ್ಷಿಯಾಗಿದೆ. ಇದನ್ನು ಗಂಭೀರ ವಾಗಿ ಪರಿಗಣಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಪದೇ ಪದೇ ರಸ್ತೆ ಅಪಘಾತ ಸಂಭವಿಸುವ 64 ಸ್ಥಳಗಳನ್ನು ಬ್ಲ್ಯಾಕ್ಸ್ಪಾಟ್ (ಅಪಘಾತದ ಕಪ್ಪು ಚುಕ್ಕೆ) ಎಂದು ಗುರುತಿಸಿದ್ದಾರೆ!
Related Articles
Advertisement
ಬೆಂಗಳೂರಿನ ಹೊರ ವರ್ತುಲ ರಸ್ತೆಗಳಲ್ಲೇ ಅತ್ಯಧಿಕ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಆ ಭಾಗಗಳಲ್ಲೇ ಹೆಚ್ಚಿನ ಬ್ಲ್ಯಾಕ್ಸ್ಪಾಟ್ ಗುರುತಿಸಲಾಗಿದೆ. ರಸ್ತೆಯಿಂದ ವಾಹನಗಳು ಹೊರಗೆ ಹೋಗುವ ಹಾಗೂ ಒಳಗೆ ಬರುವ ವ್ಯವಸ್ಥೆ ಸೂಕ್ತವಾಗಿಲ್ಲ. ರಸ್ತೆಗಳ ಗುಣಮಟ್ಟ ಹಾಗೂ ವಿಸ್ತರಣೆ ಬಳಿಕ ವೇಗದ ಚಾಲನೆ, ರಸ್ತೆಗಳ ಗುಣಮಟ್ಟ ಹದಗೆಟ್ಟು ಅಲ್ಲಲ್ಲಿ ಗುಂಡಿ ಬಿದ್ದಿರುವುದು, ಅವೈಜ್ಞಾನಿಕ ಹಂಪ್ಸ್ಗಳು ಬ್ಲ್ಯಾಕ್ ಸ್ಪಾಟ್ಗಳಲ್ಲಿ ನಡೆಯುವ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಪೀಣ್ಯ 8ನೇ ಮೈಲಿ, ಜಕ್ಕೂರು ಡೆಡ್ಲಿ ಸ್ಪಾಟ್
ಜಕ್ಕೂರು ಮೇಲ್ಸೇತುವೆಯ ಬಿ.ಬಿ. ರಸ್ತೆಯಲ್ಲಿ 553 ಮೀಟರ್ ವ್ಯಾಪ್ತಿ ಹಾಗೂ ಪೀಣ್ಯ 8ನೇ ಮೈಲ್ನಿಂದ ನವಯುಗ ಟೋಲ್ ವರೆಗಿನ 3.4 ಕಿ.ಮೀ. ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಲ್ಲಿ ತಲಾ 37 ಆಕ್ಸಿಡೆಂಟ್ಗಳು ಸಂಭವಿಸಿ 17 ಮಂದಿ ದುರ್ಮರಣ ಹೊಂದಿದ್ದಾರೆ. ಈ ಭಾಗಗಳಲ್ಲಿ ಅತ್ಯಧಿಕ ವಾಹನಗಳು ಸಂಚರಿಸುತ್ತಿದ್ದು, ದ್ವಿಚಕ್ರ ವಾಹನಗಳೇ ಹೆಚ್ಚಾಗಿ ಇಲ್ಲಿ ಅಪಘಾತಕ್ಕೀಡಾ ಗುತ್ತಿರುವುದು ಆಘಾತಕಾರಿ ಯಾಗಿದೆ. ಇನ್ನು 64 ಬ್ಲ್ಯಾಕ್ಸ್ಪಾಟ್ಗಳಲ್ಲಿ 12 ಕಡೆಗಳಲ್ಲಿ 20ಕ್ಕೂ ಅಧಿಕ ರಸ್ತೆ ಅಪಘಾತ ಸಂಭವಿಸಿದೆ. ಉಳಿದ ಬ್ಲ್ಯಾಕ್ಸ್ಪಾಟ್ಗಳಲ್ಲಿ 20ಕ್ಕಿಂತ ಕಡಿಮೆ ರಸ್ತೆ ಅಪಘಾತ ಹಾಗೂ 10ಕ್ಕಿಂತ ಕಡಿಮೆ ಮಂದಿ ಮೃತಪಟ್ಟಿರುವುದು ವರದಿಯಾಗಿದೆ.
ಸವಾರರೇ, ಈ ರಸ್ತೆಗಳಲ್ಲಿ ಎಚ್ಚರಿಕೆಯಿಂದ ಸಂಚರಿಸಿ!
ಕೆಂಗೇರಿ- ಮಧು ಪೆಟ್ರೋಲ್ ಬಂಕ್
ಕಾಮಾಕ್ಷಿಪಾಳ್ಯ- ಚೌಡೇಶ್ವರಿ ಅಂಡರ್ಪಾಸ್-ಸುಮನಹಳ್ಳಿ
ಎಲೆಕ್ಟ್ರಾನಿಕ್ ಸಿಟಿ- ಕೊನ್ನಪ್ಪನ ಅಗ್ರಹಾರ
ಯಲಹಂಕ- ಜಕ್ಕೂರು ಮೇಲ್ಸೇತುವೆ ಬಿಬಿರಸ್ತೆ
ಪೀಣ್ಯ- ಎಸ್.ಎಂ.ಸರ್ಕಲ್
ಪೀಣ್ಯ- 8ನೇ ಮೇಲ್
ಹಲಸೂರು- ಕೋರಮಂಗಲ ಇನ್ನರ್ ರಿಂಗ್ ರಸ್ತೆ
ಏರ್ಪೋರ್ಟ್- ಜೆಪಿ ಮೊರ್ಗೆನ್
ಹೆಚ್ಚು ರಸ್ತೆ ಅಪಘಾತ ಸಂಭವಿಸುವ ಸ್ಥಳಗಳನ್ನು ಬ್ಲ್ಯಾಕ್ಸ್ಪಾಟ್ ಗಳೆಂದು ಪರಿಗಣಿಸಲಾ ಗುತ್ತದೆ. ಇಲ್ಲಿ ಅಪಘಾತ ಗಳನ್ನು ನಿಯಂತ್ರಿ ಸಲು ಸೂಕ್ತ ಕ್ರಮ ಕೈಗೊಳ್ಳ ಲಾಗು ವುದು. ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿದರೆ ಹೆಚ್ಚಿನ ರಸ್ತೆ ಅಪಘಾತ ನಿಯಂತ್ರಿಸಲು ಸಹಕಾರಿ. ●ಎಂ.ಎನ್.ಅನುಚೇತ್, ಜಂಟಿ ಪೊಲೀಸ್ ಆಯುಕ್ತ, ಬೆಂಗಳೂರು ಸಂಚಾರ ವಿಭಾಗ
-ಅವಿನಾಶ ಮೂಡಂಬಿಕಾನ