Advertisement
ಜೀವನಶೈಲಿ: ಅಸ್ತಮಾ ರೋಗಿಗಳು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ, ಯೋಗಾಭ್ಯಾಸ, ದೀರ್ಘ ಉಸಿರಾಟ ಕ್ರಿಯೆ, ಪ್ರಾಣಾಯಾಮ ಮಾಡಿದರೆ ಒಳ್ಳೆಯದು. ಸೂರ್ಯನ ಎಳೆ ಬಿಸಿಲಿಗೆ ಮೈಯೊಡ್ಡಿ ನಿಲ್ಲುವುದರಿಂದ ಶೀತ,ಅಲರ್ಜಿ,ಉಸಿರಾಟದ ತೊಂದರೆಗಳಿಗೆ ವಿರಾಮ ಸಿಗುವುದು.
ಅಸ್ತಮಾದಿಂದ ಬಳಲುವವರು ಚಳಿಗಾಲದಲ್ಲಿ ಬಹಳಷ್ಟು ಎಚ್ಚರ ವಹಿಸಬೇಕು. ದಪ್ಪನೆಯ ಉಣ್ಣೆ ಬಟ್ಟೆಗಳನ್ನು ಧರಿಸಬೇಕು. ಯಾವಾಗಲೂ ಸಾಕÕ… ಹಾಕಿಕೊಂಡು ಪಾದಗಳನ್ನು ಬೆಚ್ಚಗಿರಿಸಬೇಕು. ಹೆಚ್ಚು ಶೀತಗಾಳಿಯಲ್ಲಿ ಸಂಚರಿಸಬಾರದು. ಶೀತ, ಅಲರ್ಜಿಕಾರಕ ಆಹಾರಗಳಿಂದ ಆದಷ್ಟೂ ದೂರವಿರಿ. ಯಾವುದನ್ನು ಸೇವಿಸಬಾರದು?
ಅತಿ ತಂಪಾದ ಪಾನೀಯ, ಐಸ್‌ಕ್ರೀಮ್, ಚಾಕೊಲೇಟ್‌ಗಳಿಂದ ದೂರವಿದ್ದರೆ ಒಳಿತು. ಇಂಥದ್ದೇ ಆಹಾರ ತಿನ್ನಬೇಕು ಎಂದೇನೂ ಇಲ್ಲ. ವಾರದಲ್ಲಿ ಒಂದು ದಿನವಾದರೂ ಉಪವಾಸ ಮಾಡಿದರೆ ಒಳ್ಳೆಯದು. ಚಯಾಪಚಯ ಕ್ರಿಯೆ ಸರಿ ಇರುವಂತೆ, ಮಲಬದ್ಧತೆ ಆಗದಂತೆ ನೋಡಿಕೊಳ್ಳಬೇಕು.ವಿಟಮಿನ್ ಡಿ ಹಾಗೂ ವಿಟಮಿನ್ ಸಿ ಇರುವ ಆಹಾರವನ್ನು ಹೆಚ್ಚು ಸೇವಿಸಬೇಕು.
Related Articles
-ಜೇನು- ರಾತ್ರಿ ಮಲಗುವ ಮುನ್ನ 1-2 ಚಮಚ ಜೇನು ಸೇವಿಸುವುದು ಅಸ್ತಮಾಕ್ಕೆ ರಾಮಬಾಣ.
-ತುಳಸಿ- ತುಳಸಿ ರಸದೊಂದಿಗೆ ಜೇನು ಮಿಶ್ರಣ ಮಾಡಿ ದಿನಕ್ಕೆ 2-3 ಬಾರಿ ಸೇವಿಸುವುದರಿಂದ ಉಸಿರಾಡಲು ಆರಾಮವಾಗುತ್ತದೆ.
-ಶುಂಠಿ- ಒಂದು ಲೋಟ ನೀರಿಗೆ ಶುಂಠಿ ತುಂಡುಗಳನ್ನು ಹಾಕಿ ಕುದಿಸಿ ಕುಡಿದರೆ ಎದೆ ಬಿಗಿತ ಕಡಿಮೆಯಾಗುತ್ತದೆ. ತುಳಸಿ ರಸ, ಜೇನು, ಶುಂಠಿ ರಸ ಮಿಶ್ರಣ ಮಾಡಿ ಕುಡಿಯುವುದರಿಂದಲೂ ಕಫ ನಿವಾರಣೆಯಾಗುತ್ತದೆ.
-ಅರಿಶಿನ- ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಕುದಿಸಿದ ನೀರಿಗೆ ಚಿಟಿಕೆ ಅರಿಶಿನ ಹಾಕಿ ಕುಡಿದರೆ, ರಾತ್ರಿ ಅರಿಶಿನ ಹಾಕಿದ ಹಾಲು ಕುಡಿದರೆ ಶ್ವಾಸ ಸಂಬಂಧಿ ರೋಗಗಳು ಗುಣವಾಗುತ್ತವೆ.
-ಬೆಳ್ಳುಳ್ಳಿ- ಕಾಲು ಗ್ಲಾಸ್ ಹಾಲಿಗೆ 4-5 ಬೆಳ್ಳುಳ್ಳಿ ಎಸಳು, ಸ್ವಲ್ಪ ಸಕ್ಕರೆ ಹಾಕಿ ಕುದಿಸಿ ಕುಡಿದರೆ ಶ್ವಾಸಕೋಶದ ಸ್ವತ್ಛ ಕಾರ್ಯ ನಡೆಯುತ್ತದೆ.
-ವೀಳ್ಯದೆಲೆ- ಸಮ ಪ್ರಮಾಣದಲ್ಲಿ ಶುಂಠಿ ರಸ, ಬೆಳ್ಳುಳ್ಳಿ ರಸ ಹಾಗೂ ವೀಳ್ಯದೆಲೆ ರಸವನ್ನು ಮಿಶ್ರಣ ಮಾಡಿ ಸೇವಿಸಿದರೆ ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ.
– ಮೋಸಂಬಿ, ಲಿಂಬೆ, ಪಪ್ಪಾಯ, ಬಸಳೆ, ಟೊಮೆಟೋ,ಕ್ಯಾರೆಟ…, ಕಿತ್ತಳೆ, ಕಿವಿ, ದ್ರಾಕ್ಷಿ, ಸೀಬೆ ಹಣ್ಣುಗಳು ಸಹ ಶ್ವಾಸಕೋಶದ ಚಟುವಟಿಕೆಗಳನ್ನು ಉತ್ತಮಗೊಳಿಸಿ ಅಸ್ತಮಾವನ್ನು ನಿಯಂತ್ರಿಸುವಲ್ಲಿ ಸಹಕಾರಿ.
Advertisement
-ಡಾ. ಶ್ರೀಲತಾ ಪದ್ಯಾಣ